* ಸ್ವಾಭಿಮಾನಿ ಕಾಂಗ್ರೆಸ್ ಬಳಗದ ಹೆಸರಿನಲ್ಲಿ ಬಂಡಾಯ
* ಬಂಡಾಯಗಾರರಿಂದ ಸಭೆ, ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
* ನಾವು ಅವಕಾಶವಾದಿ ರಾಜಕಾರಣ ಮಾಡುತ್ತಿಲ್ಲ
ಹಾನಗಲ್ಲ(ಅ.11): ಹಾನಗಲ್ಲ(Hanagal) ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮತ್ತೆ ಬಂಡಾಯದ ಅಲೆ ಎದ್ದಿದ್ದು, ಕಾಂಗ್ರೆಸ್‌ನ ಮುಂಚೂಣಿ ನಾಯಕರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿದ್ದಾರೆ.
ಬಹುದಿನಗಳಿಂದ ಹಾನಗಲ್ಲಿನಲ್ಲಿ ಜನಹಿತ ರಕ್ಷಣಾ ವೇದಿಕೆ ಸ್ಥಾಪಿಸಿ, ತಾಲೂಕಿನ ಜನರ ಮನಸ್ಸಿನಲ್ಲುಳಿದ ಕಾಂಗ್ರೆಸ್ ಟಿಕೆಟ್ ವಂಚಿತರಾದ ಜನಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಕೆ. ಮೋಹನಕುಮಾರ, ಇತ್ತೀಚೆಗೆ ಅವಿಶ್ವಾಸ ಮಂಡನೆಯಿಂದ ತಾಪಂ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಸಿದ್ದಪ್ಪ ಹಿರಗಪ್ಪನವರ, ಮನೋಹರ ತಹಶೀಲ್ದಾರ ಬಣದಲ್ಲಿ ಗುರುತಿಸಿಕೊಂಡಿದ್ದ ಪುರಸಭೆ ಸದಸ್ಯ ನಜೀರಸಾಬ್ ಸವಣೂರ, ವಕೀಲ ಸೋಮಶೇಖರ ಕೋತಂಬರಿ ಸೇರಿದಂತೆ ಆರು ಕಾಂಗ್ರೆಸ್ ಮುಖಂಡರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
undefined
ಶನಿವಾರ ಎಲ್ಲ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು(Rebel Candidates) ನೂರ್ ಅರ್ಮಾನ್ ಹಾಲ್‌ನಲ್ಲಿ ಸ್ವಾಭಿಮಾನಿ ಕಾಂಗ್ರೆಸ್ ಬಳಗದ ಹೆಸರಿನಲ್ಲಿ ಸಭೆ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು ಸೋಲಿಸುವ ಪಣ ತೊಟ್ಟಿದ್ದಾರೆ.
Hanagal Byelection| 'ಸಿಎಂ ಉದಾಸಿ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ'
ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವ 8ರಲ್ಲಿ 7 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದು, ಒಬ್ಬರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಶ್ರೀನಿವಾಸ ಮಾನೆ ಹಾನಗಲ್ಲ ತಾಲೂಕಿನಲ್ಲಿ ರಾಜಕೀಯ(Politics) ಪ್ರವೇಶಿಸಿದ ಆನಂತರ ನಮ್ಮನ್ನು ಕಡೆಗಣಿಸಿದ್ದಾರೆ. ಅಂಥವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ನಮ್ಮನ್ನು ಅವಮಾನಿಸಿದ್ದಾರೆ. ನಾವು ಅವಕಾಶವಾದಿ ರಾಜಕಾರಣ ಮಾಡುತ್ತಿಲ್ಲ. ಕಾಂಗ್ರೆಸ್ ತತ್ವ-ಸಿದ್ಧಾಂತಗಳನ್ನು ಅವಡಿಸಿಕೊಂಡಿದ್ದೇವೆ. ಈಗ ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವ 8 ಜನರಲ್ಲಿ 7 ಜನ ನಾಮಪತ್ರ ವಾಪಸ್ ಪಡೆದು, ಒಮ್ಮತದ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಿ ಚುನಾವಣಾ ಪ್ರಚಾರ(Election Campaign) ನಡೆಸಿ ಗೆಲ್ಲಿಸುತ್ತೇವೆ. ಎರಡು ದಿನಗಳಲ್ಲಿ ನಮ್ಮ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡುತ್ತೇವೆ ಎಂದು ಸ್ವಾಭಿಮಾನಿ ಕಾಂಗ್ರೆಸ್ ಬಳಗದ ನೇತೃತ್ವ ವಹಿಸಿಕೊಂಡಿರುವ ಜನಹಿತ ರಕ್ಷಣಾ ವೇದಿಕೆ(Janahita Rakshna Vedike) ಅಧ್ಯಕ್ಷ ಬಿ.ಕೆ. ಮೋಹನಕುಮಾರ ತಿಳಿಸಿದ್ದಾರೆ.
ಹಾನಗಲ್ಲ ಉಪಚುನಾವಣೆಗೆ(Byelection) ತಾಲೂಕಿನವರಿಗೆ ಈ ಬಾರಿ ಟಿಕೆಟ್‌ನೀಡಬೇಕೆಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್(Congress) ನಾಯಕರನ್ನು ಆಗ್ರಹಿಸಿದ್ದೆವು. ಆದಾಗ್ಯೂ ಕಾಂಗ್ರೆಸ್ ಹೈಕಮಾಂಡ್ ನಮ್ಮ ಭಾವನೆಗಳಿಗೆ ಸ್ಪಂದಿಸದೇ ನಮ್ಮ ಕನಸಿಗೆ ತಣ್ಣೀರೆರಚಿದೆ. ಹೀಗಾಗಿ ನಾವು ಬೇರೆಯವರಿಗೆ ಅವಕಾಶ ಮಾಡಿಕೊಡಲು ತಯಾರಿಲ್ಲ. ತಾಲೂಕಿನ ಮತದಾರರೂ ತಾಲೂಕಿನವರಿಗೆ ಮತದಾನ ಮಾಡುತ್ತಾರೆ ಎಂಬ ಭರವಸೆ ಇದೆ. ನಾವು ಕಾಂಗ್ರೆಸ್‌ನಲ್ಲಿದ್ದೇ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೋಮಶೇಖರ ಕೋತಂಬರಿ(Somashekhar Kotambari) ತಿಳಿಸಿದ್ದಾರೆ.