ಎಚ್‌ಡಿಕೆಗೆ ದಾಖಲೆ ಕೇಳಿದ್ದಕ್ಕೆ ಜೆಡಿಎಸ್ ಕಾರ್ಯಕರ್ತನಿಂದ ಕಾಂಗ್ರೆಸ್ ವಕ್ತಾರರಿಗೆ ಬೆದರಿಕೆ

By Girish GoudarFirst Published Oct 29, 2023, 9:27 AM IST
Highlights

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಅವರಿಗೆ ಜೆಡಿಎಸ್ ಕಾರ್ಯಕರ್ತನೊಬ್ಬ ಆವಾಜ್ ಹಾಕಿದ ಆಡಿಯೋ ವೈರಲ್ ಆಗಿದೆ. ದೂರವಾಣಿ ಕರೆಯಲ್ಲಿ ಕುಮಾರಸ್ವಾಮಿ ಬಗ್ಗೆ ಮಾತನಾಡದಂತೆ ಆವಾಜ್ ಹಾಕಲಾಗಿದೆ. ಈ ಸಂಬಂಧ ಎಚ್‌ಡಿಕೆ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ನೀಡಿದ ಎಂ.ಲಕ್ಷ್ಮಣ್‌ 

ಮೈಸೂರು(ಅ.29):  ಜೆಡಿಎಸ್ ಕಾರ್ಯಕರ್ತನೋರ್ವ ಕಾಂಗ್ರೆಸ್ ವಕ್ತಾರರಿಗೆ ಬೆದರಿಕೆ ಹಾಕಿದ ಆರೋಪವೊಂದು ಕೇಳಿ ಬಂದಿದೆ. ಹೌದು, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. 

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಅವರಿಗೆ ಜೆಡಿಎಸ್ ಕಾರ್ಯಕರ್ತನೊಬ್ಬ ಆವಾಜ್ ಹಾಕಿದ ಆಡಿಯೋ ವೈರಲ್ ಆಗಿದೆ. ದೂರವಾಣಿ ಕರೆಯಲ್ಲಿ ಕುಮಾರಸ್ವಾಮಿ ಬಗ್ಗೆ ಮಾತನಾಡದಂತೆ ಆವಾಜ್ ಹಾಕಲಾಗಿದೆ. ಈ ಸಂಬಂಧ ಎಚ್‌ಡಿಕೆ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಂ.ಲಕ್ಷ್ಮಣ್‌ ಅವರು ದೂರು ನೀಡಿದ್ದಾರೆ. 

ಜೆಡಿಎಸ್ ಜೊತೆ ಮೈತ್ರಿಯಾದ್ರೆ ನಮ್ಮ ಹಕ್ಕು ಬಿಟ್ಟು ಕೊಡುವ ಸಂದರ್ಭ ಬರೋದಿಲ್ಲ: ಸಿ.ಟಿ.ರವಿ

ಬೆದರಿಕೆ ಹಾಕಿ, ನಮ್ಮ ಮನೆಗೆ ಮುತ್ತಿಗೆ ಹಾಕಲು ಮತ್ತು ಒಂಟಿಯಾಗಿದ್ದಾಗ ಅಟ್ಯಾಕ್ ಮಾಡುತ್ತೇವೆಂದಿದ್ದಾರೆ ಎಂದು ಎಂ.ಲಕ್ಷ್ಮಣ್‌ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್‌ರಿಗೆ ಲಕ್ಷ್ಮಣ್‌ ದೂರು ನೀಡಿದ್ದಾರೆ. 

ದಿನಾಂಕ 26 ಮತ್ತು 27 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದು ಆಧಾರ ರಹಿತ ಎಂದು ಎಂ.ಲಕ್ಷ್ಮಣ್‌ ಅವರು ಹೇಳಿದ್ದರು. ಕುಮಾರಸ್ವಾಮಿಯವರ ಆರೋಪಗಳಿಗೆ ಎಂ ಲಕ್ಷ್ಮಣ್ ಸ್ಪಷ್ಟೀಕರಣ ದಾಖಲೆ ಕೇಳಿದ್ದರು. ದಾಖಲೆ ಕೇಳಿದ್ದಕ್ಕೆ ಎಚ್‌ಡಿಕೆ ಅಭಿಮಾನಿಗಳು ಎಂ.ಲಕ್ಷ್ಮಣ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. 

click me!