Karnataka MLC Poll: ಜೆಡಿಎಸ್‌ ಭದ್ರಕೋಟೆಗೆ ನುಗ್ಗಿದ 'ಗೂಳಿ'ಗೌಡ!

By Suvarna NewsFirst Published Dec 2, 2021, 9:00 PM IST
Highlights

* ದಿನದಿದ ದಿನಕ್ಕೆ ರಂಗೇರುತ್ತಿರುವ  ವಿಧಾನ ಪರಿಷತ್ಎಲೆಕ್ಷನ್
* ಜೆಡಿಎಸ್‌ ಭದ್ರಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ
* ಕೋಟೆಯನ್ನು ಅಲುಗಾಡಿಸುತ್ತರುವ ಕೈ
 

ಮಂಡ್ಯ, (ಡಿ.02): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ (Karnataka MLC Elections) 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ದಿನದಿದ ದಿನಕ್ಕೆ ರಂಗೇರುತ್ತಿದೆ.

ಬಿಜೆಪಿ-ಜೆಡಿಎಸ್(JDS-BJP) ಮೈತ್ರಿ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ನಾಯಕರ ಮಟ್ಟದಲ್ಲಿ ಬೆಂಬಲ, ಮೈತ್ರಿ ದೋಸ್ತಿ ಏನೇ ಮಾತುಕತೆಗಳು ನಡೆಯುತ್ತಿವೆ. ಆದ್ರೆ, ಸ್ಥಳೀಯ ಮಟ್ಟದಲ್ಲಿ ನಿರ್ಧಾರವಾಗುವುದು ಗ್ರಾಮ ಪಂಚಾಯಿತಿ (Gram Panchayat) ಸದಸ್ಯರಿಂದ.

Council Election Karnataka : JDS - ಕೈ ಜಿದ್ದಾಜಿದ್ದಿನ ಕದನ - ಸೋಲಿನ ಸೇಡು ತೀರಿಸಿಕೊಳ್ಳಲು ದಳಪತಿಗಳ ತವಕ

ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ
 ಕೃಷಿ ಕುಟುಂಬದಿಂದ ಬಂದವನು ನಾನು. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿರುವುದರಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ, ನಿಮ್ಮಗಳ ಧ್ವನಿಯಾಗಿ, ಪ್ರತಿನಿಧಿಯಾಗಿ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸುತ್ತೆನೆ ಎಂದು  ಮಂಡ್ಯ ಪರಿಷತ್ತಿನ ಕಾಂಗ್ರೆಸ್ ಅಭ್ಯರ್ಥಿ (Mandya Congress Candidate) ದಿನೇಶ್ ಗೂಳಿಗೌಡ ಮತಯಾಚಿಸಿದರು. 

ಗುರುವಾರ ಕೊತ್ತತ್ತಿ ಹೋಬಳಿಯ ಬೇವಿನಹಳ್ಲಿ, ಇಂಡುವಾಳ, ಎಲೆಯೂರು, ತುಬಿನಕೆರೆ, ಕೊತ್ತತ್ತಿ, ಸಂತೆ ಕೆಸಲಗೆರೆ ಹಾಗೂ ಮಂಗಲ ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

Karnataka MLC Election: ಕಾಂಗ್ರೆಸ್ ಅಭ್ಯರ್ಥಿಗೆ ಮತ್ತೊಂದು ಸಂಕಷ್ಟ ತಂದಿಟ್ಟ ಬಿಜೆಪಿ

ಕಳೆದ ಬಾರಿ ಗೆದ್ದುಹೋದ ಅಪ್ಪಾಜಿಗೌಡ ಅವರ ಬಗ್ಗೆ ಈಗಾಗಲೇ ನಮ್ಮ ನಾಯಕರು ಹೇಳಿದ್ದಾರೆ ಹಾಗೂ ನಿಮಗೂ ತಿಳಿದಿರುವುದರಿಂದ ನಾನೇನು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ನನ್ನ ಕೆಲಸ ಬಗ್ಗೆ ತಿಳಿದೇ ಒಂದು ಅವಕಾಶ ನೀಡಿದೆ‌. ಹೀಗಾಗಿ ನಾನೂ ನಿಮ್ಮ ಹಾಗೂ ಗ್ರಾಮಪಂಚಾಯಿತಿ ಸೇವೆ ಮಾಡಲು ಉತ್ಸುಕನಾಗಿದ್ದೆನೆ ಎಂದು ಹೇಳಿದರು.

ಇಲ್ಲಿಂದ ಗೆದ್ದುಹೋದ ನಂತರ ನಾನು ಇಲ್ಲಿಯೇ ಗ್ರಾಮಪಂಚಾಯಿತಿಯಲ್ಲೆ ವಾಸ್ತವ್ಯ ಹೂಡುವೆ. ದಿನದ 24 ಗಂಟೆಯೂ ನಿಮ್ಮ ಸೇವೆಗೆ ಸದಾ ಸಿಗುತ್ತೆನೆ. ಕಾಲಹರಣ ಮಾಡುವ ಯಾವುದೇ ಚಟಗಳು ನನ್ನಲ್ಲಿ ಇಲ್ಲ ಎಂದರು.

ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೆಗೌಡ ಮಾತನಾಡಿ, ನೀವು ನನ್ನನ್ನು ಯಾವ ರೀತಿ ಬೆಂಬಲಿಸಿದಿರೋ ಅದೇ ರೀತಿ ಇವರನ್ನು ಬೆಂಬಲಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರು ಗೆದ್ದರೆ ನಾವೆ ಗೆದ್ದಹಾಗೆ ಎಂದು ದಿನೇಶ್ ಗೂಳಿಗೌಡ ಅವರಿಗೆ ಬೆಂಬಲ ಸೂಚಿಸಿ ಮತಯಾಚಿಸಿದರು.

ಕಳೆದ ಬಾರಿ ಜಿಲ್ಲೆಯಲ್ಲಿ ಎಷ್ಟು ಅನುದಾನ ಬಂದಿದೆ, ಎಷ್ಟು ಅಭಿವೃದ್ಧಿಯಾಗಿದೆ ಎಂಬುದು ನಿಮಗೆ ತಿಳಿದಿರುವ ವಿಚಾರ ಹೀಗಾಗಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಶುರುವಾಗಬೇಕಾದರೆ ದಿನೇಶ್ ಗೂಳಿಗೌಡ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೆಗೌಡ, ಪರಿಷತ್ತಿನ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ, ಮಾಜಿ ಜಿಲ್ಲಾಪಂಚಾಯಿತಿಯ ಸದಸ್ಯ ಡಿ.ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೆ.ಮಧು, ಕಾಂಗ್ರೆಸ್ ಮುಖಂಡರಾದ ಯಶೋಧ, ಕುರುಬರ ಸಂಘದ ಅಧ್ಯಕ್ಷ ಕೆ.ಎಸ್.ನಾಗರಾಜು ಬಿಸಿಸಿ ಬ್ಯಾಂಕಿನ ನಿರ್ದೇಶಕರಾದ ಸಂದರ್ಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿತ್ರ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.

ಮತದಾನ ದಿನಾಂಕ
ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದ್ದು, ರಾಜಕೀಯ ಕೆಸರೆರಚಾಟ ಮುಗಿಲು ಮುಟ್ಟಿದೆ. ಡಿ.10ರಂದು ಚುನಾವಣೆ ನಡೆಯಲಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂದು ಡಿ.14ರ ಫಲಿತಾಂಶದಲ್ಲಿ ಪ್ರಕಟವಾಗಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಚುನಾವಣೆ ನಡೆಯಲಿದೆ.

ಈಬಾರಿ ಪರಿಷತ್ ಚುನಾವಣೆಯಲ್ಲಿ ಬಿಬಿಎಂಪಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಅವಧಿ ಮುಗಿದಿರುವುದರಿಂದ ಈ ಸದಸ್ಯರ ಹೆಸರುಗಳನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಪುರಸಭೆ, ಮಹಾನಗರ ಪಾಲಿಕೆ ಸದಸ್ಯರಿಗೆ ಮತದಾನದ ಹಕ್ಕು ಇದೆ. ಹಾಗಾಗಿ ರಾಜಕೀಯ ಪಕ್ಷಗಳು ಗ್ರಾಪಂ ಸದಸ್ಯರ ಕಡೆ ಮುಖ ಮಾಡಿದ್ದಾರೆ.

click me!