ಬಿಎಸ್ ವೈ ಭೇಟಿಯಾದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್!

Published : Jul 13, 2022, 12:50 PM IST
 ಬಿಎಸ್ ವೈ ಭೇಟಿಯಾದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್!

ಸಾರಾಂಶ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು (ಜು.13): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕುತೂಹಲ ಕಾರಣವಾಗಿತ್ತು. ನಮ್ಮ ಸಮಾಜದ ಹಿರಿಯ ಮುಖಂಡರು ಯಡಿಯೂರಪ್ಪನವರು. ಈ ಹಿನ್ನೆಲೆಯಲ್ಲಿ  ಸೌಹಾರ್ದಯುತವಾಗಿ ಯಡಿಯೂರಪ್ಪ ಭೇಟಿಗೆಯಾಗಿ ಅವರಿಂದ ಮಾರ್ಗದರ್ಶನವನ್ನ ಪಡೆದಿದ್ದೇನೆ  ಅಷ್ಟೇ ಇದರಲ್ಲಿ ಯಾವುದೇ ಕೂತಹಲವಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಿಸಿದ್ದಾರೆ. ಇಂದು ಬೆಳಗ್ಗೆ ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಯಡಿಯೂರಪ್ಪನವರನ್ನ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ರು. ಸಹಜವಾಗಿ ಕಾಂಗ್ರೆಸ್ ಶಾಸಕಿ ಬಿಜೆಪಿಯ ಹಿರಿಯ ಮುಖಂಡರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಬಿಎಸ್ ವೈ ರನ್ನ ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಯಡಿಯೂರಪ್ಪನವರನ್ನ ಭೇಟಿಯಾಗಿದ್ದು ಯಾವುದೇ ಕುತೂಹಲವೆನಿಲ್ಲ. ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತೇನೆ, ಅವರು ಹಿರಿಯರು, ನಮ್ಮ ಸಮಾಜದ ಮುಖಂಡರು ಇವತ್ತು ಗುರುಪೂರ್ಣಿಮೆ ಬೇರೆ ಹಿರಿಯರ ಆಶೀರ್ವಾದ ಪಡೆಯೋಣ ಎಂದು ಬಂದೆ ಬೇರೆ ರೀತಿ ಏನೂ ಇಲ್ಲ.  ಇದೊಂದು ಸೌಹಾರ್ದತವಾದ ಭೇಟಿ ಕೆಲವೊಂದು ವಿಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ. 

ಸಮುದಾಯದ ಅಥವಾ ರಾಜಕೀಯದ ಬಗ್ಗೆ ಚರ್ಚೆ ನಾ ಎಂಬ ಪ್ರಶ್ನೆಗೆ, ಎರಡೂ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ನಮ್ಮ ಸಮುದಾಯದ ಮುಖಂಡರು ಅವರಿಗೆ ಗೌರವ ಕೊಟ್ಟಿಕೊಂಡು ಬಂದಿದ್ದೇನೆ, ರಾಜಕೀಯವಾಗಿ ನಮ್ಮ ಮತ್ತು ಯಡಿಯೂರಪ್ಪನವರ ವಿಚಾರಧಾರೆ ಬೇರೆ ಇರಬಹುದು. ಇದು ವೈಯಕ್ತಿಕವಾಗಿ ಬೇರೆ. ಇದರಲ್ಲಿ ಆಡಳಿತ ಮತ್ತು ವಿಪಕ್ಷ ಅಂತ ಬರೋದಿಲ್ಲ.ಕೆಲವೊಂದು ವಿಚಾರದಲ್ಲಿ ಯಡಿಯೂರಪ್ಪನವರ  ಮಾರ್ಗದರ್ಶನ ತಗೆದುಕೊಳ್ಳುತ್ತೇವೆ ಎಂದು ಭೇಟಿ ಬಗ್ಗೆ ಸಮರ್ಥಿಸಿಕೊಂಡರು.

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಕೊಡಬೇಕು ಎನ್ನುವ ಆಸಕ್ತಿ ಯಡಿಯೂರಪ್ಪ ಅವರಿಗಿತ್ತು ಆದರೆ
ಕೆಲವು ತಾಂತ್ರಿಕ ಕಾರಣರಿಂದ ಕೊಡಲು ಆಗಲಿಲ್ಲ,ಆದರೂ ನಮಗೆ ಈ ಅವಧಿಯಲ್ಲಿ ಸಿಗುವ ಭರವಸೆ ಇದೆ ಬೊಮ್ಮಾಯಿ ಸಾಹೇಬರ ಮೇಲೆ ಭರವಸೆ ಇದೆ. ಎಲ್ಲಾ ಅಡೆತಡೆ ನಿವಾರಣೆ ಮಾಡಿ ಮೀಸಲು ಕೊಡಲಿದ್ದಾರೆ ಎನ್ನುವ ಭರವಸೆ ಇದೆ, ಬೇರೆ ಸಮುದಾಯಕ್ಕೆ ತೊಂದರೆಯಾಗದಂತೆ ಮೀಸಲಾತಿ ನೀಡಬೇಕು ಎಂದರು.

ಡಿಕೆಶಿ ಉತ್ಸವದ ವಿಚಾರ: ಡಿಕೆಶಿ ಉತ್ಸವಕ್ಕೆ ಬೆಂಬಲಿಗರು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ಅದರ ಬಗ್ಗೆ ನನಗೆ ಗೊತ್ತಿಲ್ಲ ಸಿದ್ದರಾಮಯ್ಯ ಉತ್ಸವ ಮಾಡುತ್ತಿದ್ದೇವೆ.ಆ ಕಮಿಟಿಯಲ್ಲಿ ನಾನು ಇದ್ದೇನೆ ಇವತ್ತು ಸಭೆ ಇದೆ,ಅದರಲ್ಲಿ ಭಾಗವಹಿಸುತ್ತೇನೆ. 75  ವರ್ಷ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ, ಮನುಷ್ಯನ ಜೀವನದಲ್ಲಿ ಅದೊಂದು ಸಾರ್ಥಕತೆ ಅವರು ಉತ್ಸವ ಮಾಡಿ ಎಂದು ಅವರು ಎಲ್ಲಿಯೂ ಹೇಳಿಲ್ಲ ನಾವೆಲ್ಲ ಸೇರಿ ಮಾಡುತ್ತಿದ್ದೇವೆ..ಅವರಿಗೆ ಒಳ್ಳೆಯದು ಆಗಲಿ ಅನ್ನೋದು ನಮ್ಮೆಲ್ಲರ ಆಸೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌