ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಸರ್ಕಾರ ಎಲ್ಲಿದೆ ಎಂದು ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ನವರು ವಾಸ್ತವಾಂಶಕ್ಕೆ ಆದ್ಯತೆ ನೀಡಿ ಸರ್ಕಾರ ನಡೆಸಲಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇಂದಿಲ್ಲಿ ಸಲಹೆ ನೀಡಿದರು.
ತುಮಕೂರು (ಸೆ.18): ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಸರ್ಕಾರ ಎಲ್ಲಿದೆ ಎಂದು ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ನವರು ವಾಸ್ತವಾಂಶಕ್ಕೆ ಆದ್ಯತೆ ನೀಡಿ ಸರ್ಕಾರ ನಡೆಸಲಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇಂದಿಲ್ಲಿ ಸಲಹೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋಮು ಗಲಭೆಗಳು ನಡೆಯುತ್ತಿವೆ. ಏಕೆ ಈ ರೀತಿಯ ಘಟನೆಗಳಾಗುತ್ತಿವೆ ಎಂಬ ಬಗ್ಗೆ ಸರ್ಕಾರ ನಡೆಸುತ್ತಿರುವವರು ಚಿಂತನೆ ನಡೆಸಬೇಕು. ಭಾರತದಲ್ಲಿ ಕರ್ನಾಟಕ ಮೇಲ್ಪಂಕ್ತಿಯಲ್ಲಿರಬೇಕು ಎಂಬ ಬಗ್ಗೆ ಕಾಂಗ್ರೆಸ್‌ನವರಿಗೆ ಚಿಂತನೆ ಇದ್ದರೆ ಈ ರೀತಿಯ ಗಲಾಟೆ, ಗಲಭೆಗಳಿಗೆ ಅವಕಾಶ ನೀಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದರು.
ನಾಗಮಂಗಲದ ರೀತಿಯಲ್ಲಿ 2023ರಲ್ಲಿ ಘಟನೆಯಾಗಿತ್ತು. ಈಗ ಮತ್ತೆ ಮರುಕಳಿಸಿದೆ. ನಿಷೇಧಿತ ಸಂಘಟನೆಗಳು ಮುನ್ನಲೆಗೆ ಬರುತ್ತಿವೆ ಎಂದರೆ ಏನು ಅರ್ಥ ಎಂದು ಅವರು ಪ್ರಶ್ನಿಸಿದರು. ರಾಜ್ಯದಲ್ಲಿ ಹಾಲಿನ ದರವನ್ನು 5 ರೂ. ಹೆಚ್ಚಳ ಮಾಡಿ ಆ ಮೊತ್ತವನ್ನು ರೈತರಿಗೆ ನೂರಕ್ಕೆ ನೂರರಷ್ಟು ಕೊಡುವುದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ರೈತರ ನೆಪದಲ್ಲಿ ದರ ಹೆಚ್ಚಳ ಮಾಡಿ ಆ ಹಣವನ್ನು ಭಾಗ್ಯಗಳಿಗೆ ಉಪಯೋಗಿಸಿಕೊಂಡರೆ ಅದನ್ನು ನಾವು ವಿರೋಧಿಸುತ್ತೇವೆ ಎಂದು ಅವರು ತಿಳಿಸಿದರು.
undefined
ಅ.4ರಿಂದ ಗ್ರಾಮ ಪಂಚಾಯತ್ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ!
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸುಳ್ಳು ಹೇಳಲು ಆಗುತ್ತಿಲ್ಲ. ಈ ಹಿಂದೆ 5 ವರ್ಷ ಆಡಳಿತ ನಡೆಸಿದಂತೆ ಈಗ ಅವರಿಂದ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಜನಪರ ಕಾರ್ಯಕ್ರಮಗಳಿಗೆ ಧಕ್ಕೆಯಾಗುತ್ತಿದೆ. ಅಂದಿನ ಸಿದ್ದರಾಮಯ್ಯನವರೇ ಬೇರೆ, ಇವತ್ತಿನ ಸಿದ್ದರಾಮಯ್ಯನವರೇ ಬೇರೆ ಎಂದರು. ಹಳೇ ಸಿದ್ದರಾಮಯ್ಯನವರು ಈಗಿಲ್ಲ, ಹೊಸ ಸಿದ್ದರಾಮಯ್ಯನವರು ಈ ಸರ್ಕಾರದಲ್ಲಿ ಒದ್ದಾಡುತ್ತಿದ್ದಾರೆ ಎಂದ ಅವರು, ರಾಜ್ಯದ ಜನರ ಮುಂದೆ ನಿಜ ಸ್ವರೂಪವನ್ನು ಹೇಳಿ, ವಿನಾ ಕಾರಣ ಸುಳ್ಳು ಹೇಳುವುದು ಬೇಡ ಎಂದರು.
ರೈಲ್ವೆಗೆ ಮುಂದೆ ಯಾರು ಸಿಎಂ ಆಗ್ತಾರೋ ಅವರು ಕೊಡಬೇಕು: ಈಗ ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ ಅವರೋ, ಮುಂದೆ ಯಾರು ಆಗುತ್ತಾರೋ ಅವರೋ ಭೂಮಿ ಕೊಡಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ನಗರದ ಡಿಆರ್‌ಎಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಿರುವ ಭೂಮಿಯನ್ನು ಆಯಾ ರಾಜ್ಯ ಸರ್ಕಾರವೇ ನೀಡಬೇಕು. ಕಾಮಗಾರಿಯನ್ನು ರೈಲ್ವೆ ಇಲಾಖೆಯಿಂದಲೇ ನಡೆಸುತ್ತೇವೆ ಎಂದರು.
ಚಿಕ್ಕಮಗಳೂರು: ಸೌಲಭ್ಯ ಕಲ್ಪಿಸುವಂತೆ ಐವರು ಮಾಜಿ ನಕ್ಸಲರಿಂದ ಡಿಸಿ ಮೀನಾ ನಾಗರಾಜ್‌ಗೆ ಮನವಿ
ಸರ್ಕ್ಯೂಟ್ ಯೋಜನೆ ಸಂಬಂಧ ಅಗತ್ಯವಿರುವ ಭೂಮಿಯನ್ನು ಆಯಾ ರಾಜ್ಯ ಸರ್ಕಾರ ನೀಡಬೇಕು. ಆ ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಅಗತ್ಯ ಸಹಕಾರ ನೀಡಬೇಕು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಇದ್ದಾರೆ, ಮುಂದೆ ಯಾರು ಆಗುತ್ತಾರೋ ಅವರು ಭೂಮಿ ಕೊಡಬೇಕು ಎಂದರು. ಆಗ ಪಕ್ಕದಲ್ಲಿಯೇ ಕುಳಿತಿದ್ದ ಸಂಸದ ಯದುವೀರ್ ಅವರು, ಶಾಸಕ ಟಿ.ಎಸ್. ಶ್ರೀವತ್ಸ ಮುಖ ನೋಡಿದರು. ಯದುವೀರ್ ಪಕ್ಕ ಕುಳಿತಿದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೂಡ ಶ್ರೀವತ್ಸ ಮುಖ ನೋಡಿದಾಗ, ಶ್ರೀವತ್ಸ ನಕ್ಕರು.