ಎಂಇಎಸ್ ಬೇಡಿಕೆ ಪೂರೈಕೆಗೆ ಕಾಂಗ್ರೆಸ್ ಅಂಜಲಿಗೆ ಟಿಕೆಟ್ ನೀಡಿದೆ- ಬಿಜೆಪಿ ಆರೋಪ

By Ravi Janekal  |  First Published Apr 19, 2024, 12:07 AM IST

ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಕಣಕ್ಕಿಳಿದಿರುವ ಎಂಇಎಸ್ ಅಭ್ಯರ್ಥಿಗಳು, ಕಾರವಾರ, ಹಳಿಯಾಳ, ಜೊಯಿಡಾ, ದಾಂಡೇಲಿ, ಬೆಳಗಾವಿ, ಬೀದರ್ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಯನ್ನು ವಿರೋಧಿಸದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್, ಅವರ ಸಾಂವಿಧಾನಿಕ ಹಕ್ಕು ಎಂದು ಪರೋಕ್ಷ ಬೆಂಬಲ ನೀಡಿದ್ದರು. 


ಉತ್ತರಕನ್ನಡ (ಏ.19) ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಕಣಕ್ಕಿಳಿದಿರುವ ಎಂಇಎಸ್ ಅಭ್ಯರ್ಥಿಗಳು, ಕಾರವಾರ, ಹಳಿಯಾಳ, ಜೊಯಿಡಾ, ದಾಂಡೇಲಿ, ಬೆಳಗಾವಿ, ಬೀದರ್ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಯನ್ನು ವಿರೋಧಿಸದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್, ಅವರ ಸಾಂವಿಧಾನಿಕ ಹಕ್ಕು ಎಂದು ಪರೋಕ್ಷ ಬೆಂಬಲ ನೀಡಿದ್ದರು. 

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್(Congress candidate anjali nimbalkar) ಎಂಇಎಸ್ ಬಗ್ಗೆ ಮೃಧು ಧೋರಣೆ ಬಗ್ಗೆ ಉತ್ತರಕನ್ನಡ ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.‌

Tap to resize

Latest Videos

undefined

ಕಾರವಾರ, ಹಳಿಯಾಳ, ಜೊಯಿಡಾ, ಬೆಳಗಾವಿ, ಬೀದರ್ ಅನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಧ್ವನಿ ಬರಲೆಂದೇ ಅಂಜಲಿ ನಿಂಬಾಳ್ಕರ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಂಜಲಿ ನಿಂಬಾಳ್ಕರ್ ಮೃಧು ಧೋರಣೆ ಕರ್ನಾಟಕದ ಜನರ‌ ಭಾವನೆಯ ಮೇಲೆ ಪ್ರಹಾರ ಮಾಡಿದಂತೆ.‌‌ ಉತ್ತರಕನ್ನಡ ಲೋಕಸಭಾ ಕ್ಷೇತ್ರ(Uttara Kannada Lok sabha constituency)ದ ಜನರು ಖಂಡಿತಾ ಅವರಿಗೆ ಬುದ್ಧಿ ಕಲಿಸುತ್ತಾರೆ. ಎಂಇಎಸ್ ಬೇಡಿಕೆಗಳಿಗೆ ನಮ್ಮ ವಿರೋಧವಿದೆ. ಒಡೆಯೋದು ಏನಿದ್ರೂ ಕಾಂಗ್ರೆಸ್ ಕೆಲಸ.‌ ಕನ್ನಡ ನಾಡಿನ ಅಸ್ಮಿತೆಗೆ ಧಕ್ಕೆ ತರುವ ಯಾವ ಕೆಲಸವನ್ನೂ ಬಿಜೆಪಿ ವಿರೋಧಿಸುತ್ತದೆ ಎಂದು ಕಿಡಿ ಕಾರಿದ್ದಾರೆ.

Lok sabha election 2024: ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್‌ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲೇ ವಿರೋಧ!

click me!