ಸಿದ್ದರಾಮಯ್ಯ-ಡಿಕೆಶಿ ಗೌಪ್ಯ ಚರ್ಚೆ : ಚುನಾವಣೆಗೆ ನಾವು ಸಿದ್ದವೆಂದ ನಾಯಕರು

By Kannadaprabha News  |  First Published Jun 11, 2021, 1:11 PM IST
  • ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭೇಟಿ
  • ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದ ಇಬ್ಬರು ನಾಯಕರು
  • ಚರ್ಚೆಯ ವಿಚಾರ ತಿಳಿಸಲು ಸಾಧ್ಯವಿಲ್ಲವೆಂದು ಡಿಕೆಶಿ

ಬೆಂಗಳೂರು (ಜೂ.11): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಇಂದು ಆಗಮಿಸಿ ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದ್ದಾರೆ. ಅಲ್ಲದೇ ಚರ್ಚೆಯ ವಿಚಾರ ತಿಳಿಸಲು ಸಾಧ್ಯವಿಲ್ಲವೆಂದು ಡಿಕೆಶಿ ಹೇಳಿದರು. 

 ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ  ನಡುವೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದ್ದು, ರಾಜ್ಯ ರಾಜಕೀಯ , ನಾಯಕತ್ವ ಬದಲಾವಣೆ ಪರಿಣಾಮದ ಬಗ್ಗೆ ಸುದೀರ್ಘ ಮಾತುಕತೆ ನಡೆಸಿರುವ ಸಾಧ್ಯತೆಗಳು ದಟ್ಟವಾಗಿದೆ. 
 
ಮಾತುಕತೆ ಬಳಿಕ ಸಿದ್ದರಾಮಯ್ಯ ನಿವಾಸದಿಂದ ಡಿಕೆಶಿ ತೆರಳಿದ್ದು ಬಳಿಕ ಪ್ರತಿಕ್ರಿಯಿಸಿದ ಅವರು ನಾನು ಸಿದ್ದರಾಮಯ್ಯ ಏನು ಮಾತನಾಡಿದ್ದೇವೆ ಹೇಳಲು ಸಾಧ್ಯವಿಲ್ಲ. ನಾವು ಚುನಾವಣೆಗೂ ಸಿದ್ದರಿದ್ದೇವೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದರು. 

Latest Videos

undefined

'ಯಡಿಯೂರಪ್ಪ ರಾಜೀನಾಮೆ ಹೇಳಿಕೆ ಮೇಲ್ನೋಟಕ್ಕೆ ನಾಟಕ' ...

ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್  ಟೀಮ್ ತೆರಳಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಟೀಮ್ ಕಳಿಸಲಾಗಿದೆ. ಅವರಿಗೆ ನೀಡಿರುವ ಕೆಲಸ ಮಾಡುತ್ತಿದ್ದಾರೆ. ಇನ್ನು  ಬಸವ ಕಲ್ಯಾಣದಲ್ಲಿ ಸೋಲಿಗೆ ಕಾರಣ ತಿಳಿಯಲು ಟೀಮ್ ಕಳಿಸುವ ವಿಚಾರವನ್ನೂ ಮುಂದೂಡಿದ್ದೇವೆ ಎಂದರು. 

ರಾಜ್ಯಕ್ಕೆ ಉಸ್ತುವಾರಿ ಸುರ್ಜೆವಾಲಾ ಆಗಮನದ ಬಗ್ಗೆ ಮಾತನಾಡಿದ ಡಿಕೆಶಿ,  ಏಳು ದಿನ ಸಭೆ ನಡೆಸಿದ್ದಾರೆ. ಸೋತವರು, ಮಾಜಿಗಳನ್ನ ಕರೆದು ಮಾತನಾಡಿದ್ದಾರೆ ಎಂದು ಡಿಕೆಶಿ ತಿಳಿಸಿದರು. 

ಸರ್ಕಾರ ವಿರುದ್ಧ ಸ್ಪೀಕರ್‌ ಕಾಗೇರಿಗೆ ಸಿದ್ದು ದೂರು

ವಿಜಯೇಂದ್ರ ಮಠಕ್ಕೆ ಭೇಟಿ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ಅವರ ಪಾರ್ಟಿ ಅವರು ಎಲ್ಲಿಗೆ ಬೇಕಾದರೂ ಹೋಗಲಿ. ಅವರು ಯಾರಿಗೆ ಬೇಕಾದರೂ ಪಾದ ಪೂಜೆ ಮಾಡಲಿ.  ನಾವು ಹೋದಾಗ ನಮಗೂ ಆಶೀರ್ವಾದ ಮಾಡುತ್ತಾರೆ. ನಾಯಕತ್ವ ಬದಲಾವಣೆ ಎನ್ನುವ ಊಹಾಪೋಹದ ಬಗ್ಗೆ ಕಾಯಲು ಆಗಲ್ಲ.  ಜನರ ಹೃದಯ ಗೆಲ್ಲೋಕೆ‌ ಹೊರಟಿದ್ದೇವೆ.  ಚುನಾವಣೆ ಗೆಲ್ಲೋಕೆ ನಾವು ರೆಡಿಯಾಗಿದ್ದೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

click me!