ನನ್ನನ್ನು ಸೋಲಿಸುತ್ತೇವೆ ಎಂಬುದು ಬಿಜೆಪಿ ಭ್ರಮೆ: ಸತೀಶ ಜಾರಕಿಹೊಳಿ

Published : Feb 01, 2023, 07:07 PM IST
ನನ್ನನ್ನು ಸೋಲಿಸುತ್ತೇವೆ ಎಂಬುದು ಬಿಜೆಪಿ ಭ್ರಮೆ: ಸತೀಶ ಜಾರಕಿಹೊಳಿ

ಸಾರಾಂಶ

ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ, ಯುವಕರಿಗೆ ಉದ್ಯೋಗ ಸಮಸ್ಯೆ ಉಂಟಾಗಿದ್ದು, ಜನರು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದತ್ತ ವಾಲುತ್ತಿದ್ದಾರೆ. ಜನರ ಸುರಕ್ಷತೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು: ಶಾಸಕ ಸತೀಶ ಜಾರಕಿಹೊಳಿ 

ಯಮಕನಮರಡಿ(ಫೆ.01): ಕಳೆದ 15 ವರ್ಷಗಳಿಂದ ಯಮಕನಮರಡಿ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಕನ್ನಡಿ ಹಿಡಿದು ತೋರಿಸುವ ಅಗತ್ಯವಿಲ್ಲ. ವಿರೋಧಿಗಳಿಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುವುದಿಲ್ಲ ನನ್ನನ್ನು ಸೋಲಿಸುವ ಭ್ರಮೆಯಲ್ಲಿರುವ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಅವರು ಸೋಮವಾರ ಮಣಗುತ್ತಿ ಗ್ರಾಮದಲ್ಲಿ .40 ಲಕ್ಷ ವೆಚ್ಚದಲ್ಲಿ ಸಿಸಿರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿ ಮತ್ತು ಅಂಗನವಾಡಿ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಬರುವ ಎಲ್ಲ ಗ್ರಾಮಗಳ ಮೂಲ ಸಮಸ್ಯೆಗಳನ್ನು ಸ್ಪಂದಿಸಿ ರಸ್ತೆ, ರೈತರಿಗೆ ನೀರಾವರಿ ಸೌಲಭ್ಯ, ಶಿಕ್ಷಣ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮಾದರಿ ಕ್ಷೇತ್ರವನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದರು.

ಕೇಂದ್ರ ಬಜೆಟ್‌ ಬಡವರು, ಮಧ್ಯಮವರ್ಗ ವಿರೋಧಿ; ಕಾರ್ಪೋರೆಟ್‌ ಪರ: ಸಿದ್ದರಾಮಯ್ಯ

ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ, ಯುವಕರಿಗೆ ಉದ್ಯೋಗ ಸಮಸ್ಯೆ ಉಂಟಾಗಿದ್ದು, ಜನರು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದತ್ತ ವಾಲುತ್ತಿದ್ದಾರೆ. ಜನರ ಸುರಕ್ಷತೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು. ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬಾರದಿದ್ದರೂ ಮತದಾರರು ವಿಜಯಶಾಲಿಯಾಗಿ ಮಾಡಿದ್ದು ಇತಿಹಾಸವಾಗಿದೆ. ಈ ಬಾರಿ ಚುನಾವಣೆ ಯಾವ ರೀತಿ ಮಾಡಬೇಕು ಎಂದು ನಮಗೆ ಗೊತ್ತಿದ್ದು, ನಾನು ಗೆಲ್ಲುವುದು ನಿಶ್ಚಿತ. ಅತ್ಯಧಿಕ ಮತಗಳ ಗೆಲುವಿಗಾಗಿ ರಣತಂತ್ರ ರೂಪಿಸಲಾಗುತ್ತಿದೆ. ಬಿಜೆಪಿಯವರು ನನ್ನನ್ನು ಸೋಲಿಸುವ ಮಾತನ್ನು ಬಿಟ್ಟು, ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಬೇಕು ಎಂದು ಹೇಳಿದರು.

ಮಣಗುತ್ತಿ ಗ್ರಾಮದ ಕಾಂಗ್ರೆಸ್‌ ಮುಖಂಡರಾದ ಸುರೇಶ ಬೆಣ್ಣಿ, ಗ್ರಾ.ಪಂ. ಸದಸ್ಯ ಮಹಾನಿಂಗ ಶಿರಗುಪ್ಪಿ ಮಾತನಾಡಿದರು. ಈ ಸಂದರ್ಭದಲ್ಲಿ ಮಣಗುತ್ತಿ ಗ್ರಾ.ಪಂ. ಅಧ್ಯಕ್ಷೆ ಶಾಲಾ ಸುರೇಶ ಬೆಣ್ಣಿ, ಜಿ.ಪಂ. ಮಾಜಿ ಸದಸ್ಯೆ ಮನೀಷಾ ಪಾಟೀಲ, ಹುಕ್ಕೇರಿ ಸಿಡಿಪಿಒ ಮಂಜುನಾಥ ಪರಸನ್ನವರ, ಎಸಿಡಿಪಿಒ ಹೊಳೆಪ್ಪಾ ಎಚ್‌. ಗಣ್ಯರಾದ ಪ್ರಮೋದ ರಗಶೆಟ್ಟಿ, ಈರಣ್ಣಾ ದೇಸಾಯಿ, ದಯಾನಂದ ಪಾಟೀಲ, ಕಿರಣಸಿಂಗ ರಜಪೂತ, ಮತ್ತು ಶರದ ಪಾಟೀಲ, ಜಿಂಜಾರ ಪಾಟೀಲ, ಉಜ್ವಲಾ ಪಾಟೀಲ, ರಮೇಶ ಸಕಾರಾಮ ಪಾಟೀಲ, ಡಿಕ್ಕು ಮೆಂಡೊಳ್ಳೆ, ಸತ್ತೆಪ್ಪಾ ಶಿವನಾಯ್ಕ, ಬಸವರಾಜ ಧರನಟ್ಟಿ, ಅರ್ಜುನ ಘಸ್ತಿ, ಕಾಡೇಶ ಮೇಕಳಿ, ಹಾಗೂ ಸಮಸ್ತ ಗ್ರಾಮಸ್ಥರು ಅಂಗನವಾಡಿ ಮೇಲ್ವಿಚಾರಕಿ ಶೋಬಾ ಗಂಗನ್ನವರ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಸುನೀಲ ಹುಕ್ಕೇರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ