ಕಾಂಗ್ರೆಸ್ ಅಧ್ಯಕ್ಷ ಚುನಾವಣೆ, ಖರ್ಗೆ ವಿರುದ್ಧ ಸ್ಪರ್ಧಿಸಿದ ತರೂರ್ ಮೇಲೆ ಹೆಚ್ಚಿದ ಒತ್ತಡ

By Suvarna NewsFirst Published Oct 5, 2022, 5:07 PM IST
Highlights

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಹಲವು ನಾಟಕೀಯ ಬೆಳವಣಿಗೆ ಬಳಿಕ ಇದೀಗ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಕಣದಲ್ಲಿದ್ದು ಯಾರಿಗೆ ಒಲಿಯಲಿದೆ ಪಟ್ಟ ಅನ್ನೋ ಕುತೂಹಲ ಹೆಚ್ಚಾಗಿದೆ. ಇದರ ನಡುವೆ ಖರ್ಗೆ ಪರ ಹಿರಿಯ ನಾಯಕರ ಬೆಂಬಲ ಹೆಚ್ಚಾಗಿದ್ದರೆ, ತರೂರ್ ಪರ ಯುವ ನಾಯಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ತರೂರ್‌ ಮೇಲಿನ ಒತ್ತಡ ಹೆಚ್ಚಾಗಿದೆ.

ನವದೆಹಲಿ(ಅ.05) ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಹೈಕಮಾಂಡ್ ಲೆಕ್ಕಾಚಾರಗಳು ಉಲ್ಟಾ ಆಗುತ್ತಲೇ ಇದೆ. ಇದೀಗ ಅಂತಿಮ ಹಂತದಲ್ಲಿ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಕಣಕ್ಕಿಳಿದಿದ್ದಾರೆ. ಖರ್ಗೆಗೆ ಪ್ರತಿಸ್ಪರ್ಧಿಯಾಗಿರುವ ಶಶಿ ತರೂರ್ ಇದೀಗ ಹೈಕಮಾಂಡ್ ತಲೆನೋವು ಹೆಚ್ಚಿಸಿದ್ದಾರೆ.  ಚುನಾವಣಾ ನಾಪತ್ರ ಸಲ್ಲಿಕೆಗೂ ಮುನ್ನ ಎದ್ದ ಹಲವು ಸಮಸ್ಯೆಗಳನ್ನು ನಿವಾರಿಸಿದ ಕಾಂಗ್ರೆಸ್ ಹೈಕಮಾಂಡ್ ಇದೀಗ  ಅಧ್ಯಕ್ಷ ಚುನಾವಣೆ ಸುಗಮವಾಗಿ ನಡೆಯಲು ಹಲವು ಕಟ್ಟು ನಿಟ್ಟಿನ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಇತ್ತ ಖರ್ಗೆ ಪರ ಬೆಂಬಲ ಹೆಚ್ಚಾಗುತ್ತಿದೆ. ಕೇರಳ ಸೇರಿದಂತೆ ಹಲವು ಪ್ರದೇಶ ಕಾಂಗ್ರೆಸ್ ಖರ್ಗೆಗೆ ಬೆಂಬಲ ಸೂಚಿಸಿದೆ. ಇದರ ನಡುವೆ ಧೈರ್ಯದಿಂದ ಮುನ್ನುಗ್ಗುತ್ತಿರುವ ಶಶಿ ತರೂರ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಕುರಿತು ಶಶಿ ತರೂರ್ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಕೇಳಿಕೊಳ್ಳಿ ಎಂದು ರಾಹುಲ್ ಗಾಂಧಿ ಹೇಳಲಾಗಿತ್ತು. ಆದರೆ ಈ ಮನವಿಯನ್ನು ನಿರಾಕರಿಸಿದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಅತ್ಯವಶ್ಯಕ.ಎಂದು ರಾಹುಲ್ ಗಾಂಧಿ ಹೇಳಿದ್ದರು. 

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಸ್ಪರ್ಧಿಸಿರುವ ಶಶಿ ತರೂರ್ ಮಂಗಳವಾರ ಕೇರಳಕ್ಕೆ ಭೇಟಿ ನೀಡಿದ್ದಾರೆ. ಕೇರಳದಲ್ಲಿ ಅಧ್ಯಕ್ಷ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ತರೂರ್‌ಗೆ ಭಾರಿ ಹಿನ್ನಡೆಯಾಗಿತ್ತು. ಕಾರಣ ಕೇರಳ ಕಾಂಗ್ರೆಸ್ ಬಹಿರಂಗವಾಗಿ ಮಲ್ಲಿಕಾರ್ಜುನ ಖರ್ಗೆಗೆ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಈ ಮೂಲಕ ಗಾಂಧಿ ಕುಟುಂಬಕ್ಕೆ ನಿಷ್ಠೆ ಪ್ರದರ್ಶಿಸಿತ್ತು. ಆದರೆ ಕಾಂಗ್ರೆಸ್ ಯುವ ಕಾರ್ಯಕರ್ತರು, ನಾಯಕರು ತರೂರ್‌ನತ್ತ ಒಲವು ತೋರಿದ್ದಾರೆ. ಜಿ23 ನಾಯಕರಲ್ಲೂ ಇದೀಗ ಗೊಂದಲ ಸೃಷ್ಟಿಯಾಗಿದೆ. ಕೆಲವರು ಖರ್ಗೆ ಪರ ಬ್ಯಾಟ್ ಬೀಸಿದ್ದರೆ, ಮತ್ತೆ ಕೆಲವರು ತರೂರ್ ಪರ ಬ್ಯಾಟ್ ಬೀಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ತರೂರ್‌ಗೆ ಸ್ವಂತ ನಾಡಿನಿಂದ ಇಲ್ಲ ಬೆಂಬಲ!

ಕೇರಳದಲ್ಲಿ ಪ್ರಚಾರದಲ್ಲಿ ತೊಡಗಿರುವ ಶಶಿ ತರೂರ್, ತಮ್ಮ ಚುನಾವಣೆ ಸ್ಪರ್ಧೆ ಕುರಿತು ಮಾತನಾಡಿದ್ದಾರೆ. ರಾಹುಲ್ ಗಾಂಧಿ ಇತರ ನಾಯಕರ ಮೂಲಕ ಕಣದಿಂದ ಹಿಂದೆ ಸರಿಯಲು ಮನವಿ ಮಾಡಿದ್ದಾರೆ. ಆದರೆ ನನ್ನ ಬೆಂಬಲಿಸಿದ ಯಾರಿಗೂ ಮೋಸ ಮಾಡುವುದಿಲ್ಲ. ನಾನು ಸ್ಪರ್ಧಿಸುತ್ತೇನೆ. ನನಗೆ ಪಕ್ಷದದ ಹಿರಿಯ ನಾಯಕರು, ಗಾಂಧಿ ಕುಟುಂಬಕ್ಕೆ ನಿಷ್ಠೆಯಿಂದ ಇರುವ ನಾಯಕರು ಮತ ಹಾಕುವ ಭರವಸೆ ಇಲ್ಲ. ಆದರೆ ಸ್ಪರ್ಧಿಸುತ್ತೇನೆ ಎಂದು ತರೂರ್ ಹೇಳಿದ್ದಾರೆ.

ಕಣದಲ್ಲಿ ಖರ್ಗೆ, ತರೂರ್‌
ಕಾಂಗ್ರೆಸ್‌ ಅಧ್ಯಕ್ಷ ಹುದ್ದೆ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್‌ ಅವರ ನಾಮಪತ್ರಗಳು ಶನಿವಾರ ಅಂಗೀಕಾರವಾಗಿವೆ. ಆದರೆ ಜಾರ್ಖಂಡ್‌ನ ಮಾಜಿ ಸಚಿವ ಕೆ.ಎನ್‌. ತ್ರಿಪಾಠಿ ಸಲ್ಲಿಸಿದ್ದ ನಾಮಪತ್ರ ತಿರಸ್ಕಾರಗೊಂಡಿದೆ. ಇದರಿಂದಾಗಿ ಅಂತಿಮ ಕಣದಲ್ಲಿ ತರೂರ್‌ ಹಾಗೂ ಖರ್ಗೆ ಮಾತ್ರ ಉಳಿದಂತಾಗಿದೆ. ಶನಿವಾರ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಅವರ ನೇತೃತ್ವದಲ್ಲಿ ನಡೆದ ನಾಮಪತ್ರ ಪರಿಶೀಲನೆ ವೇಳೆ, ಖರ್ಗೆ ಅವರು ಸಲ್ಲಿಸಿದ್ದ 14 ಫಾರಂಗಳು ಹಾಗೂ ತರೂರ್‌ ಸಲ್ಲಿಸಿದ್ದ 5 ಫಾರಂಗಳು ಕ್ರಮಬದ್ಧವಾಗಿದ್ದು ಕಂಡುಬಂತು. ಹೀಗಾಗಿ ಇವುಗಳನ್ನು ಅಂಗೀಕರಿಸಲಾಯಿತು. ಆದರೆ ತ್ರಿಪಾಠಿ ಸಲ್ಲಿಸಿದ್ದ ನಾಮಪತ್ರದಲ್ಲಿ ದೋಷಗಳು ಕಂಡುಬಂದವು. ಒಬ್ಬ ಸೂಚಕರ ಸಹಿಯಲ್ಲಿ ವ್ಯತ್ಯಾಸ ಕಂಡುಬಂತು ಹಾಗೂ ಇನ್ನೊಬ್ಬ ಸೂಚಕರು ಎರಡೆರಡು ಸಲ ಸಹಿ ಹಾಕಿದ್ದರು. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು ಎಂದು ಮಿರ್ಜಿ ತಿಳಿಸಿದ್ದಾರೆ.

ರೈತರ ಹಿಂಸಿಸಲು ಚೀತಾ ತರಿಸಿದ ಬಿಜೆಪಿ, ಪಟೋಳೆ ವಿಚಿತ್ರ ಹೇಳಿಕೆಯಿಂದ ಪೇಚಿಗೆ ಸಿಲುಕಿದ ಕಾಂಗ್ರೆಸ್!
 

click me!