ಭ್ರಷ್ಟಾಚಾರದ ಪ್ರಕರಣ: ಬಿಜೆಪಿಗರನ್ನ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಮಾಸ್ಟರ್‌ ಪ್ಲ್ಯಾನ್‌..!

By Kannadaprabha News  |  First Published Aug 14, 2024, 6:49 AM IST

ಬಿಜೆಪಿ ನಾಯಕರ ವಿರುದ್ಧದ ಬಾಕಿ ಇರುವ ಪ್ರಕರಣಗಳನ್ನು ಪಟ್ಟಿ ಮಾಡುವುದು, ಕಾನೂನು ಕ್ರಮಕ್ಕೆ ಮುಂದಾಗುವುದು. ಒಂದು ವೇಳೆ ಪ್ರಕರಣಗಳಲ್ಲಿ ತಡೆಯಾಜ್ಞೆ ಸಿಕ್ಕಿದ್ದರೆ ಅದನ್ನು ತೆರವುಗೊಳಿಸಲು ಅಗತ್ಯ ಕಾನೂನು ಹೋರಾಟ ಆರಂಭಿಸುವ ಕಾರ್ಯತಂತ್ರ ರೂಪಿಸಲಾಗಿದೆ. ಇದಾಗಿ ಪತಿ ಪ್ರಕರಣಕ್ಕೂ ಪ್ರತ್ಯೇಕವಾಗಿ ಹಿರಿಯ ವಕೀಲರ ತಂಡ ರಚಿಸಲು ಕಾಂಗ್ರೆಸ್ ಚರ್ಚೆ ನಡೆಸಿದೆ.
 


ಬೆಂಗಳೂರು(ಆ.14):  ಮುಡಾ ಪ್ರಕರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಮುಖ್ಯಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋರಾಟಕ್ಕೆ ಇಳಿದಿರುವ ಬಿಜೆಪಿ ನಾಯಕರ ಭ್ರಷ್ಟಾಚಾರದ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿ ಕಾನೂನು ಕುಣಿಕೆಗೆ ಸಿಲುಕಿಸಲು ಕಾಂಗ್ರೆಸ್ ನಾಯಕತ್ವ ಕೂಡ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರಾದ ಬಿ.ಎಸ್.ಯಡಿ ಯೂರಪ್ಪ, ಪ್ರತಿಪಕ್ಷ ನಾಯಕ ಆ‌ರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದರಾದ ಸುಧಾಕರ್ ಸೇರಿದಂತೆ ಬಿಜೆಪಿ ನಾಯಕರ ಅಕ್ರಮ ಹಾಗೂ ಭ್ರಷ್ಟಾಚಾರದ ಪ್ರಕರಣಗಳನ್ನು ಪಟ್ಟಿ ಮಾಡಿ, ಪ್ರತಿಯೊಬ್ಬರ ಪ್ರಕರಣಗ ಳನ್ನು ನಿಭಾಯಿಸಲು ಪ್ರತ್ಯೇಕ ವಕೀಲರ ತಂಡವನ್ನು ನೇಮಿಸಲು ಸಿದ್ಧತೆ ಆರಂಭಗೊಂಡಿದೆ.

ಬಿಜೆಪಿ ನಾಯಕರ ವಿರುದ್ಧದ ಬಾಕಿ ಇರುವ ಪ್ರಕರಣಗಳನ್ನು ಪಟ್ಟಿ ಮಾಡುವುದು, ಕಾನೂನು ಕ್ರಮಕ್ಕೆ ಮುಂದಾಗುವುದು. ಒಂದು ವೇಳೆ ಪ್ರಕರಣಗಳಲ್ಲಿ ತಡೆಯಾಜ್ಞೆ ಸಿಕ್ಕಿದ್ದರೆ ಅದನ್ನು ತೆರವುಗೊಳಿಸಲು ಅಗತ್ಯ ಕಾನೂನು ಹೋರಾಟ ಆರಂಭಿಸುವ ಕಾರ್ಯತಂತ್ರ ರೂಪಿಸಲಾಗಿದೆ. ಇದಾಗಿ ಪತಿ ಪ್ರಕರಣಕ್ಕೂ ಪ್ರತ್ಯೇಕವಾಗಿ ಹಿರಿಯ ವಕೀಲರ ತಂಡ ರಚಿಸಲು ಕಾಂಗ್ರೆಸ್ ಚರ್ಚೆ ನಡೆಸಿದೆ. ಪ್ರಮುಖವಾಗಿ ಮಾಜಿ ಕಂದಾಯ ಸಚಿವ ಹಾಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಆರೋಗ್ಯ ಸಚಿವ ಹಾಲಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧದ ಪ್ರಕರಣಗಳು.

Tap to resize

Latest Videos

ಸಿದ್ದು ವಿರುದ್ಧ ಖಾಸಗಿ ದೂರು ಭವಿಷ್ಯ ಇಂದು ನಿರ್ಧಾರ: ಕೋರ್ಟ್‌ ಆದೇಶದತ್ತ ಎಲ್ಲರ ಚಿತ್ತ..!

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧದ ಪ್ರಕರಣಗಳು, ಅಲ್ಲದೆ, ಗುತ್ತಿಗೆದಾರರು ಆರೋಪಿಸಿದ್ದ ಶೇ.40ರಷ್ಟು ಕಮಿಷನ್ ಆರೋಪ ಸೇರಿದಂತೆ, ಬಿಜೆಪಿ ಅವಧಿಯಲ್ಲಿ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ, ಲಂಚ ಪಡೆದ ಆರೋಪಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನೂ ಪಟ್ಟಿ ಮಾಡಿ ಕಾನೂನಾತ್ಮಕವಾಗಿ ಮುಂದುವರೆಸಲು ಕಾಂಗ್ರೆಸ್ ತಯಾರಿ ಮಾಡಿಕೊಳ್ಳುತ್ತಿದೆ.

ಈ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲರೂ ಆದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಫ್ಟಿ ಅವರುಗಳ ಜೊತೆ ಕಾಂಗ್ರೆಸ್ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿಯ ಹಲವು ನಾಯಕರುಗಳು ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಗೆ ವಿವಿಧ ನ್ಯಾಯಾಲಯಗಳಲ್ಲಿ ತಡೆಯಾಜ್ಞೆಗಳನ್ನು ತಂದಿದ್ದಾರೆ. ಅವುಗಳನ್ನು ಕಾನೂನು ಮಾರ್ಗದಲ್ಲೇ ಆದಷ್ಟು ಬೇಗ ತೆರವು ಮಾಡಿ ಕಾನೂನಿನ ಸಂಕೋಲೆಯಲ್ಲಿ ಸಿಲುಕಿಸಲು ಮಹತ್ವದ ಚರ್ಚೆ ನಡೆಸಲಾಗಿದೆ.

ಅಲ್ಲದೆ, ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ವಿವೇಚನಾರಹಿತವಾಗಿ ಮುಖ್ಯಮಂತ್ರಿ ಅವರಿಗೆ ನೋಟಿಸ್ ನೀಡಿರುವುದು, ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿರುವುದರ ವಿರುದ್ಧವೂ ಕಾನೂನು ಹೋರಾಟ ನಡೆಸಲು ಇಬ್ಬರೂ ವಕೀಲರೊಂದಿಗೆ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಲ್ಲಿ ಅದನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸುವ ಕುರಿತೂ ತಯಾರಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಏಕೆ ಕಟಕಟೆ ಅಸ್ತ್ರ?

ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹೋರಾಡುತ್ತಿದೆ. ಇದೀಗ ಆ ಪಕ್ಷದ ನಾಯಕರಿಗೆ ಕಾನೂನು ಕುಣಿಕೆ ಬಿಗಿಗೊಳಿಸಲು ಕಾಂಗ್ರೆಸ್ ತಂತ್ರಗಾರಿಕೆ.

ಯಾರು ಟಾರ್ಗೆಟ್?

ಯಡಿಯೂರಪ್ಪ | ಅಶೋಕ್ | ವಿಜಯೇಂದ್ರ | ಚಿಕ್ಕಬಳ್ಳಾಪುರ ಸಂಸದ ಡಾ| ಕೆ. ಸುಧಾಕರ್ ಸೇರಿದಂತೆ ಬಿಜೆಪಿಯ ವಿವಿಧ ನಾಯಕರು.

ಕಾಂಗ್ರೆಸ್ ಪ್ಲಾನ್ ಏನು?

ಬಿಜೆಪಿ ನಾಯಕರ ವಿರುದ್ಧ ಬಾಕಿ ಇರುವ ಪ್ರಕರಣ ಗಳನ್ನು ಪಟ್ಟಿ ಮಾಡುವುದು. ಕಾನೂನು ಕ್ರಮಕ್ಕೆ ಮುಂದಾಗುವುದು. ಒಂದವೇಳೆ, ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆದಿದ್ದರೆ, ಅದರ ತೆರವಿಗೂ ಹೋರಾಟ ಆರಂಭಿಸುವುದು. ಪ್ರತಿ ಪ್ರಕರಣಕ್ಕೂ ಹಿರಿಯ ವಕೀಲರ ಪ್ರತ್ಯೇಕ ತಂಡ ನೇಮಿಸಲು ಚರ್ಚೆ.

ಸಿಬಲ್, ಸಿಂಫ್ಟಿ ಜತೆಗೂ ಚರ್ಚೆ

ಬಿಜೆಪಿ ನಾಯಕರ ವಿರುದ್ಧ ಕಟಕಟೆ ಅಸ್ತ್ರ ಪ್ರಯೋಗಿ ಸುವ ಬಗ್ಗೆಸುಪ್ರೀಂಕೋರ್ಟ್‌ ಪ್ರಖ್ಯಾತವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಫ್ಟಿ ಜತೆಗೂ ರಾಜ್ಯ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ.

ಮುಡಾ, ವಾಲ್ಮೀಕಿ ಹಗರಣದಲ್ಲಿ ರಾಜ್ಯದ ಜನತೆಗೆ ಎಲ್ಲಾ ರಾಜಕಾರಣಿಗಳಿಂದ ಮೋಸ: ಶಾಸಕ ಬಿ.ಪಿ.ಹರೀಶ್

ಬಿಜೆಪಿ ನಾಯಕರ ಪ್ರಕರಣ ಮುಂದುವರೆಸಲು ಚರ್ಚೆ: ಹಿರಿಯ ವಕೀಲ ಪೊನ್ನಣ್ಣ

ಬಿಜೆಪಿ ನಾಯಕರ ವಿರುದ್ದದ ಭ್ರಷ್ಟಾಚಾರ ಪ್ರಕರಣಗಳನ್ನೆಲ್ಲಾ ಪಟ್ಟಿ ಮಾಡಿ ಕಾನೂನಾತ್ಮಕವಾಗಿ ಮುಂದುವರೆಸುವ ಬಗ್ಗೆ ಹಾಗೂ ತಡೆಯಾಜ್ಞೆ ಇರುವ ಪ್ರಕರಣಗಳನ್ನು ಆದಷ್ಟು ಬೇಗ ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಹಿರಿಯ ವಕೀಲ ಪೊನ್ನಣ್ಣ ಹೇಳಿದ್ದಾರೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮುಡಾ ಪ್ರಕರಣದ ಖಾಸಗಿ ದೂರು, ಕಾನೂನು ಹೋರಾಟ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಹಲವು ನಾಯಕರುಗಳ ವಿರುದ್ಧ ವಿವಿಧ ಪ್ರಕರಣಗಳ ತನಿಖೆ ನಡೆಯುತ್ತಿದೆ. ಕೋವಿಡ್ ಅವಧಿಯ ಭ್ರಷ್ಟಾಚಾರ, ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಸೇರಿದಂತೆ ಹಲವು ಪ್ರಕರಣಗಳಿವೆ. ಪಿಎಸ್‌ಐಪ್ರಕರಣದವರದಿ ಈಗಾಗಲೇ ಬಂದಿದ್ದು ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಆರ್.ಅಶೋಕ್ ಅವರ ಬಿಎಂ ಕಾವಲ್ ಪ್ರಕರಣದ ಬಗ್ಗೆ ತಡೆಯಾಜ್ಞೆ ಇದೆ. ವಿವಿಧ ಡಿನೋಟಿಫಿಕೇಷನ್ ಪ್ರಕರಣಗಳಲ್ಲೂ ತಡೆಯಾಜ್ಞೆಗಳಿವೆ. ಅವುಗಳನ್ನೆಲ್ಲಾ ಕಾನೂನಾತ್ಮಕವಾಗಿ ಹೇಗೆ ಮುಂದುವರೆಸಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

click me!