ಕಾಂಗ್ರೆಸ್ ಶಾಸಕಾಂಗ ಸಭೆ ಮುಕ್ತಾಯವಾದ ಬಳಿಕ ಸಭೆಗೆ ಹಾಜರಾಗಿದ್ದ 75ಶಾಸಕರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಒಬ್ಬ ಶಾಸಕ ಬಸ್ ಹತ್ತದೆ ವಿಧಾನಸೌಧದ ಆವರಣದಿಂದಲೇ ಎಸ್ಕೇಪ್ ಆಗಿದ್ದಾರೆ.
ಬೆಂಗಳೂರು[ಜ.18] ಬಸ್ ಹತ್ತಬೇಕಿದ್ದ ಶಾಸಕ ಎಸ್ಕೇಪ್ ಆಗಿದ್ದಾರೆ. ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್ ಗೌಡ ಪಾಟೀಲ್ ಉಳಿದ ಶಾಸಕರ ಜತೆ ಬಸ್ ಹತ್ತಿಲ್ಲ
ಮುದ್ದೆಬಿಹಾಳದ ಶಾಸಕರಿಗೆ ಪ್ರತಾಪ್ ಗೌಡ ಅವರನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಲಾಗಿತ್ತು. ಆದರೆ ಪ್ರತಾಪ್ ಗೌಡ ತಮ್ಮ ಕಾರಿನಲ್ಲಿಯೆ ತೆರಳಿದ್ದಾರೆ. ಬಸ್ ವಿಳಂಬವಾಗಿದ್ದಕ್ಕೆ ಬಸ್ ಹತ್ತದವರು ನೇರವಾಗಿ ರೆಸಾರ್ಟ್‌ಗೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ; ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ ಶಿಫ್ಟ್!
ರಾಜ್ಯ ರಾಜಕಾರಣ ಮತ್ತೊಮ್ಮೆ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿದ ಬೆನ್ನಲ್ಲೇ, ಕೈ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗುತ್ತಿದೆ.
ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ಈ ಕ್ರಮಕ್ಕೆ ಮುಂದಾಗಿದೆ. ಒಂದು ಕಡೆ ಬಿಜೆಪಿಯ 104 ಶಾಸಕರು ದೆಹಲಿಯ ಐಷರಾಮಿ ಹೊಟೇಲ್ ನಲಲ್ಲಿ ಇದ್ದರೆ ಇತ್ತ ಕಾಂಗ್ರೆಸ್ ಶಾಸಕರು ಈಗಲ್ ಟನ್ ರೆಸಾರ್ಟ್ ಸೇರಿಕೊಂಡಿದ್ದಾರೆ.