ಜನಹಿತವೇ ಉಸಿರಾಗಿಸಿಕೊಂಡು ಜನಬಲದಿಂದಲೇ ಮುಂದಡಿ ಇಟ್ಟು ಶಕ್ತಿ ಮೀರಿ ಅನುದಾನ ತಂದಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯಾಗುವ ನಿಟ್ಟಿನಲ್ಲಿ ಬೆಂಬಲಿಸಿದರೇ ಸರ್ಕಾರದ ಭಾಗವಾಗಿ ಬಂದು ಇನ್ನೂ ಹೆಚ್ಚು ಸೇವೆ ಮಾಡಲಿದ್ದೇನೆ ಎಂದು ಭರವಸೆ ನೀಡಿದ ಲಕ್ಷ್ಮೀ ಹೆಬ್ಬಾಳಕರ.
ಬೆಳಗಾವಿ(ಮಾ.25): ವಿವಿಧೆಡೆ ಹರಿದು ಹಂಚಿಹೋಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರತೆಯನ್ನು ಎದುರಿಗಿಟ್ಟುಕೊಂಡು ಅಭಿವೃದ್ಧಿಯ ಹೊಸ ಪರ್ವಕ್ಕೆ ನಾಂದಿ ಹಾಡಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಬಿಡುವಿಲ್ಲದೆ ಶ್ರಮಿಸಿದ್ದೇನೆ. 5 ವರ್ಷಗಳಲ್ಲಿ ಜನತೆಯ ಶ್ರೇಯೋಭಿವೃದ್ಧಿಯೇ ನನ್ನ ಉಸಿರಾಗಿಸಿಕೊಂಡು ಮಾಡಿರುವ ಕೆಲಸ ಕಾರ್ಯಗಳಿಗೆ ಕ್ಷೇತ್ರದ ಜನತೆಯೇ ಜೀವಂತ ಸಾಕ್ಷಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಮರಾಠಾ ಕಾಲೋನಿಯಲ್ಲಿ ನೂತನ ಉದ್ಯಾನ ನಿರ್ಮಾಣದ ಸಲುವಾಗಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿಡುಗಡೆಗೊಂಡ 50 ಲಕ್ಷ ಅನುದಾನದಲ್ಲಿ ಉದ್ಯಾನ ನಿರ್ಮಾಣದ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಹೊಸ ಕಾಮಗಾರಿಗಳಿಗೆ ಅನುದಾನ ತರುವಾಗ ಪಟ್ಟ ನೋವು ಯಾರಲ್ಲೂ ಹೇಳಿಕೊಂಡಿಲ್ಲ. ಆದರೆ, ಜನಹಿತವೇ ಉಸಿರಾಗಿಸಿಕೊಂಡು ಜನಬಲದಿಂದಲೇ ಮುಂದಡಿ ಇಟ್ಟು ಶಕ್ತಿ ಮೀರಿ ಅನುದಾನ ತಂದಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯಾಗುವ ನಿಟ್ಟಿನಲ್ಲಿ ಬೆಂಬಲಿಸಿದರೇ ಸರ್ಕಾರದ ಭಾಗವಾಗಿ ಬಂದು ಇನ್ನೂ ಹೆಚ್ಚು ಸೇವೆ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
undefined
ಕೈ ಟಿಕೆಟ್ ಘೋಷಣೆ ಬೆನ್ನಲ್ಲೇ ಬೆಳಗಾವಿಯಲ್ಲಿ ಭಿನ್ನಮತ ಸ್ಫೋಟ, ಸಿದ್ದರಾಮಯ್ಯ ನಿವಾಸಕ್ಕೆ ಸ್ವಾಮೀಜಿಗಳ ದೌಡು!
ಈ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸನ್ಮಾನಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಜಯನಗರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿಡುಗಡೆಯಾದ 32 ಲಕ್ಷ ನೂತನ ಉದ್ಯಾನ ನಿರ್ಮಾಣ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳಕರ ಭೂಮಿಪೂಜೆ ನೆರವೇರಿಸಿದರು. ಈ ಉಭಯ ಕಾರ್ಯಕ್ರಮಗಳಲ್ಲಿ ಸ್ಥಳೀಯ ನಿವಾಸಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಕಪಿಲ ಸಾಂಬ್ರೇಕರ, ಸಂಜಯ ಕದಂ, ರಾಹುಲ್ ಉರಣಕರ, ಚಂದ್ರಕಾಂತ ಗವಿಮಠ, ಸಂಜಯ ಮಗದುಮ್, ದಯಾನಂದ ಸರ್ನೋಬತ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ವಿದ್ಯಾನಗರದ ಕೋ ಆಪರೇಟಿವ್ ಹೌಸಿಂಗ್ ಕಾಲೋನಿಯಲ್ಲಿ 42 ಲಕ್ಷ ವೆಚ್ಚದಲ್ಲಿ ನೂತನ ಉದ್ಯಾನ ಉದ್ಯಾನ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ್, ಎಸ್.ಎಸ್.ಪಾಟೀಲ, ರವಿ ಪಾಟೀಲ, ಭಾಸ್ಕರ ವನ್ನೂರಕರ, ಅಮರ ಘೋರ್ಪಡೆ, ರಾಜು ಪಾದಗುರಿ, ಸುಧೀರ ಕಾಕತ್ಕರ, ಮನೋಹರ ಗುಂಡೋಜಿ, ಸುರೇಶ ರೊಟ್ಟಿ, ಸತೀಶ ಬೊಡಮಟ್ಟಿ, ವಿಜಯ ಹಿರೇಬಾಳ, ಅಶೋಕ ಕುಂಬಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಕ್ಷೇತ್ರಕ್ಕೆ ಹೊಸ ಕಾಮಗಾರಿಗಳಿಗೆ ಅನುದಾನ ತರುವಾಗ ಪಟ್ಟನೋವು ಯಾರಲ್ಲೂ ಹೇಳಿಕೊಂಡಿಲ್ಲ. ಆದರೆ, ಜನಹಿತವೇ ಉಸಿರಾಗಿಸಿಕೊಂಡು ಜನಬಲದಿಂದಲೇ ಮುಂದಡಿ ಇಟ್ಟು ಶಕ್ತಿ ಮೀರಿ ಅನುದಾನ ತಂದಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯಾಗುವ ನಿಟ್ಟಿನಲ್ಲಿ ಬೆಂಬಲಿಸಿದರೇ ಸರ್ಕಾರದ ಭಾಗವಾಗಿ ಬಂದು ಇನ್ನೂ ಹೆಚ್ಚು ಸೇವೆ ಮಾಡಲಿದ್ದೇನೆ ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.