ವಿಧಾನ ಪರಿಷತ್ತಿನಲ್ಲಿ ಬ್ಲೂ ಫಿಲ್ಮ್ ವೀಕ್ಷಣೆ? ಸ್ಪಷ್ಟನೆ ಕೊಟ್ಟ ಕಾಂಗ್ರೆಸ್ ಸದಸ್ಯ!

By Suvarna News  |  First Published Jan 29, 2021, 3:05 PM IST

ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರೊಬ್ಬರು ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದಾರೆ ಎನ್ನುವ ಆರೋಪಕ್ಕೆ ಸ್ವತಃ ಅವರೇ  ಪ್ರತಿಕ್ರಿಯೆ ಕೊಟ್ಟಿದ್ದಾರೆ.


ಬೆಂಗಳೂರು, (ಜ.29): ವಿಧಾನ ಪರಿಷತ್ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ನೀಲಿ ಚಿತ್ರ ವೀಕ್ಷಣೆ ಮಾಡಿರುವ ಆರೋಪ ಕೇಳಿಬಂದಿದೆ.  ಆದ್ರೆ, ಈ ಆರೋಪವನ್ನು ಪ್ರಕಾಶ್ ರಾಥೋಡ್ ಅಲ್ಲಗಳೆದಿದ್ದಾರೆ. 

ಪ್ರಕಾಶ್ ರಾಥೋಡ್ ಅವರು ಕಲಾಪದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ಇದರಿಂದ ಎಚ್ಚೆತ್ತ ಪ್ರಕಾಶ್ ರಾಥೋಡ್, ಈ ಕುರಿತು ಸ್ಪಷ್ಟನೆ ಕೊಟ್ಟಿದ್ದು, ಅದು ಈ ಕೆಳಗಿನಂತಿದೆ.

Latest Videos

undefined

ನಾನು ಅಂತಹದ್ದೇನು ನೋಡಲಿಲ್ಲ. ಮೊಬೈಲ್ ನಲ್ಲಿ ಕೆಲವು ಮೆಸೇಜ್ ಗಳು ಹೆಚ್ಚಾಗಿದ್ದವು. ಅದನ್ನು ಡಿಲೀಟ್ ಮಾಡುತ್ತಿದ್ದೆ. ಅಂತಹ ಕೆಲಸವನ್ನ ನಾನು ಮಾಡುವುದಿಲ್ಲ. ದಯಮಾಡಿ ತಪ್ಪು ಮಾಹಿತಿ ಕೊಡಬಾರದು ಎಂದು ಮನವಿ ಮಾಡಿಕೊಂಡರು.

Video: ಕಲಾಪದಲ್ಲೇ ಕೂತು ಸೆಕ್ಸ್ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ

ನಾನು ಯಾವುದೇ ಚಿತ್ರವನ್ನ ನೋಡಿಲ್ಲ. ದಿನ ನಿತ್ಯ ಸಾವಿರಾರು ಮೆಸೇಜ್ ಬರುತ್ತದೆ, ನನ್ನ ಮೊಬೈಲ್ ನಲ್ಲಿ 15 ಸಾವಿರ ಮೆಸೇಜ್ ಇತ್ತು. ಅವುಗಳನ್ನು ಅಳಿಸುತ್ತಿದ್ದೆ. ಮೊಬೈಲ್ ನಲ್ಲಿ ಸ್ಟೋರೇಜ್ ಜಾಸ್ತಿಯಾಗಿದೆ. ಜನರಲ್ ಆಗಿ ವಿಡಿಯೋಗಳು ಬಂದಿವೆ. ಅದನ್ನು ಡಿಲೀಟ್ ಮಾಡುತ್ತಿದ್ದೆ ಎಂದರು.

ನಾನು ಅಶ್ಲೀಲ ವಿಡಿಯೋ ನೋಡಲೇ ಇಲ್ಲಾ. ಕೆಲವೊಂದು ಫೋಟೋ, ದೃಶ್ಯ ಬಂದಿರಬಹುದು. ಆದರೆ, ನಾನು ಅಂತಹ ವಿಡಿಯೋವನ್ನು ನೋಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿದರು.

click me!