ಸೋಲುವ ಭಯದಿಂದ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ: ಶಾಸಕ ಪೊನ್ನಣ್ಣ

By Girish Goudar  |  First Published Nov 1, 2023, 2:00 AM IST

ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡಿದ್ದಾರೆ. ಹಿಂದೆಯೂ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದವರನ್ನು ಜನರು ಸೋಲಿಸಿದ್ದಾರೆ. ನಾವು ಜನರ ತೀರ್ಪನ್ನು ನಾವು ಗೌರವಿಸಬೇಕು. ಆಗಮಾತ್ರ ಜನರಿಗೆ ಗೌರವ ಕೊಟ್ಟಂತೆ ಆಗುತ್ತದೆ. ಪದೇ ಪದೆ ಪಕ್ಷಾಂತರ ನಿಷೇಧ ಕಾನೂನು ಉಲ್ಲಂಘನೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಪೊನ್ನಣ್ಣ 


ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ನ.01): ಆಪರೇಷನ್ ಕಮಲದ ಮೂಲಕ ಎಲ್ಲೆಡೆ ಅಧಿಕಾರ ಹಿಡಿಯಲು ಹೋದ ಬಿಜೆಪಿಗೆ ರಾಜ್ಯದ ಜನರೇ ಕಳೆದ ಚುನಾವಣೆಯಲ್ಲಿ ಆಪರೇಷನ್ ಮಾಡಿದ್ದಾರೆ. ಈಗ ತಮ್ಮ ತಮ್ಮ ಪಕ್ಷ ಉಳಿಸಿಕೊಳ್ಳಲು ಬಿಜೆಪಿ, ಜೆಡಿಎಸ್ ಒಂದನ್ನೊಂದು ಅವಲಂಬಿಸಿ ಎರಡು ನಿರ್ನಾಮ ಆಗುತ್ತಿವೆ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಆಪರೇಷನ್ ಕಮಲದ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ. 

Latest Videos

undefined

ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡಿದ್ದಾರೆ. ಹಿಂದೆಯೂ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದವರನ್ನು ಜನರು ಸೋಲಿಸಿದ್ದಾರೆ. ನಾವು ಜನರ ತೀರ್ಪನ್ನು ನಾವು ಗೌರವಿಸಬೇಕು. ಆಗಮಾತ್ರ ಜನರಿಗೆ ಗೌರವ ಕೊಟ್ಟಂತೆ ಆಗುತ್ತದೆ. ಪದೇ ಪದೆ ಪಕ್ಷಾಂತರ ನಿಷೇಧ ಕಾನೂನು ಉಲ್ಲಂಘನೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ ಎಂದು ಶಾಸಕ ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು. 

ಕೊಡಗು: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ, ಮೂವರ ದುರ್ಮರಣ

ಇದಲ್ಲೆವನ್ನು ಶಾಸಕರು ಮಾತ್ರ ಅಲ್ಲ, ಜನರು ಕೂಡ ಗಮನಿಸುತ್ತಿದ್ದಾರೆ. ಆಪರೇಷನ್ ಕಮಲ ಪ್ರಯತ್ನ ಮಾಡುವುದು ಅವರ ಚಾಳಿ. ಯಾವುದೇ ಸರ್ಕಾರ ಇದ್ದರೂ 34 ಜನ ಮಾತ್ರ ಸಚಿವರಾಗಲು ಸಾಧ್ಯ. ಈಗ 115 ಶಾಸಕರಲ್ಲಿ 34 ಜನ ಮಾತ್ರ ಮಂತ್ರಿಯಾಗಲು ಸಾಧ್ಯ. ಹಾಗಂತ ಉಳಿದವರು ಬೇರೆ ಪಕ್ಷಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮದು ಸುಭದ್ರವಾದ ಸರ್ಕಾರವಿದೆ. 136 ನಮ್ಮ ಶಾಸಕರಲ್ಲದೆ ಮೂವರು ಸ್ವತಂತ್ರ ಶಾಸಕರು, ಎಂ.ಪಿ. ಪ್ರಕಾಶ್ ಅವರ ಮಗಳು, ದರ್ಶನ್ ಪುಟ್ಟಣ್ಣಯ್ಯ ನಮ್ಮೊಂದಿಗೆ ಇದ್ದಾರೆ. ಆದ್ದರಿಂದ ಯಾರು ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದರು. 

ಇನ್ನು ಸಿಎಂ, ಡಿಸಿಎಂ ಗೊಂದಲಗಳಿವೆ, ಮುಖ್ಯಮಂತ್ರಿ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನಗಳ ವಿಷಯದಲ್ಲಿ ಇಬ್ಬರ ನಡುವೆ ಗೊಂದಲಗಳಿವೆ ಎನ್ನುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಗೊಂದಲವೂ ಇಲ್ಲ. ಗೊಂದಲವಿದೆ ಎಂದು ವಿರೋಧ ಪಕ್ಷದವರು ಜನರ ಮನಸ್ಸಿನಲ್ಲಿ ಸೃಷ್ಟಿಸುತ್ತಿದ್ದಾರೆ. ಆದರೆ ಅದೆಲ್ಲ ಅವರಿಗೆ ವರ್ಕೌಟ್ ಆಗುವುದಿಲ್ಲ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸಂಸದರನ್ನು ಬಿಜೆಪಿ ಗೆಲ್ಲಿಸಿಕೊಂಡಿತ್ತು. ಅಷ್ಟು ಶಕ್ತಿ ಇದ್ದರೂ ಈಗ 19 ಸ್ಥಾನಗಳನ್ನು ಗೆದ್ದಿರುವ ಪಕ್ಷದೊಂದಿಗೆ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದರೆ ಅವರಿಗೆ ತಾವು ರಾಜ್ಯದಲ್ಲಿ ಸೋಲುತ್ತೇವೆ ಎನ್ನುವ ಆತಂಕ ಇದ್ದೇ ಇದೆ. ತಮ್ಮ ಸಂಸದರು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ ಎನ್ನುವುದು ಅವರಿಗೇ ಗೊತ್ತಾಗಿದೆ. ಹೀಗಾಗಿಯೇ ಬಿಜೆಪಿ ಜೆಡಿಎಸ್ ಅವನ್ನು ಅವಲಂಬಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದರು. 

ದೇಶದಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ ಅಂತ ಬಿಜೆಪಿ ಹೇಳುತ್ತದೆ. ದೊಡ್ಡ ಸಾಧನೆ ಮಾಡಿರುವ ಬಿಜೆಪಿ ಪಕ್ಷದವರಿಗೆ ಜೆಡಿಎಸ್ ನ ರಕ್ಷಣೆ ಯಾಕೆ ಬೇಕು ಪ್ರಶ್ನಿಸಿದರು. ಜೆಡಿಎಸ್ ನವರು ಕೂಡ ಪಕ್ಷ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ನಿರ್ನಾಮ ಆಗುತ್ತಿವೆ ಎಂದು ಮಡಿಕೇರಿಯಲ್ಲಿ ಸಿಎಂ ಕಾನೂನು ಸಲಹೆಗಾರ ವಿರಾಜಪೇಟೆ ಶಾಸಕ ಪೊನ್ನಣ್ಣ ಎರಡು ಪಕ್ಷಗಳನ್ನು ಟೀಕಿಸಿದರು. 

click me!