ಶ್ರೀರಾಮುಲು-ಡಿ.ಕೆ. ಶಿವಕುಮಾರ್ ಹಣಾಹಣಿಗೆ ಮತ್ತೊಂದು ವೇದಿಕೆ ಸಿದ್ಧ

By Web DeskFirst Published Nov 30, 2018, 6:48 PM IST
Highlights

ಬಳ್ಳಾರಿ ಲೋಕಸಭಾ ಉಪಚುನಾವಣೆ ವೇಳೆ ಬದ್ಧ ವೈರಿಗಳಂತೆ ಆರೋಪ-ಪ್ರತ್ಯಾರೋಪಗಳನ್ನ ಮಾಡಿದ್ದ ಡಿ.ಕೆ.ಶಿವಕುಮಾರ್ ಹಾಗೂ ಶ್ರೀರಾಮುಲು ಹಣಾಹಣಿಗೆ ಮತ್ತೊಂದು ವೇದಿಕೆ ಸಿದ್ಧವಾಗಿದೆ.

ಬೆಂಗಳೂರು, [ನ.30] ಬಳ್ಳಾರಿ ಲೋಕಸಭಾ ಉಪಚುನಾವಣೆ ಬಳಿಕ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಇಬ್ಬರು ಪ್ರಮುಖ ನಾಯಕರು ಎದುರುಗೊಳ್ಳುವ ಸಾಧ್ಯತೆ ಇದೆ. 

ತೆಲಂಗಾಣ ಉಸ್ತುವಾರಿಯಾಗಿ ನೇಮಕ ಆಗಿರುವ ಡಿ ಕೆ ಶಿವಕುಮಾರ್ ತನ್ನ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ. ಅಂತೆಯೇ ತೆಲಗು ಭಾಷೆ ಮಾತನಾಡುವ ಬಿಜೆಪಿಯ ಬಿ ಶ್ರೀರಾಮಲು ಸಹ ಅಲ್ಲಿನ ಕೆಲವು ಕ್ಷೇತ್ರಗಳಲ್ಲಿ ಮತ ಭೇಟೆ ಮಾಡಲಿದ್ದಾರೆ. 

ಸಿದ್ದರಾಮಯ್ಯ, ಡಿಕೆಶಿಗೆ ಹೊಸ ಟಾಸ್ಕ್ ಕೊಟ್ಟ ಕೈ ಹೈಕಮಾಂಡ್!

ಹೀಗಾಗಿ ಬಳ್ಳಾರಿ ಉಪಚುನಾವಣೆ ಬಳಿಕ ಮತ್ತೆ ಇಬ್ಬರು ನಾಯಕರು ಎದುರುಗೊಳ್ತಾರ ಎನ್ನುವ ಕುತೂಹಲ ಮೂಡಿಸಿದೆ. ಮಾಹಿತಿ ಪ್ರಕಾರ ಬಿ. ಶ್ರೀರಾಲಮಲು ಅವರಿಗೆ ತೆಲಂಗಾಣದಲ್ಲಿ ಪ್ರಚಾರ ಮಾಡಲು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. 

ಡಿಸೆಂಬರ್ 1,2,3 ರಂದು ಮೂರು ದಿನಗಳ ಕಾಲ ಪ್ರಚಾರ ನಡೆಸಲು ವೇಳಾ ಪಟ್ಟಿ ಸಹ ನಿಗದಿ ಆಗಿದೆ ಎಂದು ತಿಳಿದು ಬಂದಿದೆ. ಹಾಗೊಂದು ವೇಳೆ ಶ್ರೀರಾಮಲು ಮತ್ತು ಡಿಕೆಶಿ ಪ್ರಚಾರ ಮಾಡಿದ್ದೆ ಆದಲ್ಲಿ, ರಾಜ್ಯ ರಾಜಕೀಯದಲ್ಲಿ ಒಂದು ಚರ್ಚೆಗೆ ಮತ್ತು ಕುತೂಹಲಕ್ಕೆ ಎಡೆಮಾಡಿಕೊಂಟಂತಾಗುತ್ತದೆ.

 ತೆಲಗಾಂಣದಲ್ಲಿ ಬಿಜೆಪಿ ಬೇರು ಇನ್ನೂ ಗಟ್ಟಿಯಾಗಿ ಊರಿಲ್ಲ. ಆದರೂ ಪಕ್ಷ ಸಂಘಟನೆ, ಲೋಕಸಭಾ ಚುನಾವಣಾ ದೃಷ್ಟಿಯಿಂದ ಈ ಚುನಾವಣೆ ಬಿಜೆಪಿಗೆ ಟೆಸ್ಟ್ ಇದ್ದಂತೆ. 

ಈಗಾಗಲೇ ರಾಜ್ಯದಿಂದ ವಕ್ತಾರರಾದ ಅಶ್ವತ್ ನಾರಾಯಣ್, ಪ್ರಕಾಶ್, ಮತ್ತು ಮಾಜಿ ಉಪಮೇಯರ್ ಹರೀಶ್ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ತೆಲಂಗಾಣಕ್ಕೆ ತೆರಳಿದ್ದಾರೆ.

click me!