ಸಿಎಂ ಬದಲಾವಣೆ ಪ್ರಶ್ನೆಯೇ ಬರಲ್ಲ: ಸಚಿವ ಸತೀಶ್ ಜಾರಕಿಹೊಳಿ‌ಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟ ಲಕ್ಷ್ಮಣ ಸವದಿ!

By Girish Goudar  |  First Published Oct 17, 2024, 4:34 PM IST

ದಲಿತರು ಸಿಎಂ ಆಗ್ಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಸವದಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಯಾರ ಬೇಕಾದರೂ ಸಿಎಂ ಆಗಬಹುದು. ಸಿಎಂ ಆಗಬಾರದು ಅಂತ ಸಂವಿಧಾನದಲ್ಲಿ ಬರೆದಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಿಎಂ ಆಗುವ ಅವಕಾಶವಿದೆ ಅಂತ ಇದೆ. ಮತದಾರರಿಗೂ ಗದ್ದುಗೆಗೆ ಹೋಗುವ ಅವಕಾಶ ಇದೆ: ಶಾಸಕ ಲಕ್ಷ್ಮಣ ಸವದಿ 


ಚಿಕ್ಕೋಡಿ(ಅ.17):  ಸಿಎಂ ಸೀಟು ಸಧ್ಯಕ್ಕೆ ಖಾಲಿ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆಯೇ ಬರಲ್ಲ. ಸಿಎಂ ಸಿದ್ದರಾಮಯ್ಯ ಅವರು ಮೇಲಿನ ಆರೋಪ ನಿರಾಧಾರ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಸತೀಶ್ ಜಾರಕಿಹೊಳಿ‌ ಹಾಗೂ ಬೆಂಬಲಿಗರಿಗೆ ಶಾಸಕ ಲಕ್ಷ್ಮಣ ಸವದಿ ಟಾಂಗ್ ಕೊಟ್ಟಿದ್ದಾರೆ.

ಸತೀಶ್ ಜಾರಕಿಹೊಳಿ ಸಿಎಂ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ ಅವರು, ಸಿಎಂ ಕುರ್ಚಿ ಖಾಲಿ ಇಲ್ಲದ್ದಿದ್ದಾಗ ಸಿಎಂ ಬದಲಾವಣೆ ಕುರಿತು ಚರ್ಚೆ ಅನಾವಶ್ಯಕ ಎಂದು ಹೇಳಿದರು.

Tap to resize

Latest Videos

undefined

ಸವದತ್ತಿ ರೇಣುಕಾದೇವಿ ದೇಗುಲ: ಮೂಢನಂಬಿಕೆ ವಿರೋಧಿಸುವ ಸಚಿವ ಜಾರಕಿಹೊಳಿಗೆ ನಿಂಬೆ ಹಣ್ಣು ನೀಡಿದ ಅರ್ಚಕ!

ದಲಿತರು ಸಿಎಂ ಆಗ್ಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಸವದಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಯಾರ ಬೇಕಾದರೂ ಸಿಎಂ ಆಗಬಹುದು. ಸಿಎಂ ಆಗಬಾರದು ಅಂತ ಸಂವಿಧಾನದಲ್ಲಿ ಬರೆದಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಿಎಂ ಆಗುವ ಅವಕಾಶವಿದೆ ಅಂತ ಇದೆ. ಮತದಾರರಿಗೂ ಗದ್ದುಗೆಗೆ ಹೋಗುವ ಅವಕಾಶ ಇದೆ. ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಆಗುತ್ತವೆ ಚರ್ಚೆ ಮಾಡುವುದು ಅನಾವಶ್ಯಕ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ. 

click me!