ಕೆಲವರು ನನ್ನ ಮನೆಗೆ ದಾಳಿಯಾಗಿದ್ದು ತಡವಾಯ್ತು ಅಂತಾ ಹೇಳಿದ್ದಾರೆ. ಅಂಥವರಿಗೆ ನಾನು ಶುಭ ಕೋರುತ್ತೇನೆ ಎಂದು ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಹೇಳಿದರು.
ಮಂಗಳೂರು (ಆ.23): ಕೆಲವರು ನನ್ನ ಮನೆಗೆ ದಾಳಿಯಾಗಿದ್ದು ತಡವಾಯ್ತು ಅಂತಾ ಹೇಳಿದ್ದಾರೆ. ಅಂಥವರಿಗೆ ನಾನು ಶುಭ ಕೋರುತ್ತೇನೆ ಎಂದು ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಹೇಳಿದರು.
ಇಂದು ಕಂಕನಾಡಿ ಬಳಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಮನೆಗೆ ಕಲ್ಲು ತೂರಬಹುದು. ಆದರೆ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂತದ್ದಕ್ಕೆಲ್ಲ ಜಗ್ಗಲ್ಲ. ಭರತ್ ಶೆಟ್ಟಿ ಹಿಂದೆ ರಾಹುಲ್ ಗಾಂಧಿಯವರ ಕಪಾಳಕ್ಕೆ ಬಾರಿಸಬೇಕು ಎಂದಿದ್ದರು.. ವೇದವ್ಯಾಸ ಕಾಮತ್ ಜೆರೋಸಾ ಶಾಲೆಯಲ್ಲಿ ಗಲಾಟೆ ಮಾಡಿದ್ರು. ಇದೆಲ್ಲ ಈ ಅವರಿಗೆ ಆ ಮಕ್ಕಳ ಶಾಪ ಅಲ್ಲದೆ ಮತ್ತೇನೂ ಅಲ್ಲ. ಜನರ ತೆರಿಗೆ ಹಣ ಉಂಡು ತಿಂದು ಅವರ ವಿರುದ್ಧವೇ ಮಾತನಾಡ್ತಾರೆ. ನನ್ನ ವಿರುದ್ಧ ಕಾನೂನು ಮೊರೆ ಹೋಗಿ ಅದು ಬಿಟ್ಟು ಮನೆಗೆ ಕಲ್ಲು ಎಸೆಯೋದಲ್ಲ ಎಂದು ಹರಿಹಾಯ್ದರು.
ಬಾಂಗ್ಲಾದ್ದು ಬರೀ ಉದಾಹರಣೆ, ನನ್ನ ಮಾದರಿ ಅಲ್ಲ: ಐವಾನ್ ಡಿಸೋಜಾ
ಇವರದು ಗೂಂಡಾ ಸಂಸ್ಕೃತಿ, ಇದು ಮಂಗಳೂರಿನ ಸಂಸ್ಕೃತಿ ಅಲ್ಲ. ಬಿಜೆಪಿಯವರಿಗೆ ಗಲಭೆ, ಕೊಲೆ, ಗುಂಪು ಘರ್ಷಣೆ ಆದ್ರೆ ಪ್ರಯೋಜನ. ಅಲ್ಪಸಂಖ್ಯಾತರು ಅವರ ಲಿಸ್ಟ್ ನಲ್ಲಿ ಇಲ್ಲ, ಹಾಗಾಗಿ ನಮ್ಮ ಮೇಲೆ ಹೊಟ್ಟೆ ಕಿಚ್ಚು ಹೆಚ್ಚು. ನಮ್ಮ ಉದ್ದೇಶ ಬಿಜೆಪಿ ಕಚೇರಿಗೆ ಹೋಗಬೇಕು ಅಂತಾ ಇತ್ತು, ಆಗಲಿಲ್ಲ ಎಂದರು.
ಬಾಂಗ್ಲಾ ಮಾದರಿ ದಾಳಿ ನಡೆಸುತ್ತೇವೆ ಅನ್ನೋದಕ್ಕೆ ಎಷ್ಟು ಧೈರ್ಯ ಅವನಿಗೆ ; ಐವನ್ ಡಿಸೋಜಾ ವಿರುದ್ಧ ಶಾಸಕ ಎ ಮಂಜು ಕೆಂಡ
ಪಾದಯಾತ್ರೆ ತಡೆ ಪೊಲೀಸರು
ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಅವರ ಮನೆಗೆ ಕಲ್ಲುತೂರಾಟ ನಡೆಸಿದ ಘಟನೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಪಿವಿಎಸ್ ಬಳಿಯಿಂದ ಬಿಜೆಪಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಆದರೆ ಅರ್ಧ ದಾರಿಯಲ್ಲೇ ಪಾದಯಾತ್ರೆ ತಡೆದ ಪೊಲೀಸರು. ಪಾದಯಾತ್ರೆ ಕಂಕನಾಡಿ ಜಂಕ್ಷನ್ ಬಳಿ ಬರುತ್ತಿದ್ದಂತೆ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಪಾದಯಾತ್ರೆ ತಡೆದರು. ಸ್ಥಳದಲ್ಲಿ ಕೆಎಸ್‌ಆರ್‌ಪಿ, ಸಿಎಆರ್ ಸೇರಿದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು. ಆದರೆ ಪಾದಯಾತ್ರೆ ತಡೆದ ಕಂಕನಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.