ಜಗತ್ತಿನ ಶಕ್ತಿಶಾಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಬರೋದು ಖಚಿತ. ಸಾಮಾನ್ಯ ಮತ್ತು ನಿಷ್ಠಾವಂತ ಕಾರ್ಯಕರ್ತ ಗುರುತಿಸಿ ಟಿಕೆಟ್ ನೀಡುವ ಪಕ್ಷ ಯಾವುದಾದರು ಇದ್ದರೆ ಅದು ಬೆಜೆಪಿಯಲ್ಲಿ ಮಾತ್ರ ಸಾಧ್ಯ; ನಟಿ ಶ್ರುತಿ
ಚಡಚಣ(ಮೇ.06): ನಾಗಠಾಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳ್ಳಿ ಪರ ಚಲನಚಿತ್ರ ನಟಿ ಶ್ರುತಿ ಅವರು ತೆರೆದ ವಾಹನದಲ್ಲಿ ಚಡಚಣ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಬೃಹತ್ ರೋಡ್ ಶೋ ನಡೆಸಿದರು.
ನಂತರ ಸಾರ್ವಜನಿಕ ಉದ್ದೇಸಿಸಿ ಮಾತನಾಡಿದ ಅವರು, ರಾಮನ ಭಕ್ತ ಬಜರಂಗಬಲಿಯ ಆಶೀರ್ವಾದದಿಂದ ಜಗತ್ತಿನ ಶಕ್ತಿಶಾಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಬರೋದು ಖಚಿತ. ಸಾಮಾನ್ಯ ಮತ್ತು ನಿಷ್ಠಾವಂತ ಕಾರ್ಯಕರ್ತ ಗುರುತಿಸಿ ಟಿಕೆಟ್ ನೀಡುವ ಪಕ್ಷ ಯಾವುದಾದರು ಇದ್ದರೆ ಅದು ಬೆಜೆಪಿಯಲ್ಲಿ ಮಾತ್ರ ಸಾಧ್ಯ. ಅಂತಹ ಸಾಮಾನ್ಯ ಕಾರ್ಯಕರ್ತ ಸಂಜೀವ್ ಐಹೊಳೆ ಬಿಜೆಪಿ ಟಿಕೆಟ್ ನೀಡಿದ್ದಾರೆ. ಐಹೊಳ್ಳಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದು ಬಿಜೆಪಿಯ ಕಾರ್ಯಕರ್ತರ ಶಕ್ತಿ ತೋರಿಸಬೇಕು. ಚಹಾ ಮಾರುವ ಒಬ್ಬ ಸಾಮಾನ್ಯ ಬಿಜೆಪಿಯ ಕಾರ್ಯಕರ್ತ ಮೋದಿಜಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಿರುವುದು ಬಿಜೆಪಿ ಎಂದ ಅವರು, ಕಾಂಗ್ರೆಸ್ ಕಸ ಇದ್ದರೆ ರೈತರ ಜಮೀನು ನಾಶವಾಗುತ್ತದೆ ಹಾಗೆ ಕಾಂಗ್ರೆಸ್ ಪಕ್ಷ ಇದ್ದರೆ ದೇಶ ನಾಶವಾಗುತ್ತದೆ ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಎಸೆದು ಕೋಟ್ಯಂತರ ಹಿಂದುಗಳ ಸಾವಿರಾರು ವರ್ಷಗಳ ಕನಸಾದ ಭವ್ಯ ದಿವ್ಯ ರಾಮಮಂದಿರ ನಿರ್ಮಾಣ ಪ್ರಧಾನಿ ಮೋದಿಜಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ರಾಮನ ಪರಮ ಭಕ್ತ ಆಂಜನೇಯನನ್ನು ಕೆಣಕಿ ಕಾಂಗ್ರೆಸ್ ದೊಡ್ಡ ತಪ್ಪು ಮಾಡಿದೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ತಾವು ಮೇ 10 ರಂದು ಬಿಜೆಪಿ ಪಕ್ಷದ ಕಮಲದ ಗುರುತಿಗೆ ಬಟನ್ ಒತ್ತಿ ಜೈ ಭಜರಂಗಬಲಿ ಜೈ ಶ್ರೀ ರಾಮ ಎನ್ನಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್‌ಗೆ ಕರ್ನಾಟಕದ ನೀರಾವರಿ ಅಭಿವೃದ್ಧಿ ಅರಿವಿಲ್ಲ: ಎಂ.ಬಿ.ಪಾಟೀಲ
ನಾಗಠಾಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ್ ಐಹೊಳ್ಳಿ ಮಾತನಾಡಿ, ನನ್ನಂತ ಸಾಮಾನ್ಯ ಕಾರ್ಯಕರ್ತನನ್ನು ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಪಕ್ಷದ ಹಿರಿಯರು ಗುರುತಿಸಿ ನನಗೆ ಪಕ್ಷದ ಟಿಕೆಚ್ ನೀಡಿದ್ದಾರೆ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಿಮ್ಮ ಮನೆಯ ಮಗನಾಗಿ ನಿಮ್ಮ ಸೇವೆ ಮಾಡುವೆ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಂಡರು
ಬೃಹತ್ ರೋಡ್ ಶೋನಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಮಾಜಿ ಸದಸ್ಯ ಭೀಮು ಸಾಹುಕಾರ ಬಿರಾರ್ದಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ ಕುಬಚಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ರಾಮ ಅವಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಾಂತುಗೌಡ ಪಾಟೀಲ, ಬಿಜೆಪಿಯ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ನಾಗರಾಜ ನಿರಾಳೆ, ವಿಜಯಕುರ್ಮಾ ಅವಟಿ, ಶಿವಾನಂದ ಖಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜು ಕೋಳಿ, ಪ್ರಭಾಕರ ನಿರಾಳೆ, ಮಹಾದೇವ ಯಂಕಂಚಿ, ಎಮ್ ಆರ್ ಹಿಟ್ನಳ್ಳಿ,ನ್ಯಾಯವಾದಿ ಅಶೋಕ ಕುಲಕರ್ಣಿ, ಪೀರಪ್ಪ ಅಗಸರ, ಸಂಗಾ ಟೇರ್ಲ, ನಾಗನಥಗೌಡ ಬಿರಾದಾರ, ರಾಮು ಬಿರಾದಾರ, ಶ್ರೀಕಾಂತ ಗಂಟಗಲ್ಲಿ, ರಾಜು ತಂಗಾ,ಬಲಭಿಮ ಪವಾರ, ಶಿರಾಡೋಣ ಗ್ರಾಮದ ಬಿಜೆಪಿ ಮುಖಂಡರಾದ ಮುದಕಪ್ಪ ಹತ್ತರಕಿ, ನೀಲಕಂಠ ಬಿರಾರ್ದಾ, ರಮೇಶ ಕಾರಬಾರಿ, ದೇವರ ಗ್ರಾಮದ ಸುನೀಲ್ ಪಾಟೀಲ, ಮಲ್ಲಿಕಾರ್ಜುನ ಸೋರೆಗಾಂವ, ರಾಜು ಝಳಕ್ಕಿ, ತುಕಾರಾಮ್ ಸಿಂಧೆ, ಶೀಲವಂತ ಉಮರಾಣಿ, ಭಾಗ್ಯಶ್ರೀ ತಂಗಾ, ಭಾರತಿ ಹೂಗಾರ, ಶಶಿಕಲಾ ಹಿರೇಮಠ, ಬೌರಮ್ಮ ಅರಳಿಕಟ್ಟಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.