
ಮದ್ದೂರು(ನ.29): ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಜನಸ್ಪಂದನ ಕಾರ್‍ಯಕ್ರಮವನ್ನು ಬೋಗಸ್ ದರ್ಶನ ಎಂದು ಟೀಕಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಬೋಗಸ್ ಮನುಷ್ಯ. ಬಿಜೆಪಿ ವರಿಷ್ಠರು ಆತನನ್ನು ವಿರೋಧಪಕ್ಷದ ನಾಯಕನನ್ನಾಗಿ ಮಾಡಿರುವುದು ದುರಾದೃಷ್ಟಕರ ಎಂದು ಶಾಸಕ ಕೆ.ಎಂ. ಉದಯ್ ಟೀಕಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆಂಗಳೂರಿನಲ್ಲಿ ದಿನವಿಡೀ ಜನರ ಜೊತೆಯಲ್ಲಿದ್ದು ಅಹವಾಲು ಆಲಿಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.
ಇಂತಹ ಜನೋಪಯೋಗಿ ಕಾರ್‍ಯಕ್ರಮಗಳನ್ನು ವಿಪಕ್ಷಗಳು ಬೆಂಬಲಿಸಬೇಕು. ಅದನ್ನು ವಿರೋಧಿಸುತ್ತಿರುವುದನ್ನು ನೋಡಿದರೆ ಇವರು ಜನವಿರೋಧಿಗಳು ಎನ್ನುವುದು ಅಶೋಕ್ ಟೀಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ: ಸಚಿವ ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ್ ಓರ್ವ ಬೋಗಸ್ ಮನುಷ್ಯ. ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಒಕ್ಕಲಿಗ ನಾಯಕ, ಈತ ಒಕ್ಕಲಿಗರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡುತ್ತಾನೆಂದು ಬಿಜೆಪಿ ವರಿಷ್ಠರು ಈತನಿಗೆ ಮಂತ್ರಿ ಸ್ಥಾನ ನೀಡಿದ್ದರು. ಈಗ ತನ್ನ ಪಕ್ಕದ ಕ್ಷೇತ್ರದ ಚುನಾವಣೆಯಲ್ಲಿ ನಿಂತು ಗೆಲ್ಲಲು ಸಾಧ್ಯವಾಗದ ಪರಿಸ್ಥಿತಿಗೆ ಬಂದು ನಿಂತಿದ್ದಾನೆ. ಇಂತಹವರಿಗೆ ವಿಪಕ್ಷ ಸ್ಥಾನ ನೀಡಿರುವ ಬಿಜೆಪಿಯದ್ದು ದುರಂತ ಎಂದು ಲೇವಡಿ ಮಾಡಿದರು.
ನಿಗಮ ಮಂಡಳಿ ಆಕಾಂಕ್ಷಿಯಲ್ಲ:
ಕಾಂಗ್ರೆಸ್‌ಗೆ ಅಧಿಕಾರ, ವಿಪಕ್ಷಗಳಿಗೆ ಹೊಟ್ಟೆ ಉರಿ: ಸಚಿವ ಚಲುವರಾಯಸ್ವಾಮಿ
ನಾನು ಯಾವುದೇ ನಿಗಮ ಮಂಡಳಿ ಆಕಾಂಕ್ಷಿಯಲ್ಲ. ಜನಸೇವೆ ಮಾಡಬೇಕೆಂಬ ಒಂದೇ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಶಾಸಕತ್ವದ ಅವಧಿಯಲ್ಲಿ ಕಾರ್‍ಯನಿರ್ವಹಣೆ ಅರಿತು ಕೆಲಸ ಮಾಡುವ ಬಯಕೆ ಹೊಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಿಗಮ ಮಂಡಳಿಗೆ ಶಾಸಕರು ಹಾಗೂ ಕಾರ್‍ಯಕರ್ತರನ್ನು ನೇಮಕ ಮಾಡುವ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಪೈಪೋಟಿ ಇಲ್ಲ. ನಾನೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಶಾಸಕರ ನಡುವೆ ಸಹ ಗುಂಪುಗಾರಿಕೆ ಇಲ್ಲ ಎಂದರು. ನಿಗಮ ಮಂಡಳಿಯಲ್ಲಿ ಶಾಸಕರುಗಳ ಹಿರಿತದ ಜೊತೆಗೆ ಅವರು ಪಕ್ಷಕ್ಕಾಗಿ ಅವರ ಸೇವೆಯನ್ನು ಅರಿತು ವರಿಷ್ಟರು ನಿಗಮ ಮಂಡಳಿಗೆ ಆಯ್ಕೆ ಮಾಡುತ್ತಾರೆ ಎಂದು ಶಾಸಕ ಉದಯ್ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.