ರಾಹುಲ್‌ ಗಾಂಧಿ ಬಗ್ಗೆ ಟೀಕೆ: ನಳಿನ್‌ ಕಟೀಲ್‌ಗೆ ಕಾಂಗ್ರೆಸ್‌ ನೋಟಿಸ್‌

By Kannadaprabha News  |  First Published Mar 11, 2023, 1:48 PM IST

ರಾಹುಲ್‌ ಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಕೆಪಿಸಿಸಿ ಕಾನೂನು ಘಟಕವು ಲೀಗಲ್‌ ನೋಟಿಸ್‌ ಜಾರಿ ಮಾಡಿದೆ. 


ಬೆಂಗಳೂರು (ಮಾ.11): ರಾಹುಲ್‌ ಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಕೆಪಿಸಿಸಿ ಕಾನೂನು ಘಟಕವು ಲೀಗಲ್‌ ನೋಟಿಸ್‌ ಜಾರಿ ಮಾಡಿದೆ. ತೇಜೋವಧೆ ಹೇಳಿಕೆ ನೀಡಿರುವ ಕಟೀಲ್‌ ಬೇಷರತ್‌ ಕ್ಷಮೆ ಕೋರಬೇಕು. ಜತೆಗೆ 1 ಕೋಟಿ ರು. ಮಾನನಷ್ಟ ಪರಿಹಾರ ಪಾವತಿಸಬೇಕು ಎಂದು ಸೂಚಿಸಿದೆ. 

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಶತಾಭಿಶ್‌ ಶಿವಣ್ಣ ಅವರು ಕಟೀಲ್‌ ಅವರಿಗೆ ಲೀಗಲ್‌ ನೋಟಿಸ್‌ ನೀಡಿದ್ದು, ಮಾ.5 ರಂದು ರಾಮನಗರದಲ್ಲಿ ನಡೆದ ರಾರ‍ಯಲಿಯಲ್ಲಿ ರಾಹುಲ್‌ಗಾಂಧಿ ಅವರು ವ್ಯಾಕ್ಸಿನ್‌ ತೆಗೆದುಕೊಳ್ಳಬೇಡಿ, ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಹೇಳಿದ್ದರು. ಇದೀಗ ಲಸಿಕೆ ಪಡೆದು ಅವರು ಮಕ್ಕಳಾಗದವರಂತೆ ಆಗಿದ್ದಾರೆ. ಹೀಗಾಗಿಯೇ ಅವರು ಮದುವೆಯಾಗಿಲ್ಲ ಎಂದು ಕಪೋಲಕಲ್ಪಿತ ಸುಳ್ಳುಗಳನ್ನು ಹೇಳಿದ್ದೀರಿ. ಇದರಿಂದ ರಾಹುಲ್‌ ಗಾಂಧಿ ಅವರ ಕೋಟ್ಯಂತರ ಅಭಿಮಾನಿಗಳಿಗೆ ಅವಮಾನ ಆಗಿದೆ ಎಂದು ಕಿಡಿ ಕಾರಿದ್ದಾರೆ. ತಾವೊಬ್ಬ ಸಂಸದ, ಪಕ್ಷದ ರಾಜ್ಯಾಧ್ಯಕ್ಷ ಎಂದು ಮರೆತು ನಾಲಿಗೆ ಹರಿಬಿಟ್ಟಿದ್ದೀರಿ. 

Tap to resize

Latest Videos

ರಾಜ್ಯಕ್ಕೆ ಬರುವ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ 7 ಪ್ರಶ್ನೆ

ರಾಜಕೀಯದಲ್ಲಿ ನೀಚ ಮಟ್ಟಕ್ಕೆ ತಲುಪಿ ರಾಹುಲ್‌ಗಾಂಧಿ ಅವರಿಗೆ ಮಕ್ಕಳಾಗದ ಕಾರಣ ಅವರು ಮದುವೆಯಾಗಿಲ್ಲ ಎಂದಿದ್ದೀರಿ. ತನ್ಮೂಲಕ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷ, ಕೋಟ್ಯಂತರ ಅಭಿಮಾನಿಗಳಿಗೆ ಅವಮಾನ ಮಾಡಿದ್ದೀರಿ. ರಾಹುಲ್‌ಗಾಂಧಿ ಅವರು ವ್ಯಾಕ್ಸಿನ್‌ ತೆಗೆದುಕೊಳ್ಳಬೇಡಿ, ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಹೇಳಿದ್ದರು. ಇದೀಗ ಲಸಿಕೆ ಪಡೆದು ಅವರು ಮಕ್ಕಳಾಗದವರಂತೆ ಆಗಿದ್ದಾರೆ. ಹೀಗಾಗಿಯೇ ಅವರು ಮದುವೆಯಾಗಿಲ್ಲ ಎಂದು ಕಪೋಲಕಲ್ಪಿತ ಸುಳ್ಳುಗಳನ್ನು ಹೇಳಿದ್ದೀರಿ. 

ಇಂತಹ ಹೇಳಿಕೆಗಳು ಮಾನನಷ್ಟ ಮಾತ್ರವಲ್ಲ, ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದಲೂ ಆಘಾತಕಾರಿ. ಸುಳ್ಳು ಮತ್ತು ಆಧಾರರಹಿತ ಹೇಳಿಕೆಗಳ ಮೂಲಕ ಅವರ ಮಾನನಷ್ಟಕ್ಕೆ ಯತ್ನಿಸಿದ್ದೀರಿ. ನಿಮ್ಮ ಹೇಳಿಕೆ ಶಿಕ್ಷಾರ್ಹ ಅಪರಾಧ ಎಂದು ಹೇಳಿದ್ದಾರೆ. ಹೀಗಾಗಿ ನಿಮ್ಮ ಮಾನನಷ್ಟಹೇಳಿಕೆಯನ್ನು ಕೂಡಲೇ ಹಿಂಪಡೆದು ಬೇಷರತ್‌ ಕ್ಷಮೆ ಯಾಚಿಸಬೇಕು. ಜತೆಗೆ 1 ಕೋಟಿ ರು. ಮಾನನಷ್ಟ ಪರಿಹಾರ ನೀಡಬೇಕು. 15 ದಿನಗಳೊಳಗಾಗಿ ಈ ನೋಟಿಸ್‌ಗೆ ನೀವು ಸ್ಪಂದಿಸದಿದ್ದರೆ ಸಿವಿಲ್‌ ಹಾಗೂ ಕ್ರಿಮಿನಲ್‌ ಕ್ರಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್‌ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಮನೆಮನೆಗೆ ಡಿಕೆಶಿ, ಸಿದ್ದು ‘ಗ್ಯಾರಂಟಿ ಕಾರ್ಡ್‌’ ಹಂಚಿಕೆ: ರಾಜ್ಯ ಕಾಂಗ್ರೆಸ್‌ ಪಕ್ಷವು ತಾನು ನೀಡಿರುವ ಚುನಾವಣಾ ಭರವಸೆಗಳ ಗ್ಯಾರಂಟಿ ಕಾರ್ಡ್‌ಗಳನ್ನು ಹಳ್ಳಿ-ಹಳ್ಳಿಗೂ ತಲುಪಿಸಲು ಮುಂದಾಗಿದ್ದು, ಮಾ.11ರಂದು ಖುದ್ದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಮನೆ-ಮನೆಗೂ ಗ್ಯಾರಂಟಿ ಕಾರ್ಡ್‌ ಹಂಚಲಿದ್ದಾರೆ. ತನ್ಮೂಲಕ ಮನೆ-ಮನೆಗೂ ಕಾರ್ಡ್‌ ಹಂಚುವ ಮೂಲಕ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಮಾ.11ರಂದು ಮಧ್ಯಾಹ್ನ ಪ್ರತಿಯೊಬ್ಬ ಕಾರ್ಯಕರ್ತ ಕನಿಷ್ಠ 50 ಮನೆಗಳಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ತಲುಪಿಸಬೇಕು ಎಂದು ಜಂಟಿ ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ.

ಸುಮಲತಾ ದೊಡ್ಡವರು, ಅವರ ಬಗ್ಗೆ ಮಾತಾಡುವಷ್ಟು ನಾನು ಬೆಳೆದಿಲ್ಲ: ಎಚ್‌ಡಿಕೆ

ರಾಜ್ಯ ಕಾಂಗ್ರೆಸ್‌ ಪಕ್ಷವು ತಾವು ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮೇ ಯೋಜನೆಯಡಿ ಪ್ರತಿ ಮನೆಯೊಡತಿಗೆ ಮಾಸಿಕ 2 ಸಾವಿರ ರು. ಸಹಾಯಧನ ನೀಡುತ್ತೇವೆ. ‘ಗೃಹ ಜ್ಯೋತಿ’ ಹೆಸರಿನಲ್ಲಿ ತಿಂಗಳಿಗೆ 200 ಯುನಿಟ್‌ ಉಚಿತ ವಿದ್ಯುತ್‌ ಹಾಗೂ ಪ್ರತಿ ಸದಸ್ಯರಿಗೆ 10 ಕೆ.ಜಿ. ಅನ್ನಭಾಗ್ಯ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇಬ್ಬರೂ ಜತೆಯಲ್ಲಿ ಕುಳಿತು ಒಂದೇ ವಿಡಿಯೋ ಮೂಲಕ ಕರೆ ನೀಡಿದ್ದು, ಮಾ.11ರಂದು ನಾವಿಬ್ಬರೂ ಎಲ್ಲೆಲ್ಲಿ ಇರುತ್ತೇವೆಯೋ ಅಲ್ಲಿ ಸ್ವತಃ ಗ್ರಾಮಗಳ ಮನೆ-ಮನೆಗೆ ತಲುಪಿಸಿ ಗ್ಯಾರಂಟಿ ಕಾರ್ಡ್‌ಗಳನ್ನು ನೀಡುತ್ತೇವೆ. ಪಕ್ಷದ ಕಾರ್ಯಕರ್ತರು ಇದೇ ರೀತಿ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿನ ಹಳ್ಳಿಗಳ ಮನೆ-ಮನೆಗೂ ಹೋಗಿ ಗ್ಯಾರಂಟಿ ಕಾರ್ಡ್‌ ವಿತರಿಸಬೇಕು ಎಂದಿದ್ದಾರೆ.

click me!