* ಸಿಟಿ ರವಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
* ವಾಜಪೇಯಿ ಮದ್ಯ ವ್ಯಸನಿ, ಬಾರ್- ಪಬ್‍ಗಳಿಗೆ ಅವರ ಹೆಸರೇ ಇಡ್ರಿ ನೋಡೋಣ
* ಬಿಜೆಪಿಗೆ ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಟಾಂಗ್
ಕಲಬುರಗಿ, (ಆ.14): ದೇಶ ಕಂಡಿರುವಂತಹ ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾ ಹೆಸರುಗಳನ್ನು ಮುಂದಿಟ್ಟಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಸಾಗಿರುವ ಹೇಳಿಕೆ ಸಮರದಲ್ಲೀಗ ಇನ್ನೋರ್ವ ಮಾಜಿ ಪ್ರಧಾನಿ, ಮುತ್ಸದ್ದಿ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಹೆಸರು ಎಳೆದು ತರಲಾಗಿದೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹುಕ್ಕಾ ಸೇದುತ್ತಿದ್ದರೆಂದು ಹುಕ್ಕಾಬಾರ್ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮದ್ಯ ವ್ಯಸನಿಯಾಗಿದ್ದರು, ಮಾಂಸಾಹಾರಪ್ರಿಯರಾಗಿದ್ದರು. ಎಲ್ಲಾ ಬಾರ್, ಕಸಾಯಿ
ಖಾನೆಗಳಿಗೆ ಅಟಲ್ ಬಿಹಾರಿ ಹೆಸರಿಡಿ ನೋಡೋಣ ಎಂದು ಬಿಜೆಪಿಯವರ ಕಾಲೆಳೆದಿದ್ದಾರೆ.
undefined
ನೆಹರೂ ಹುಕ್ಕಾ ಬಾರ್ V/S ವಾಜಪೇಯಿ ಬಾರ್: ಖರ್ಗೆ ಮಾತಿಗೆ ಖಂಡ್ರೆ ಸಾಥ್
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಮಾಜಿ ಪ್ರಧಾನಿ ನೆಹರು ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತಾಡುವುದರಿಂದ ನೆಹರು ಅವರ ಘನತೆ ಏನೂ ಕಡಿಮೆ ಆಗುವುದಿಲ್ಲ. ಹಾಗೆಯೇ ನಾನು ವಾಜಪೇಯಿ ಅವರ ಬಗ್ಗೆ ಮಾತಾಡುವುದರಿಂದ ವಾಜಪೇಯಿ ಘನತೆ ಸಹ ಕಡಿಮೆ ಆಗುವುದಿಲ್ಲ, ಬಿಜೆಪಿಯಲ್ಲಿದ್ದವರೆಲ್ಲರೂ ಸಾಚಾಗಳಲ್ಲ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಸಂಘ ಪÀರಿವಾರದವರ ತ್ಯಾಗ- ಬಲಿದಾನ ಇಲ್ಲವೇ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.