ಕಾಂಗ್ರೆಸ್ ರಕ್ಷಿಸಬೇಕಾದ್ರೆ, ರಾಹುಲ್, ಪ್ರಿಯಾಂಕರನ್ನು ಹೊರಹಾಕಿ!

By Santosh NaikFirst Published Apr 5, 2022, 8:06 PM IST
Highlights

ದೇಶದಲ್ಲಿ ಕಾಂಗ್ರೆಸ್ ಅನ್ನು ರಕ್ಷಿಸಬೇಕಾದರೆ, ಏನು ಮಾಡಬೇಕು ಎನ್ನುವ ಪ್ರಶ್ನೆಗೆ, ತಮಿಳುನಾಡು ಕಾಂಗ್ರೆಸ್ ಪಕ್ಷದ ವಕ್ತಾರ, ಸೋನಿಯಾ ಗಾಂಧಿ ಪಕ್ಷವನ್ನು ಮುನ್ನಡೆಸುವುದರ ಜೊತೆಗೆ ಅವರ ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೊರಗಿರಬೇಕು ಎಂದು ಹೇಳಿದ್ದರು.

ಚೆನ್ನೈ (ಏ.5): ‘ಕಾಂಗ್ರೆಸ್ ಪಕ್ಷವನ್ನು ಉಳಿಸಲು’ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಪಕ್ಷದ ನಾಯಕತ್ವದಿಂದ ಹಿಂದೆ ಸರಿಯಬೇಕು ಎಂದು ಸಲಹೆ ನೀಡಿದ ಕಾಂಗ್ರೆಸ್ ವಕ್ತಾರರನ್ನು( Tamil Nadu Congress Spokesperson) ತಮಿಳುನಾಡಿನಲ್ಲಿ ವಜಾ ಮಾಡಲಾಗಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸದಸ್ಯರಾದ ಅಮೇರಿಕಾಯ್ ವಿ ನಾರಾಯಣನ್ (Americai V Narayanan ) ಅವರು ಮಮತಾ ಬ್ಯಾನರ್ಜಿ (Mamata Banerjee), ಜಗನ್ ಮೋಹನ್ ರೆಡ್ಡಿ (Jagan Mohan Reddy ) ಮತ್ತು ಕೆ ಚಂದ್ರಶೇಖರ ರಾವ್ ( K Chandrasekhara Rao) ಅವರಂತಹ ಪಕ್ಷದ ಹಿರಿಯರು ಪಕ್ಷಕ್ಕೆ ಮರಳಬೇಕು ಮತ್ತು ಕಾಂಗ್ರೆಸ್‌ನಲ್ಲಿ ಜನರ ವಿಶ್ವಾಸವನ್ನು ಪುನಃಸ್ಥಾಪಿಸಬೇಕು ಎಂದು ಹೇಳಿದ್ದರು.. "ಭಾರತದ ಜನರ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು, ಮಮತಾ ಬ್ಯಾನರ್ಜಿ, ಜಗನ್ ಮೋಹನ್ ರೆಡ್ಡಿ, ಶರದ್ ಪವಾರ್, ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರಂತಹ ಟ್ರ್ಯಾಕ್ ರೆಕಾರ್ಡ್ ಅನ್ನು ಸಾಬೀತುಪಡಿಸಿದ ಮಾಜಿ ಕಾಂಗ್ರೆಸ್ ನಾಯಕರನ್ನು ಕರೆತಂದು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ವಿನಂತಿಸಿಕೊಳ್ಳಬೇಕು"  ನಾರಾಯಣನ್ ಅವರು ಸಲಹೆ ನೀಡಿದ್ದರು.

"ಇದು ಹೊರಗಿನವರು ಮತ್ತು ಮಿತ್ರಪಕ್ಷಗಳಲ್ಲಿ ಕಾಂಗ್ರೆಸ್ ಮತ್ತೆ ಗಟ್ಟಿಯಾಗಿ ನಿಲ್ಲುತ್ತದೆ ಎಂಬ ವಿಶ್ವಾಸವನ್ನು ನೀಡುತ್ತದೆ. ಒಮ್ಮೆ ಈ ಗ್ರಹಿಕೆ ಬಂದರೆ, ಅಧಿಕಾರ ಬರುತ್ತದೆ ಮತ್ತು ಹಣ ಕೂಡ ಬರುತ್ತದೆ. ಮಮತಾ ಬ್ಯಾನರ್ಜಿ ಅವರೊಬ್ಬರು ಹಿಂತಿರುಗಿದರೆ, ಅವರು ಇತರರಿಗೆ ಮನವರಿಕೆ ಮಾಡುತ್ತಾರೆ" ಎಂದು ಹೇಳಿದ್ದರು. ನಾರಾಯಣನ್ ಅವರು ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ಸಾರ್ವಜನಿಕವಾಗಿ ಮಾತನಾಡುವ ದಕ್ಷಿಣ ಭಾರತದ ಅಪರೂಪದ ನಾಯಕರಾಗಿದ್ದಾರೆ. ಆದರೆ, ಎರಡು ವರ್ಷಗಳ ಹಿಂದೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಕಾಂಗ್ರೆಸ್ ನಲ್ಲಿ ತಳ ಮಟ್ಟದಿಂದಲೇ ಬದಲಾವಣೆಯಾಗಬೇಕು ಎಂದ ಜಿ-23 ಅಥವಾ ಭಿನ್ನಮತೀಯ ನಾಯಕರ ಗುಂಪಿನ ಭಾಗವಾಗಿರಲಿಲ್ಲ.

ಮಮತಾ ಬ್ಯಾನರ್ಜಿಯವರು ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವುದನ್ನು ಒಪ್ಪುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಾರಾಯಣನ್ ಅವರು,"ತೃಣಮೂಲ ಪಕ್ಷದಲ್ಲಿದ್ದರೆ, ಅವರಿಗೆ ಪ್ರಧಾನಿ ಆಗುವ ಸಾಧ್ಯತೆಗಳು ಕಡಿಮೆ. ಅದೇ ಕಾಂಗ್ರೆಸ್ ಪಕ್ಷದಲ್ಲಿದ್ದರೆ ಅವರಿಗೆ ಈ ಅವಕಾಶವಿದೆ' ಎಂದು ಹೇಳಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅನ್ನು ರಕ್ಷಿಸಬೇಕಾದರೆ, ಏನು ಮಾಡಬೇಕು ಎನ್ನುವ ಪ್ರಶ್ನೆಗೆ, ತಮಿಳುನಾಡು ಕಾಂಗ್ರೆಸ್ ಪಕ್ಷದ ವಕ್ತಾರ ಕೂಡ ಆಗಿರುವ ಅವರು, ಸೋನಿಯಾ ಗಾಂಧಿ ಪಕ್ಷವನ್ನು ಮುನ್ನಡೆಸುವುದರ ಜೊತೆಗೆ ಅವರ ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೊರಗಿರಬೇಕು ಎಂದು ಹೇಳಿದ್ದರು.

ಬದಲಾವಣೆಗಾಗಿ 3 ತಿಂಗಳು ಕಾಯಿರಿ: G-23 ಗುಂಪಿಗೆ ಸೋನಿಯಾ ಗಾಂಧಿ ಸೂಚನೆ

"ನಾನು ರಾಹುಲ್ ಗಾಂಧಿಯನ್ನು ಇಷ್ಟಪಡುತ್ತೇನೆ. ಆದರೆ ದುರದೃಷ್ಟವಶಾತ್, ಅವರು ನಿರ್ವಹಣೆಯಲ್ಲಿ ಇದನ್ನು ತೋರಿಸಿಲ್ಲ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಉನ್ನತ ಸ್ಥಾನಕ್ಕೇರಿದ ದಾಖಲೆ ಇದೆ. ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವ ಏಕೈಕ ಅಧಿಕಾರ ಸೋನಿಯಾ ಗಾಂಧಿಯವರಿಗೆ ಇರಬೇಕು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದಿಂದ ಹಿಂದೆ ಸರಿಯಬೇಕೆಂದು ವಿನಂತಿಸುತ್ತೇನೆ' ಎಂದು ತಮಿಳುನಾಡು ಕಾಂಗ್ರೆಸ್ ನಾಯಕ ಹೇಳಿದ್ದರು.

Congress Meet ಬಂಡಾಯ ಶಮನಕ್ಕೆ ಸೋನಿಯಾ ಯತ್ನ, ಜಿ23 ನಾಯಕರ ಜೊತೆ ಸಭೆ!

ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್, ಪಂಜಾಬ್ ರಾಜ್ಯವನ್ನು ಕಳೆದುಕೊಂಡಿದ್ದು ಮಾತ್ರವಲ್ಲ. ಜನರ ವಿಶ್ವಾಸ ಪಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸೋಲಿನ ಬಳಿಕ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ರಾಜೀನಾಮೆ ನೀಡಲು ಮುಂದಾದರು, ಆದರೆ ಈ ಸಲಹೆಯನ್ನು ಪಕ್ಷವು ತಿರಸ್ಕರಿಸಿತ್ತು.

click me!