ರಾಜ್ಯದ ಮತ್ತೆ ರಾಜಕಾರಣದಲ್ಲಿ ಹೈಡ್ರಾಮಾ ಶುರುವಾಗಿದೆ. ಬಿಜೆಪಿಯ ಶಾಸಕರು ದೆಹಲಿಗೆ ತೆರಳಿದ್ದ ವೇಳೆಯೇ ಇಂಥದ್ದೊಂದು ಬೆಳವಣಿಗೆ ಆಗುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಈಗ ಜನರು ಕೇಳುತ್ತಿರುವ ಪ್ರಶ್ನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
‘ವಿರೋಧ ಪಕ್ಷ ದಿಲ್ಲಿಯಲ್ಲಿ, ಆಡಳಿತ ಪಕ್ಷ ಬಿಡದಿಯಲ್ಲಿ: ಜನತೆ ಬೀದಿಯಲ್ಲಿ!’ ಸದ್ಯ ಕರ್ನಾಟಕದ ಸ್ಥಿತಿ ಇದೆ ಆಗಿದೆ. ಅಧಿಕೃತ ವಿರೋಧ ಪಕ್ಷ ಎಂದು ಕರೆಸಿಕೊಂಡಿದ್ದ ಬಿಜೆಪಿಯ 104 ಜನ ಶಾಸಕರು ದೆಹಲಿಗೆ ತೆರಳಿ 4 ದಿನ ಕಳೆದಿದೆ. ಐಷಾರಾಮಿ ಹೊಟೇಲ್‌ನಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ಇನ್ನು ಇದೀಗ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿದಿದ್ದು ಶಾಸಕರನ್ನು ನೇರವಾಗಿ ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿದೆ. ಒಂದು ಕಡೆ ಬಿಜೆಪಿ 104 ಶಾಸಕರು ಇನ್ನೊಂದು ಕಡೆ ಕಾಂಗ್ರೆಸ್‌ನ 75 ಶಾಸಕರು ರೆಸಾರ್ಟ್ ವಾಸ್ತವ್ಯ ಮಾಡಿದ್ದಾರೆ.
ಬಸ್ ಹತ್ತದೆ ರೆಬಲ್ ಶಾಸಕರೊಬ್ಬರು ಎಸ್ಕೇಪ್! 4+1 = 5?
ಕೆಲವರು ಹೊಟೆಲ್ ಬಿಟ್ಟು ಹೊರಗೆ ಬಂದಿರಬಹುದು. ಆದರೆ ಅವರೆಲ್ಲರ ಮನಸ್ಸು ಶಾಸಕರನ್ನು ಹಿಡಿದಿಡುವಲ್ಲಿಯೇ ಇದೆ. ಇನ್ನು ಜೆಡಿಎಸ್‌ನ ಶಾಸಕರೂ ಗೌಡರ ಸೂಚನೆ ಪಾಲನೆ ಮಾಡುತ್ತಿದ್ದಾರೆ.
ರಾಜ್ಯದ 150ಕ್ಕೂ ಅಧಿಕ ತಾಲೂಕಿನಲ್ಲಿ ಬರ ಇದೆ. ಸಾಲ ಮನ್ನಾ ಹಣ ಕೈ ಸೇರುವ ನಿರೀಕ್ಷೆಯಲ್ಲಿ ರೈತರು ದಿನ ಕಳೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬ್ಯುಸಿಯಾಗಿದೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಹಿಂದೆಂದೂ ಕಾಣದ ರೆಸಾರ್ಟ್ ರಾಜಕಾರಣ ಶುರುವಾಗಿದೆ.