ಬಿಜೆಪಿಯಲ್ಲಿ ವರ್ಚಸ್ಸು ಕಡಿಮೆಯಾಗಿದ್ದರಿಂದ ಬೊಮ್ಮಾಯಿಗೆ ಹಾರ್ಟ್‌ ಅಟ್ಯಾಕ್‌ ಆಗಿದೆ: ಕೋನರಡ್ಡಿ

By Kannadaprabha News  |  First Published Oct 29, 2023, 12:39 PM IST

ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ  ವರ್ಚಸ್ಸು ಕಡಿಮೆಯಾಗಿರುವುದರಿಂದ ಅವರಿಗೆ ಹಾರ್ಟ್‌ ಅಟ್ಯಾಕ್‌ ಆಗಿದೆ ಎಂದು ಭಾಷಣದಲ್ಲಿ ಹೇಳಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೊಳಗಾಗಿದೆ.


ಹುಬ್ಬಳ್ಳಿ(ಅ.29): ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಾಘಾತವಾಗಿರುವುದನ್ನು ಶಾಸಕ ಎನ್‌.ಎಚ್‌. ಕೋನರಡ್ಡಿ ವ್ಯಂಗ್ಯವಾಡಿದ್ದಾರೆ. ಬಿಜೆಪಿಯಲ್ಲಿ ಬೊಮ್ಮಾಯಿ ವರ್ಚಸ್ಸು ಕಡಿಮೆಯಾಗಿರುವುದರಿಂದ ಅವರಿಗೆ ಹಾರ್ಟ್‌ ಅಟ್ಯಾಕ್‌ ಆಗಿದೆ ಎಂದು ಭಾಷಣದಲ್ಲಿ ಹೇಳಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೊಳಗಾಗಿದೆ.

ಇಲ್ಲಿನ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕೋನರಡ್ಡಿ, ಇತ್ತೀಚಿಗೆ ಬೊಮ್ಮಾಯಿ ಅವರಿಗೆ ಹೃದಯಾಘಾತವಾಗಿದೆ. ಆದರೆ ಅವರಿಗೆ ಹೃದಯಾಘಾತ ಏತಕ್ಕೆ ಆಗಿದೆ ಎಂದು ಪ್ರಶ್ನಿಸಿದರು.

Tap to resize

Latest Videos

ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ ಟ್ವಿಸ್ಟ್‌: ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಹೆಸರೇಳಿದ ಆರೋಪಿ

ಅಲ್ಲದೇ, ತಾವೇ ಅದಕ್ಕೆ ಉತ್ತರಿಸುತ್ತಾ, ಪಕ್ಷದಲ್ಲಿ ಅವರ ವರ್ಚಸ್ಸು ಕಡಿಮೆಯಾಗಿರುವುದನ್ನು ಅರಿತಿದ್ದಾರೆ. ಇಂದು ಬಿಜೆಪಿ ಅಧೋಗತಿಗೆ ಹೋಗಿರುವುದರ ಕುರಿತು ಚಿಂತೆ ಮಾಡಿರುವುದರಿಂದಲೇ ಅವರಿಗೆ ಹೃದಯಾಘಾತವಾಗಿದೆ ಎಂದು ವ್ಯಂಗ್ಯವಾಡಿದರು. ಸಭೆಯಲ್ಲಿ ಅವರದೇ ಪಕ್ಷದ ಮುಖಂಡರು ಸಹ ಇದಕ್ಕೆ ಬೇಸರಿಸಿಕೊಂಡರು. ಜತೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೊಳಗಾಗಿದೆ.

click me!