ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟು!

By Kannadaprabha NewsFirst Published Oct 16, 2024, 11:06 AM IST
Highlights

ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದರೂ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತ ಗಂಭೀರ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. 

ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದ್ದರೂ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತ ಗಂಭೀರ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಕೂಟ (ಜೆಡಿಎಸ್-ಬಿಜೆಪಿ) ತನ್ನ ಅಭ್ಯರ್ಥಿ ಅಂತಿಮಗೊಳಿಸಲಿ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಅಭ್ಯರ್ಥಿ ಯಾರು ಎಂಬುದನ್ನು ಗೌಪ್ಯವಾಗಿಡುವ ಪ್ರಯತ್ನ ನಡೆದಿದ್ದರೆ, ಶಿಗ್ಗಾವಿ ಕ್ಷೇತ್ರದಲ್ಲಿ ಟಿಕೆಟ್ ಅನ್ನು ಈ ಹಿಂದಿನಂತೆ ಮುಸ್ಲಿಮರಿಗೆ ನೀಡಬೇಕೋ ಅಥವಾ ಮುಸ್ಲಿಮೇತರರಿಗೆ ನೀಡಬೇಕೋ ಎಂಬುದನ್ನೇ ನಿರ್ಧರಿಸಲು ಸಾಧ್ಯವಾಗಿಲ್ಲ. ಇನ್ನು ಸಂಡೂರು ಕ್ಷೇತ್ರದಲ್ಲಿ ಸಂಡೂರು ಅಭ್ಯರ್ಥಿ ಬಗ್ಗೆ ಯಾವುದೇ ನಿರ್ಧಾರವಾಗಿ ಲದಿದರೂ ಸಂಸದ ಇ. ತುಕಾರಾಂ ಅವರು ಯಾರಿಗೆ ಹೇಳುತ್ತಾರೋ ಅವರಿಗೆ ಟಿಕೆಟ್ ನೀಡೋಣ ಎಂಬ ನಿರ್ಧಾರವನ್ನು ರಾಜ್ಯ ನಾಯಕತ್ವ ಮಾಡಿಕೊಂಡಿದೆ.

ಶಿಗ್ಗಾಂವಿ- ಮುಸ್ಲಿಂ ಅಥವಾ ಮುಸ್ಲಿಮೇತರ?: ಶಿಗ್ಗಾವಿ ಕ್ಷೇತ್ರದಲ್ಲಿ ಕಳೆದ 5 ಬಾರಿ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದರೂ ಪಕ್ಷಕ್ಕೆ ಸೋಲಾಗಿದೆ. ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸುವುದರಿಂದ ಹಿಂದೂ ಮತಗಳೆಲ್ಲ ಕಾಂಗ್ರೆಸ್ ವಿರುದ್ಧವಾಗಿ ಕ್ರೂಡೀಕರಣ ಗೊಂಡು ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತಿದೆ. ಹೀಗಾಗಿ ಈ ಬಾರಿ ಹಿಂದೂ ಅಭ್ಯರ್ಥಿಗೆ ಅವಕಾಶ ನೀಡಿದರೆ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯ ಮುಸ್ಲಿಂ ನಾಯಕರಿಗೆ ಬೇರೆ ಅಧಿಕಾರ ನೀಡೋಣ ಎನ್ನುವ ಅಭಿಪ್ರಾಯ ಪಕ್ಷದ ನಾಯಕರದ್ದು. ಆದರೆ, ಇದಕ್ಕೆ ಮುಸ್ಲಿಂ ನಾಯಕರು ಒಪ್ಪುತ್ತಿಲ್ಲ. 

Latest Videos

3 ಹಗರಣ: ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು

ಇದು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರವಾದ್ದರಿಂದ ಅವರಿಗೆ ಟಿಕೆಟ್‌ ನೀಡಿದ್ದರೆ ಬೇರೆ ಕ್ಷೇತ್ರಗಳಲ್ಲಿ ಸಮಾನ ಅವಕಾಶದ ವಿಚಾರದಲ್ಲಿ ಪಕ್ಷದ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ ಮುಸ್ಲಿಮರನ್ನೇ ಕಣಕ್ಕಿಳಿಸಬೇಕು ಎನ್ನುವುದು ಪಕ್ಷದ ಮತ್ತೊಂದು ಬಣದ ವಾದವಾಗಿದೆ. ಮುಸ್ಲಿಮೇತರ ಅಭ್ಯರ್ಥಿಗಳ ಪೈಕಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರ ಪುತ್ರ ಸಂಜಯ್ ಅವರನ್ನು ಈ ಕ್ಷೇತ್ರಕ್ಕೆ ಕರೆತರಬೇಕೆಂಬ ಕೂಗು ಸ್ಥಳೀಯ ಕಾಂಗ್ರೆಸ್ ವಲಯದಲ್ಲಿದೆ. ಇನ್ನು ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಆ‌.ಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ್ ನೀಲರಗಿ ಮತ್ತು ಆರ್.ಎಸ್.ಪಾಟೀಲ್ ಪ್ರಮುಖ ಆಕಾಂಕ್ಷಿಗಳಾಗಿದ್ದರೆ, ಮುಸ್ಲಿಮರಲ್ಲಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಯಾಸೀರ್ ಖಾನ್ ಪಠಾಣ್ ಆಕಾಂಕ್ಷಿಗಳು.

ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಹೆಸರು ಗಪ್‌ಚುಪ್!: ಚನ್ನಪಟ್ಟಣದಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಆದರೆ, ಅದನ್ನು ಯಾರೇ ಅಭ್ಯರ್ಥಿ ಯಾದರೂ ತಾವೇ ಅಭ್ಯರ್ಥಿಯಾದಂತೆ ಪಣತೊಟ್ಟು ಕೆಲಸ ಮಾಡುವೆ ಎಂಬರ್ಥದಲ್ಲಿ ಅವರು ಹೇಳುತ್ತಿದ್ದಾರೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳುತ್ತವೆ ಕಾಂಗ್ರೆಸ್ ಮೂಲಗಳು. ಏಕೆಂದರೆ,ಈ ಕ್ಷೇತ್ರದ ಗೆಲುವಿಗೆ ಡಿ.ಕೆ. ಸಹೋದರರು ಹಟತೊಟ್ಟಿದ್ದು, ಯಾರನ್ನೇ ಅಭ್ಯರ್ಥಿ ಮಾಡಿದರೂ ಕಾಂಗ್ರೆಸ್ ಗೆಲುವಿಗೆ ಶತಾಯಗತಾಯ ಪ್ರಯತ್ನ ಮಾಡಲಿದ್ದಾರೆ. ಎನ್ನಲಾಗುತ್ತಿದೆ. ಹೀಗಾಗಿಯೇ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ಗಪ್‌ಚುಪ್ ಧೋರಣೆ ಅನುಸರಿಸುತ್ತಿದೆ.
ಇದಕ್ಕೆ ಕಾರಣ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಮೊದಲು ಘೋಷಣೆಯಾಗಲಿ ಅನಂತರ ತಮ್ಮ ಅಭ್ಯರ್ಥಿ ಅಂತಿಮ ಗೊಳಿಸೋಣ ಎಂಬ ತಂತ್ರ ಕಾರಣ. 

ಒಂದು ವೇಳೆ ಮೈತ್ರಿ ಪಕ್ಷದ ಒಳಜಗಳ ದಿಂದ ಸಿ.ಪಿ.ಯೋಗೇಶರ್‌ಗೆ ಟಿಕೆಟ್ ಸಿಗದೆ ಕಾಂಗ್ರೆಸ್ ಕಡೆ ವಾಲಿದರೆ ಅವರನ್ನೇ ಅಭ್ಯರ್ಥಿಯಾ ಗಿಸುವ ಸಾಧ್ಯತೆಯೂ ಇದೆ. ಇದಾಗದ ಪಕ್ಷದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ ಮೂಲ ಗಳು. ಇವರ ಜೊತೆಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರೂ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಲೆಕ್ಕಾಚಾರವೂ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಪೂರ್ಣ ಆತ್ಮವಿಶ್ವಾಸ ಮೂಡಿದರೆ ಡಿ.ಕೆ. ಶಿವಕುಮಾರ್ ಅವರೇ ಸ್ಪರ್ಧಿಸುವುದು. ನಂತರ ಕನಕಪುರ ಕ್ಷೇತ್ರವನ್ನು ತಮ್ಮ ಸಹೋದರ ಡಿ.ಕೆ.ಸುರೇಶ್‌ಗೆ ಬಿಟ್ಟುಕೊಡುವುದು. ಆದರೆ, ಅಂತಹ ಪ್ರಯೋಗ ನಡೆಯುವ ಸಾಧ್ಯತೆ ನೂರರಲ್ಲಿ ಒಂದು ಮಾತ್ರ ಎನ್ನಲಾಗುತ್ತಿದೆ.

ಸಂಡೂರಲ್ಲಿ ಪತ್ನಿಗೋ ಪುತ್ರಿಗೋ?: ವಾಸ್ತವವಾಗಿ ಬಳ್ಳಾರಿ ಲೋಕಸಭಾ ಚುನಾವಣೆ ವೇಳೆ ತಮ್ಮ ಪುತ್ರಿ ಸೌಪರ್ಣಿಕಾ ತುಕಾರಾಂ ಅವರಿಗೆ ಟಿಕೆಟ್ ನೀಡುವಂತೆ ತುಕಾರಾಂ ಕಾಂಗ್ರೆಸ್ ನಾಯಕತ್ವವನ್ನು ಕೇಳಿದ್ದರು. ಆಗ ಪಕ್ಷದ ನಾಯಕರು, 'ಈಗ ನೀವೇ ಚುನಾವಣೆಗೆ ಸ್ಪರ್ಧಿಸಿ, ಮುಂದೆ ನಿಮ್ಮ ಮಗಳಿಗೆ ಉಪಚುನಾ ವಣೆಯಲ್ಲಿ ಅವಕಾಶ ನೀಡೋಣ' ಎಂದು ಭರವಸೆ ನೀಡಿದ್ದರು. ಹಾಗಾಗಿ 4 ಬಾರಿ ಸಂಡೂರಿನಿಂದ ಶಾಸಕರಾಗಿ ಆಯ್ಕೆ ಯಾಗಿದ್ದ ತುಕಾರಾಂ ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಈಗ ಉಪಚು ನಾವಣೆಗೆ ಅವರ ಮಗಳ ಹೆಸರೇ ಮುಂಚೂಣಿಯಲ್ಲಿದೆ. ಇದರ ಜೊತೆಗೆ ತುಕಾರಾಂ ಅವರ ಪತ್ನಿ ಅನ್ನಪೂರ್ಣ, ಬಳ್ಳಾರಿ ಜಿ.ಪಂ. ಮಾಜಿ ಸದಸ್ಯ ಲಕ್ಷ್ಮಣ್ ಅವರ ಹೆಸರೂ ಚಾಲ್ತಿಯಲ್ಲಿದೆ. ಈ ಮೂರರಲ್ಲಿ ತುಕಾರಾಂ ಯಾವ ಹೆಸರು ಸೂಚಿಸು ತ್ತಾರೋ ಅವರೇ ಅಂತಿಮ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಳ ಮೀಸಲಾತಿ ಜಾರಿಗೆ ಆಗ್ರಹ: ಚಾಮರಾಜನಗರದಲ್ಲಿ ಬೃಹತ್ ಪಾದಯಾತ್ರೆ

3 ಕ್ಷೇತ್ರದ ಕೈ ಆಕಾಂಕ್ಷಿಗಳು
ಸಂಡೂರು: ಸಂಸದ ತುಕಾರಾಂ ಪುತ್ರಿ ಸೌಪರ್ಣಿಕಾ ತುಕಾರಾಂ, ಪತ್ನಿ ಅನ್ನಪೂರ್ಣ ತುಕಾರಾಂ, ಜಿ.ಪಂ. ಸದಸ್ಯ ಲಕ್ಷ್ಮಣ್‌.
ಶಿಗ್ಗಾವಿ: ಸಂಜಯ್ ಬೈರತಿ ಸುರೇಶ್, ಆರ್.ಎಸ್. ಪಾಟೀಲ್, ಸೋಮಣ್ಣ ಬೇವಿನಮರದ, ಆರ್.ಶಂಕರ್, ಸಂಜೀವ ನೀರಲಗಿ, ಅಜ್ಜಂಪೀ‌ ಖಾದ್ರಿ, ಯಾಸಿರ್ ಪಠಾಣ್.
ಚನ್ನಪಟ್ಟಣ: ಡಿ.ಕೆ.ಸುರೇಶ್, ಪುಟ್ಟಣ್ಣ

click me!