ವಿಜಯೇಂದ್ರಗೆ ಪಕ್ಷ ಜವಾಬ್ದಾರಿ ನೀಡಿರುವುದು ಸೂಕ್ತ: ಸಿ.ಎಚ್.ಪಾಟೀಲ್

By Kannadaprabha NewsFirst Published Nov 29, 2023, 3:00 AM IST
Highlights

ಪಕ್ಷದ ಎಲ್ಲ ಹಿರಿಯ ಮತ್ತು ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದ ಬಿಜೆಪಿ ಹಿರಿಯ ಮುಖಂಡ ಸಿ.ಎಚ್.ಪಾಟೀಲ್ 

ಯಲಬುರ್ಗಾ(ನ.29): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಹಿರಿಯರು ಜವಾಬ್ದಾರಿ ನೀಡಿರುವುದು ಸೂಕ್ತವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಸಿ.ಎಚ್.ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಪಕ್ಷದ ಎಲ್ಲ ಹಿರಿಯ ಮತ್ತು ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.

ಹಿಂದೂ ದೇಗುಲ ಕಟ್ಟಿಸಿದ ಮುಸ್ಲಿಂ ಯುವಕ: ಗಾಳೆಮ್ಮ ದೇವಸ್ಥಾನ ನಿರ್ಮಾಣ ಮಾಡಿದ ಇಮಾಮ್‌ ಸಾಬ್‌ !

ಶಾಸಕರಾದ ಬಸನಗೌಡ ಯತ್ನಾಳ, ಅರವಿಂದ ಬೆಲ್ಲದ, ಮಾಜಿ ಸಚಿವ ವಿ.ಸೋಮಣ್ಣ ತಮ್ಮ ವೈಮನಸು ಮರೆತು ಪಕ್ಷಕ್ಕೆ ನಿಷ್ಠರಾಗಿ ಬಿ.ಎಸ್.ವಿಜಯೇಂದ್ರರ ಜತೆಗೂಡಿ ಪಕ್ಷ ಸಂಘಟಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ರಂಗದಲ್ಲಿ ವಿಫಲವಾಗಿ ದುರಾಡಳಿತದಿಂದ ರಾಜ್ಯದ ಜನತೆಗೆ ಭ್ರಮ ನಿರಸನಗೊಳಿಸಿದೆ. ರಾಜ್ಯದೆಲ್ಲೆಡೆ ವಿರೋಧಿ ಅಲೆ ಬೀಸುತ್ತಿದೆ. ಬಿ.ವೈ. ವಿಜಯೇಂದ್ರ ಸಾರಥ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ೨೮ಕ್ಕೆ ೨೮ ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!