ಯಾವ ಕಾರಣಕ್ಕೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ: ಸಚಿವ ಎಚ್‌.ಕೆ.ಪಾಟೀಲ್‌

By Kannadaprabha News  |  First Published Oct 30, 2023, 3:00 AM IST

ಯಾವ ಕಾರಣಕ್ಕೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಯಾವ ಕಾರಣಕ್ಕೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ.


ಕಾರವಾರ (ಅ.30): ಯಾವ ಕಾರಣಕ್ಕೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಯಾವ ಕಾರಣಕ್ಕೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಆದರೆ, ಆಪರೇಷನ್ ಕಮಲಕ್ಕೆ ಯತ್ನಿಸುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಸಚಿವ ಪರಮೇಶ್ವರ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಡಿಕೆಶಿಯವರು ತೆಲಂಗಾಣಕ್ಕೆ ತೆರಳಿದ್ದರಿಂದ ಔತಣಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಅವರು ತಿಳಿಸಿದರು.

ಪಕ್ಷ ಸಂಘಟನೆ ಕುರಿತು ಭೀಮಣ್ಣ ಅಸಮಾಧಾನ: ವಿಧಾನಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಸಂಘಟನೆಯಲ್ಲಿ ಎಡವಿದ ಬಗ್ಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಂಕೋಲಾದಲ್ಲಿ ಲೋಕಸಭಾ ಚುನಾವಣೆ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ತನಕ ಪಕ್ಷ ಸಂಘಟನೆಯ ಬಗ್ಗೆ ಎಷ್ಟು ಸಭೆಗಳನ್ನು ಮಾಡಲಾಗಿದೆ ಎಂದು ಲೆಕ್ಕ ಕೊಡುವಂತೆ ಅಧ್ಯಕ್ಷರನ್ನು ಕೇಳಿದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಅದು ಮನೆ-ಮನೆಗೆ ತಲುಪುವಂತಾಗಬೇಕು. ಪಕ್ಷ ಈ ಕೆಲಸವನ್ನು ಮಾಡಬೇಕು. ಸಂಘಟನೆಯನ್ನು ಚುರುಕುಗೊಳಿಸಬೇಕು. ನಾನು ಜಿಲ್ಲಾ ಅಧ್ಯಕ್ಷನಾಗಿ 13 ವರ್ಷ ಚೆನ್ನಾಗಿ ನಿರ್ವಹಣೆ ಮಾಡಿದ್ದೇನೆ ಎಂದೂ ಭೀಮಣ್ಣ ನಾಯ್ಕ ಹೇಳಿದರು.

Latest Videos

undefined

50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್‌ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ

ಹಣಕಾಸು ಆಯೋಗ ವರದಿ ಕ್ರಾಂತಿಕಾರಕ ಆಗಲಿ: ರಾಜ್ಯದ 5ನೇ ಹಣಕಾಸು ಆಯೋಗವು ರಾಜ್ಯದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಹೊಸ ರೂಪು ತಂದು ಕೊಡುವ ನಿಟ್ಟಿನಲ್ಲಿ ಸಮಗ್ರ ಅಧ್ಯಯನ ನಡೆಸಿ ನಿಗದಿತ ಅವಧಿಯೊಳಗೆ ದೇಶಕ್ಕೆ ಮಾದರಿಯಾಗುವ ಶಿಫಾರಸುಗಳೊಂದಿಗೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ. ನಗರದ ರೇಸ್‌ಕೋರ್ಸ್‌ ರಸ್ತೆಯ ಖನಿಜ ಭವನದಲ್ಲಿ ಗುರುವಾರ ರಾಜ್ಯ ಸರಕಾರದ 5ನೇ ರಾಜ್ಯ ಹಣಕಾಸು ಆಯೋಗದ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಹಾಗೂ ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನಡುವೆ ಕ್ರೋಡೀಕೃತ ಸಂಪನ್ಮೂಲ ಹಂಚಿಕೆ, ಸರ್ಕಾರ ವಿಧಿಸುವ ತೆರಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾಲು ನಿಗದಿ, ತೆರಿಗೆ ಸಂಗ್ರಹದ ಮೂಲಗಳ ವ್ಯಾಪ್ತಿ ನಿಗದಿ, ಆರ್ಥಿಕ ದಕ್ಷತೆ ಮುಂತಾದವುಗಳ ಅಧ್ಯಯನ ನಡೆಸಿ ಶಿಫಾರಸುಗಳನ್ನು ಮಾಡುವುದು ಆಯೋಗದ ಜವಾಬ್ದಾರಿಯಾಗಿದೆ. 2024ರ ಫೆಬ್ರವರಿಯೊಳಗೆ ವರದಿ ನೀಡಲು ಆಯೋಗಕ್ಕೆ ಸರ್ಕಾರ ಸಮಯಾವಕಾಶ ನೀಡಿದ್ದು, ವರ್ಷಾನುಗಟ್ಟಲೆ ಕಾಯಿಸದೇ ನಿಗದಿತ ಅವಧಿಯೊಳಗೆ ವರದಿ ನೀಡಲು ಛಲದಿಂದ ಕಾರ್ಯ ನಿರ್ವಹಿಸಬೇಕು. 

ಕಾಂಗ್ರೆಸ್‌ಗೆ ಜನಾದೇಶ ಇದೆ, ಆಪರೇಷನ್‌ ಕಮಲ ಪ್ರಮೇಯವೇ ಇಲ್ಲ: ಬಿ.ಶ್ರೀರಾಮುಲು

ಸರ್ಕಾರ ಕ್ರಾಂತಿಕಾರಕ ವರದಿ ಅಪೇಕ್ಷಿಸುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಭಾರತದಲ್ಲಿ ಬಡತನ ಗುರುತಿಸಲು ಸೂಕ್ತ ಮಾನದಂಡ ತಯಾರಿಸುವ ಕೆಲಸವಾಗಿಲ್ಲ. ಇಡೀ ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಹಾಗೂ ದೇಶಕ್ಕೆ ಮಾದರಿಯಾಗುವ ಶಿಫಾರಸುಗಳನ್ನು ಮಾಡಬೇಕು ಎಂದರು. ಆಯೋಗದ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿಯವರು ತಮ್ಮದೇ ತತ್ವ ಸಿದ್ಧಾಂತಗಳಿಂದ ಸೇವೆ ಸಲ್ಲಿಸಿಕೊಂಡು ಬಂದವರು. ಸರಳ ಸಜ್ಜನಿಕೆಯ ನಿಷ್ಠಾವಂತ ವ್ಯಕ್ತಿತ್ವದ ಅವರು ಆಯೋಗಕ್ಕೆ ಜನಸ್ಪರ್ಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

click me!