ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಬಿಜೆಪಿ ಮಾಜಿ ನಾಯಕ ಸ್ಪರ್ಧೆ, ಗೆಹ್ಲೋಟ್ ಪ್ಲಾನ್ ಸಕ್ಸಸ್!

Published : Sep 29, 2022, 04:51 PM IST
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಬಿಜೆಪಿ ಮಾಜಿ ನಾಯಕ ಸ್ಪರ್ಧೆ, ಗೆಹ್ಲೋಟ್ ಪ್ಲಾನ್ ಸಕ್ಸಸ್!

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರೇಸ್‌ನಲ್ಲಿ ಅಶೋಕ್ ಗೆಹ್ಲೋಟ್ ಚುನಾವಣೆಯಿಂದ ಹೊರಬಂದಿದ್ದಾರೆ. ಶಶಿ ತರೂರ್ ವಿರುದ್ಧ ಇದೀಗ ದಿಗ್ವಿಜಯ ಸಿಂಗ್ ಜೊತೆಗೆ ಬಿಜೆಪಿ ಮಾಜಿ ನಾಯಕ ಸ್ಪರ್ಧಿಸುತ್ತಿದ್ದಾರೆ.

ನವದೆಹಲಿ(ಸೆ.29): ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಕ್ಷದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ರಾಜಸ್ಥಾನ ಸಿಎಂ ಸ್ಥಾನ ಬಿಟ್ಟುಕೊಡಲು ನಿರಾಕರಿಸಿದ ಅಶೋಕ್ ಗೆಹ್ಲೋಟ್ ಭಾರಿ ತಂತ್ರದೊಂದಿದೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಹೊರಬಂದಿದ್ದಾರೆ. ಇಷ್ಟೇ ಅಲ್ಲ ರಾಜಸ್ಥಾನ ಸಿಎಂ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇತ್ತ  ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ತರೂರ್, ದಿಗ್ವಿಜಯ್ ಸಿಂಗ್ ಜೊತೆಗೆ ಮತ್ತೊರ್ವ ಹಿರಿಯ ಕಾಂಗ್ರೆಸ್ ನಾಯಕ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಎಂಟ್ರಿಕೊಟ್ಟಿದ್ದಾರೆ. ಜಾರ್ಖಂಡ್ ಮಾಜಿ ಶಾಸಕ ಕೆಎನ್ ತ್ರಿಪಾಠಿ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಪಡೆದುಕೊಂಡಿದ್ದಾರೆ. ಇದೀಗ ಮೂವರು ನಾಯಕರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಕೆಎನ್ ತ್ರಿಪಾಠಿ ಬಿಜೆಪಿ ಮಾಜಿ ನಾಯಕ. 2014ರಿಂದ 2019ರ ವರೆಗೆ ಪಶ್ಚಿಮ ಬಂಗಳಾದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮೋದಿ ಸರ್ಕಾರದಲ್ಲಿ ಗರ್ವನರ್ ಆಗಿದ್ದ ತ್ರಿಪಾಠಿ ಬಳಿಕ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಂಗ್ರಹಿಸಿದ್ದಾರೆ. 

ಶಶಿ ತರೂರ್(Shashi Tharoor) ಹಾಗೂ ದಿಗ್ವಿಜಯ್ ಸಿಂಗ್(Digvijay Singh) ನಡುವೆ ಇದೀಗ ಕೆಎನ್ ತ್ರಿಪಾಠಿ ಸೇರಿಕೊಂಡಿರುವುದು ಕಾಂಗ್ರೆಸ್(Congress) ತಲೆನೋವು ಹೆಚ್ಚಿಸಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿಕೊಂಡಿದ್ದ ಕೆಎನ್ ತ್ರಿಪಾಠಿ(KN Tripathi) ನೇರವಾಗಿ ಅಧ್ಯಕ್ಷಸ್ಥಾನಕ್ಕೆ(Congress President Election) ಸ್ಪರ್ಧಿಸುತ್ತಿರುವುದು ಮೂಲ ಕಾಂಗ್ರೆಸ್ಸಿಗರಿಗೆ ಅಸಮಾಧಾನ ತಂದಿದೆ. ಇತ್ತ ಕಣದಲ್ಲಿರುವ ಶಶಿ ತರೂರ್ ಹಾಗೂ ದಿಗ್ವಿಜಯ್ ಸಿಂಗ್ ಮೇಲೂ ಹೆಚ್ಚಿನವರಿಗೆ ಒಲವಿಲ್ಲ. ಇವರಿಬ್ಬರಲ್ಲಿ ಸದ್ಯದ ಆಯ್ಕೆ ಶಶಿ ತರೂರ್ ಅನ್ನೋ ಮಾತುಗಳು ಕೇಳಿಬಂದಿದೆ. 

 

ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಉತ್ಸುಕ?

ರಾಜಸ್ಥಾನ ಸಿಎಂ(Rajasthan CM) ಸ್ಥಾನ ಬಿಟ್ಟುಕೊಡಲು ನಿರಾಕರಿಸಿದ ಅಶೋಕ್ ಗೆಹ್ಲೋಟ್(Ashok Gehlot) ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ಪರ್ಧೆ ಧುಮುಕಿದ್ದರು. ಬಳಿಕ ಸಿಎಂ ಸ್ಥಾನ ಕೈತಪ್ಪು ಭೀತಿ ಎದುರಾಗುತ್ತಿದ್ದಂತೆ 90 ಶಾಸಕರ ರಾಜೀನಾಮೆ ಹೈಡ್ರಾಮ ನಡೆಸಿ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದರು. ಇದೀಗ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹೊರಗುಳಿಯುತ್ತಿದ್ದೇನೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಗೆಹ್ಲೋಟ್‌ಗೆ ಬೇಕಾಗಿರುವುದು ಇದೇ. ರಾಜಸ್ಥಾನ ಸಿಎಂ ಪಟ್ಟ ಕೈತಪ್ಪಬಾರದು. ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷನಾದರೆ ಸಿಎಂ ಪಟ್ಟ ತಮ್ಮ ಆಪ್ತನ ಬಳಿ ಇರಬೇಕು ಎಂದು ಗೆಹ್ಲೋಟ್ ಬಯಸಿದ್ದರು. ಆದರೆ ಸಚಿನ್ ಪೈಲೆಟ್ ಬಣ ಸಿಎಂ ಸ್ಥಾನ ಕಸಿದುಕೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಇದೆಲ್ಲವನ್ನು ಮನಗಂಡ ಗೆಹ್ಲೋಟ್ ಒಂದು ಸುತ್ತಿನ ರಾಜೀನಾಮೆ ನಾಟಕ ಆಡಿ ಬಚಾವ್ ಆಗಿದ್ದಾರೆ.

Rajasthan Politicsನಲ್ಲಿ ಗೆಹ್ಲೋಟ್ ಶಕ್ತಿ ಎಂಥದ್ದು? ರಬ್ಬರ್‌ಸ್ಟಾಂಪ್ ಅಂದ್ಕೊಂಡ್ರೆ ರೆಬೆಲ್‌ಸ್ಟಾರ್ ಆದ್ರಲ್ಲಾ?

 ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ: ನಾಮಪತ್ರ ಪಡೆದ ಪವನ್‌ ಬನ್ಸಲ್‌
ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ಎಐಸಿಸಿ ಖಜಾಂಜಿ ಪವನ್‌ ಕುಮಾರ್‌ ಬನ್ಸಲ್‌ ಅವರು ಮಂಗಳವಾರ ನಾಮಪತ್ರ ಪಡೆದಿದ್ದಾರೆ. ಆದರೆ ಬನ್ಸಲ್‌ ಅವರು ತಾವೇ ಸ್ಪರ್ಧಿಸಲು ನಾಮಪತ್ರ ಪಡೆದರೋ ಅಥವಾ ಬೇರೆಯವರಿಗಾಗಿಯೋ ಗೊತ್ತಾಗಿಲ್ಲ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ಕೇಂದ್ರಿಯ ಚುನಾವಣಾ ಆಯುಕ್ತ ಮಧುಸೂಧನ್‌ ಮಿಸ್ತ್ರಿ, ‘ಇದು ಬೇರೆಯವರಿಗೆ ಇರಬಹುದು’ ಎಂದಿದ್ದಾರೆ. ಈ ನಡುವೆ ಇನ್ನೊಬ್ಬ ಆಕಾಂಕ್ಷಿ ಶಶಿ ತರೂರ್‌ ಸೆ.30 ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ