ಸುರಪುರ ಮತಕ್ಷೇತ್ರಕ್ಕೆ ಕಾಂಗ್ರೆಸ್ ಯಾತ್ರೆ ಬರುವ ಹಿನ್ನೆಲೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೇವತ್ಕಲ್‌ಗೆ ಭೇಟಿ
ಸುರಪುರ(ಫೆ.03): ಫೆ.10ರಂದು ಸುರಪುರ ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ರಾಜ್ಯ ಮುಖಂಡರಿಂದ ಕೂಡಿದ ಪ್ರಜಾಧ್ವನಿ ಯಾತ್ರೆ ಆಗಮಿಸಲಿದೆ. ಹೀಗಾಗಿ ಕಾರ್ಯಕರ್ತರು, ಮುಖಂಡರು, ನಾಯಕರಿಗೆ ಅನುಕೂಲವಾಗುವಂತ ಪ್ರದೇಶಗಳ ಸ್ಥಳಗಳನ್ನು ಪರಿಶೀಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇವತ್ಕಲ್ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಾಲೂಕಿನ ದೇವತ್ಕಲ್‌ನಲ್ಲಿ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವುಕುಮಾರ ಅವರ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಕಾಯಕರ್ತರ ಸಮಾವೇಶ ನಡೆಸಲು ಸದ್ಯಕ್ಕೆ ದೇವತ್ಕಲ್‌ನ ಸರಕಾರಿ ಪ್ರೌಢಶಾಲೆಯ ಮೈದಾನದ ಸ್ಥಳ ಪರಿಶೀಲಿಸಲಾಗಿದೆ. ಹಿರಿಯರ, ಮುಖಂಡರ, ಕಾರ್ಯಕರ್ತರ ಅಭಿಪ್ರಾಯದಂತೆ ಬೇರೆ ಸ್ಥಳಗಳನ್ನು ನೋಡಿಡಲಾಗಿದೆ. ಸನ್ನಿವೇಶ ನೋಡಿಕೊಂಡು ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
undefined
ಬಿಜೆಪಿ ‘ಪಾಪದ ಪುರಾಣ’ ಪ್ರಚಾರಕ್ಕಾಗಿ ಯಾತ್ರೆ: ಸಿದ್ದರಾಮಯ್ಯ
ಈಗಾಗಲೇ ಕಾರ್ಯಕರ್ತರೊಡನೆ ಸಭೆಗಳನ್ನು ನಡೆಸಲಾಗುತ್ತಿದೆ. ಕಾಂಗ್ರೆಸ್ ಬಲಿಷ್ಠಗೊಳಿಸಲು ಜನರನ್ನು ಕರೆತರಲು ಕಾರ್ಯಕರ್ತರಿಗೆ ಜವಾಬ್ದಾರಿ ವಹಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರೇ ಪಕ್ಷದ ಆಸ್ತಿಯಾಗಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ. ಬರುವ ಜನರಿಗೆ ಸ್ಥಳದಲ್ಲಿ ಸಕಲ ವ್ಯವಸ್ಥೆ ಕೈಗೊಳ್ಳಲಾಗುವುದು. ಎಲ್ಲ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಕಾರ್ಯಕರ್ತರು ಸಿದ್ಧರಿರಬೇಕು ಎಂದು ತಿಳಿಸಿದರು.
ಮುಖಂಡರಾದ ವಿಠಲ್ ವಿ.ಯಾದವ, ವೆಂಕೋಬ ಸಾಹುಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಿಗೌಡ ಕುಪ್ಪಿ, ಕೆಪಿಸಿಸಿ ಸದಸ್ಯರಾದ ಸಿದ್ದಣ್ಣ ಮಲಗಲದಿನ್ನಿ, ಗುಂಡಪ್ಪ ಸೊಲ್ಲಾಪುರ, ಅಬ್ದುಲ್ ಗಫರ ನಗನೂರಿ, ಭೀಮರಾಯ ಮೂಲಿಮನಿ, ಚನ್ನಪ್ಪಗೌಡ ದೇವಾಪುರ, ಚಂದ್ರು ಹೆಬ್ಬಾಳ, ಭೀಮನಗೌಡ ಹೆಬ್ಬಾಳ, ಮುದ್ದಣ್ಣ ಸಾಹುಕಾರ ಗೋಡಿಹಾಳ, ಲಕ್ಷ್ಮಮಣ ದೇವತ್ಕಲ್, ರಂಗನಾಥ ನಾಯಕ ದೇವತ್ಕಲ್, ಆರ್.ಎಂ. ರೇವಡಿ, ಪರಮಣ್ಣಗೌಡ ಕೋನ್ಹಾಳ, ಅಂಬ್ರೇಶಗೌಡ ಕೋನ್ಹಾಳ, ಪ್ರಭುಗೌಡ ಬೇನಕನಹಳ್ಳಿ, ನಿಂಗಣ್ಣ ಕೋಡೆಸೂರ ಇತರರಿದ್ದರು.