ಮುಂದಿನ ಸಿಎಂ ಯಾರೆಂದು ಕೇಳಿದ್ರೆ ಶಾಸಕ ಪ್ರದೀಪ್​ ಈಶ್ವರ್​ ಹೀಗೆ ಹೇಳೋದಾ? ಏನಿದರ ಮರ್ಮ?

Published : May 07, 2025, 06:13 PM ISTUpdated : May 10, 2025, 05:50 PM IST
ಮುಂದಿನ ಸಿಎಂ ಯಾರೆಂದು ಕೇಳಿದ್ರೆ ಶಾಸಕ ಪ್ರದೀಪ್​ ಈಶ್ವರ್​ ಹೀಗೆ ಹೇಳೋದಾ? ಏನಿದರ ಮರ್ಮ?

ಸಾರಾಂಶ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಯೂಟ್ಯೂಬ್ ಸಂದರ್ಶನವೊಂದರಲ್ಲಿ "ಮುಂದಿನ ಸಿಎಂ ಯಾರು?" ಎಂಬ ಪ್ರಶ್ನೆಗೆ "ನಮ್ಮ ಪಕ್ಷದವರು" ಎಂದು ಉತ್ತರಿಸಿ ಎಡವಿದ್ದಾರೆ. ತಪ್ಪು ಉತ್ತರ ನೀಡಬೇಕಿದ್ದ ಆಟದಲ್ಲಿ ಈ ಉತ್ತರ ಪರೋಕ್ಷವಾಗಿ ಬೇರೆ ಪಕ್ಷದವರು ಸಿಎಂ ಆಗುತ್ತಾರೆ ಎಂಬಂತೆ ಭಾಸವಾಗಿದೆ. ಬಿಗ್‌ಬಾಸ್‌ನಿಂದ ಹಿಂದಿರುಗಿದ ನಂತರ ಪ್ರದೀಪ್ ಮತ್ತೆ ಸುದ್ದಿಯಲ್ಲಿದ್ದಾರೆ.

ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಆಯ್ಕೆಯಾದಾಗಿನಿಂದಲೂ ಸಕತ್​ ಸದ್ದು ಮಾಡುತ್ತಿರುವವರೇ. ಅವರು ಸದ್ದು ಮಾಡಿದಾಗಲೆಲ್ಲಾ ಟ್ರೋಲ್​ ಆಗಿದ್ದೇ ಹೆಚ್ಚು. ತಮ್ಮ ಮಾತಿನ ವೈಖರಿಯಿಂದ ಎಂಥವರನ್ನೂ ಮರಳು ಮಾಡುವ ತಾಕತ್ತು ಪ್ರದೀಪ್​​ ಅವರಿಗೆ ಇದೆ. ಜನರಿಗಾಗಿ ಏನೆಲ್ಲಾ ಮಾಡಬೇಕು, ಮಾಡುತ್ತೇನೆ ಎನ್ನುವ ದೊಡ್ಡ ಲಿಸ್ಟ್​ ಕೊಟ್ಟಿವರು ಅವರು. ಕೊನೆಗೆ ಇಡೀ ವ್ಯವಸ್ಥೆಯನ್ನೇ ಸರಿ ಮಾಡುತ್ತೇನೆ ಎಂದೆಲ್ಲಾ ಭಾಷಣ ಮಾಡುತ್ತಲೇ ಸದ್ಯ ಸೈಲೆಂಟ್​ ಆಗಿದ್ದಾರೆ. ಕಳೆದ  ಕೆಲವು ತಿಂಗಳುಗಳಿಂದ ಇವರು ಸೈಲೆಂಟ್​ ಆಗಿದ್ದು ಯಾಕೆ ಎಂದೂ ಅವರ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ.  

ಸದ್ಯ ಸೈಲೆಂಟ್​ ಆಗಿರೋ ಪ್ರದೀಪ್​ ಅವರು ಈಗ ಮತ್ತೆ ಸದ್ದು ಮಾಡ್ತಿರಲು ಕಾರಣ, ಯುಟ್ಯೂಬರ್​ ಕೀರ್ತಿ ಅವರು ತಮ್ಮ ಚಾನೆಲ್​ನಲ್ಲಿ ಇವರ ಸಂದರ್ಶನ ಮಾಡಿರುವ ಬಗ್ಗೆ. ಕೀರ್ತಿ ಎಂಟರೇನ್​ಮೆಂಟ್​ ಯುಟ್ಯೂಬ್​ ಚಾನೆಲ್​ನಲ್ಲಿ ಪ್ರದೀಪ್​ ಅವರು ತಮ್ಮ ಜೀವನದ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಪ್ರೀತಿ, ಪ್ರೇಮ ಇತ್ಯಾದಿಗಳ ಬಗ್ಗೆಯೂ ತಮ್ಮ ಎಂದಿನ ವಾಕ್ಚಾತುರ್ಯವನ್ನು ಮೆರೆದಿದ್ದಾರೆ. ಆದರೆ ಮುಂದಿನ ಸಿಎಂ ಯಾರು ಎನ್ನುವ ಉಲ್ಟಾ ಪ್ರಶ್ನೆಯಲ್ಲಿ ಮಾತ್ರ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾರೆ. ರಾಜಕಾರಣಿಗಳು ಸದಾ ತಮ್ಮ ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಬೇಕು. ಅದರಲ್ಲಿಯೂ ಮಾತಿನ ಚತುರ ಎಂದೇ ಫೇಮಸ್​ ಆಗಿರೋ ಪ್ರದೀಪ್​ ಅವರು ಹೀಗೆ ಹೇಳಿರುವುದು ಮಾತ್ರ ಸ್ವಲ್ಪ ಸೋಜಿಗ ಎನ್ನಿಸುತ್ತಿದೆ.

Operation Sindoor: ಸಿಂದೂರ ಕಸಿದ ಉಗ್ರರ ಮಟ್ಟ ಹಾಕಲು ನಿಂತ ಸೋಫಿಯಾ, ವ್ಯೋಮಿಕಾ

ಅಷ್ಟಕ್ಕೂ ಆಗಿದ್ದೇನೆಂದರೆ, ಕೀರ್ತಿ ಅವರು, ನಾನು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇನೆ. ಅದಕ್ಕೆ ಸರಿಯಾದ ಉತ್ತರ ಕೊಡಬಾರದು. ತಪ್ಪು ಉತ್ತರ ಕೊಡಬೇಕು ಎಂದಿದ್ದಾರೆ. ಎಂಥವರಿಗೂ ಇದು ಸ್ವಲ್ಪ ಕಷ್ಟದ ವಿಷಯವೇ. ಆದರೆ ಸದಾ ಸುಳ್ಳು ಹೇಳುವ ಬಹುತೇಕ ರಾಜಕಾರಣಿಗಳಿಗೆ ಇದೇನೂ ಕಷ್ಟ ಆಗಲಿಕ್ಕಿಲ್ಲವೆಂದೇನೋ ಗೊತ್ತಿಲ್ಲ. ಸದಾ ತಮಾಷೆಯಿಂದಲೇ ತಮ್ಮ ಕಾರ್ಯಕ್ರಮ ನಡೆಸಿಕೊಡುವ ಕೀರ್ತಿ ಅವರು ಈ ಪ್ರಶ್ನೆಯನ್ನು ಇಟ್ಟಿದ್ದಾರೆ. ಅದರಲ್ಲಿ ಮೊದಲು ನಿಮ್ಮ ಹೆಸರೇನು ಎಂದು ಕೇಳಿದಾಗ, ಪ್ರದೀಪ್​ ಅವರು ಸಿದ್ದರಾಮಯ್ಯ ಎಂದಿದ್ದಾರೆ. ಈ ಮೂಲಕ ತಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದು ಪರೋಕ್ಷವಾಗಿ ತಿಳಿಸಿದ್ದಾರೆ . ಆದರೆ ಎರಡನೆಯ ಪ್ರಶ್ನೆಯಲ್ಲಿಯೇ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಅದೇನಂದರೆ, ಮುಂದಿನ ಸಿಎಂ ಯಾರು ಎಂದು ಕೇಳಿದ್ದಾರೆ. ಈ ರೌಂಡ್​​ ಇರುವುದು ಸತ್ಯವಲ್ಲದ ಮಾತು ಹೇಳುವುದಕ್ಕಾಗಿ. ಅದನ್ನು ತಮ್ಮ ಹೆಸರು ಸಿದ್ದರಾಮಯ್ಯ ಎನ್ನುವ ಮೂಲಕ ಹೆಸರನ್ನು ತಪ್ಪು ಹೇಳಿದರೂ, ಯಾರು ಸಿಎಂ ಆಗ್ತಾರೆ ಎನ್ನುವ ಪ್ರಶ್ನೆಗೆ ನಮ್ಮ ಪಕ್ಷದವರೇ ಎಂದು ಬಿಟ್ಟಿದ್ದಾರೆ! ಇಲ್ಲಿಯೇ ಎಡವಟ್ಟಾಗಿರೋದು. ಪರೋಕ್ಷವಾಗಿ ಅವರು ತಮ್ಮ ಪಕ್ಷದವರು ಅಲ್ಲದವರು ಸಿಎಂ ಆಗುತ್ತಾರೆ ಎಂದು ಅರ್ಥ ಬರುವಂತೆ ಆಗಿಬಿಟ್ಟಿದೆ! ಆ ಕ್ಷಣದಲ್ಲಿ ಕೀರ್ತಿ ಅವರು ಏನೋ ಹೇಳಲು ಹೋದರೂ ಬೇಡ ಎಂದು ಸುಮ್ಮನೇ ಬಿಟ್ಟಿದ್ದಾರೆ. ಆ ಬಳಿಕ ಇನ್ನಷ್ಟು ಗೊಂದಲಮಯ ಪ್ರಶ್ನೆ ಕೇಳಿದ್ದು, ಅದರಲ್ಲಿ ಕೆಲವೊಂದಕ್ಕೆ ಪ್ರದೀಪ್​ ಸರಿಯಾದ ಉತ್ತರ, ಕೆಲವೊಂದಕ್ಕೆ ತಪ್ಪು ಉತ್ತರ ಕೊಟ್ಟಿದ್ದಾರೆ! ಈ ಬಗ್ಗೆ ಕೆಲವರು ಕಮೆಂಟ್​ಗಳಲ್ಲಿ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

ಅಷ್ಟಕ್ಕೂ ಪ್ರದೀಪ್​ ಅವರು, ಇನ್ನಷ್ಟು ಫೇಮಸ್​​ ಆಗಿದ್ದು, ಬಿಗ್​ಬಾಸ್​​ಗೆ ಹೋಗಿದ್ದರಿಂದ. ಹೋದ ದಿನದಿಂದಲೇ ಸಕತ್​ ಟ್ರೋಲ್​ಗೆ ಒಳಗಾಗಿದ್ದ ಪ್ರದೀಪ್​ ಅವರು ಹೋದ ಒಂದೇ ದಿನಕ್ಕೆ ಮರಳಿದ್ದರು.  ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದೇ ಹೇಳಲಾಗಿತ್ತು. ಅವರು ಬಿಗ್​ಬಾಸ್ ಮನೆಯೊಳಕ್ಕೆ ಒಂದು ದಿನ ಲೇಟಾಗಿ ಎಂಟ್ರಿ ಕೊಟ್ಟಿದ್ದರು. ಅವರನ್ನು ನೋಡಿ ಉಳಿದ ಸ್ಪರ್ಧಿಗಳಿಗೂ ಅಚ್ಚರಿಯಾಗಿತ್ತು, ಅದೇ ರೀತಿ ಪ್ರೇಕ್ಷಕರೂ ಸಕತ್​ ಅಚ್ಚರಿ ಪಟ್ಟುಕೊಂಡಿದ್ದರು. ಆದರೆ  ಅವರು ಹೋದದ್ದು ಅತಿಥಿಯಾಗಿ. ಅವರು ಬಿಗ್​ಬಾಸ್​ ಮನೆಯೊಳಕ್ಕೆ ಹೋದ ಒಂದೇ ದಿನದಲ್ಲಿ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಟೀಕೆಗಳು ಶುರುವಾಗಿದ್ದವು. ಇವರ ಅಮಾನತಿಗೆ ವಿಪಕ್ಷ ಆಗ್ರಹಿಸಿದ್ದವು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿಯೂ ನೂರಾರು ರೀತಿಯ ಮೀಮ್ಸ್​ಗಳು ಹರಿದಾಡುತ್ತಿದ್ದವು. ಇವರನ್ನು ಆಯ್ಕೆ ಮಾಡಿ ಕಳುಹಿಸಿದ್ದು, ತಮ್ಮ ಕ್ಷೇತ್ರವನ್ನು ಉದ್ಧಾರ ಮಾಡಲು, ಬಿಗ್​ಬಾಸ್​ ಮನೆಗೆ ಹೋಗಿ ಸೇರಿಕೊಳ್ಳಲು ಅಲ್ಲ ಅಂದೆಲ್ಲಾ ಟೀಕೆಗಳು ಕೇಳಿಬಂದಿದ್ದವು, ಖುದ್ದು ಕಾಂಗ್ರೆಸ್ಸಿಗರೂ ಕೆಲವರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಕೊನೆಗೆ ಅವರು ಹೊರಕ್ಕೆ ಬಂದಿದ್ದರು.  ತಾವು ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿದ್ದ ಕಾರಣ ಕೊಟ್ಟು ಮತ್ತಷ್ಟು ಟ್ರೋಲ್​ಗೆ ಒಳಗಾಗಿದ್ದರು.  ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಮನೆಗೆ  ಪ್ರವೇಶ ಮಾಡಿರುವುದಾಗಿ ಹೇಳಿದ್ದರು. ಬಿಗ್ ಬಾಸ್​ನಿಂದ  ಬಂದ ಹಣವನ್ನ ಅಪ್ಪ‌ಅಮ್ಮನಿಲ್ಲದ ಮಕ್ಕಳಿಗೆ ನೀಡಲು‌ ನಿರ್ಧಾರ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದರು.  

ಶಂಕರ್​ನಾಗ್​ ನಿಗೂಢ ಸಾವಿನ ರಹಸ್ಯ ತೆರೆದಿಟ್ಟ ಈ ವಿಡಿಯೋ: ಅಂದು ಆಗಿದ್ದೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ