* ತುಂಬಿದ ಕೊಡ ತುಳುಕುವುದಿಲ್ಲ: ಸಿದ್ದು ವಿರುದ್ಧ ರವಿ ವ್ಯಂಗ್ಯ
* ರಾಜ್ಯದಲ್ಲಿ ಕಾಂಗ್ರೆಸ್ ಕಾಲದಲ್ಲಿ ‘ಅನ್ನಭಾಗ್ಯ’ ಯೋಜನೆಗೆ ಕೇಂದ್ರದ ಶೇ.90 ಹಣ
* ಎರಡೂವರೆ ವರ್ಷಗಳ ಕಾಲ 84 ಕೋಟಿ ಜನರಿಗೆ ಉಚಿತವಾಗಿ ರೇಷನ್ ಕೊಟ್ಟ ಪ್ರಧಾನಿ ಮೋದಿ
ಚಿಕ್ಕಮಗಳೂರು(ಮೇ.19): ಓರ್ವ ಮಾಜಿ ಮುಖ್ಯಮಂತ್ರಿ ಎಲ್ಲದಕ್ಕೂ ನಾನು ಕೊಟ್ಟೆ, ನಾನು ಕೊಟ್ಟೆ ಎಂದು ಹೇಳಿಕೊಳ್ಳುತ್ತಿದ್ದರೂ, ತುಂಬಿದ ಕೊಡ ಎಂದೂ ತುಳುಕುವುದಿಲ್ಲ. ಅರ್ಧಂಬರ್ಧ ಇದ್ದವೇ ಹೆಚ್ಚು ಅಲುಗಾಡುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರೇಳದೇ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.
ನಗರದ ಎಐಟಿ ಕಾಲೇಜಿನಲ್ಲಿ ಬುಧವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎರಡೂವರೆ ವರ್ಷಗಳ ಕಾಲ 84 ಕೋಟಿ ಜನರಿಗೆ ಉಚಿತವಾಗಿ ರೇಷನ್ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಎಂದಾದರೂ ನಾನು ಕೊಟ್ಟೆ, ನಾನು ಕೊಟ್ಟೆ ಎಂದು ಎದೆ ಬಡಿದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.
ಆಜಾನ್-ಸುಪ್ರಭಾತ ವಿವಾದ: ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ಕೊಟ್ಟ ಸಿಟಿ ರವಿ
ರಾಜ್ಯದಲ್ಲಿ ಕಾಂಗ್ರೆಸ್ ಕಾಲದಲ್ಲಿ ‘ಅನ್ನಭಾಗ್ಯ’ ಯೋಜನೆಗೆ ಕೇಂದ್ರ ಶೇ.90 ಹಣ ನೀಡುತ್ತಿತ್ತು. ಅಂದರೆ, ಒಟ್ಟು .32ನಲ್ಲಿ .29 ಬಿಜೆಪಿ ನೇತೃತ್ವದ ಕೇಂದ್ರದ್ದು, .3 ಮಾತ್ರ ರಾಜ್ಯದ್ದು. .29 ಕೊಟ್ಟವರು ನಾನು ಕೊಟ್ಟೆನಾನು ಕೊಟ್ಟೆಎಂದು ಹೇಳಲೇ ಇಲ್ಲಾ. .3 ಕೊಟ್ಟವರು ನಾನು ಕೊಟ್ಟೆ ನಾನು ಕೊಟ್ಟೆ ಎಂದು ಹೇಳುತ್ತಿದ್ದರು ಎಂದು ವ್ಯಂಗ್ಯವಾಡಿದರು.