
ಬೆಂಗಳೂರು[ಜ.18] ಕಾಂಗ್ರೆಸ್ ಶಾಸಕಾಂಗ ಸಭೆಗೆ ಬಂದ ಶಾಸಕರನ್ನು ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿದೆ. ಶಾಸಕರನ್ನು ಒಗ್ಗೂಡಿಸಲು ಈ ತಂತ್ರವನ್ನು ಸಿದ್ದರಾಮಯ್ಯ ಅವರಿಗೆ ಹೇಳಿಕೊಟ್ಟವರು ಯಾರು ಎಂಬುದು ಪತ್ತೆಯಾಗಿದೆ.
ಕೈ ಶಾಸಕರನ್ನು ಒಟ್ಟುಗೂಡಿಸಲು ದಾಳ ಉರುಳಿಸಿದ್ದು ಮತ್ಯಾರು ಅಲ್ಲ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ. ಶಾಸಕಾಂಗ ಸಭೆ ಕರೆಯುವ ನೆಪದಲ್ಲಿ ಕಾಂಗ್ರೆಸ್ ಶಾಸಕರನ್ನ ಒಟ್ಟಿಗೆ ಸೇರಿಸಿದರು. ಸಭೆಯ ನಿರ್ಣಯ ಎಂಬಂತೆ ಬಿಂಬಿಸಿ ರೆಸಾರ್ಟ್ ಹೊರಡಲು ಮೊದಲೆ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು.
ಬಸ್ ಹತ್ತದೆ ರೆಬಲ್ ಶಾಸಕರೊಬ್ಬರು ಎಸ್ಕೇಪ್! 4+1 = 5?
ಶಿಷ್ಯನಿಗೆ ಗುರು ಹೇಳಿದ ಪ್ಲಾನ್ ವರ್ಕೌಟ್ ಆಗಿದೆ. ಈ ಹೊಸ ರಣತಂತ್ರಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ. ಅದಕ್ಕಾಗಿಯೇ ಸಿಎಲ್ಪಿ ಕರೆದ ಕಾಂಗ್ರೆಸ್ ಶಾಸಕಾಂಗ ಸಭೆ ನಾಯಕ ಸಿದ್ದರಾಮಯ್ಯ ರೆಸಾರ್ಟ್ ರೂಮ್ ಖಾಲಿ ಇಡುವಂತೆ ಮೊದಲೇ ತಿಳಿಸಿದ್ದರು ಎನ್ನಲಾಗಿದೆ.
ಮೊದಲೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ಸಿದ್ದರಾಮಯ್ಯ ಇದೀಗ ಕಾಂಗ್ರೆಸ್ ಮತ್ತು ದೋಸ್ತಿ ಸರಕಾರದ ಹೊಸ ಕಾವಲುಗಾರರಾಗಿ ನಿಂತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.