ಹೆಂಡತಿ ರಕ್ಷಣೆ ಮಾಡದ ಮೋದಿ ದೇಶ ಹೇಗೆ ರಕ್ಷಿಸುತ್ತಾರೆ: ವಿ.ಎಸ್ ಉಗ್ರಪ್ಪ

By Girish Goudar  |  First Published May 6, 2023, 10:02 PM IST

ಹೆಂಡತಿ ನೋಡದ ಇವರು ರಾಮ ಭಕ್ತರಾ?.ಅಂಜನಾದ್ರಿಯಲ್ಲಿ ಆಂಜನೇಯ ಹುಟ್ಟಿದ್ದಾನೆ. ಅನ್ಯ ರಾಜ್ಯದವರು ತಮ್ಮ ರಾಜ್ಯದಲ್ಲಿ ಹುಟ್ಟಿದ್ದಾನೆ ಅಂತಾರೆ. ಧೈರ್ಯ ಇದ್ದರೆ ಬೊಮ್ಮಾಯಿ, ಬಿಜೆಪಿ ಅವರು ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಅಂತಾ ಪ್ರತಿಪಾದನೆ ಮಾಡಬೇಕಿತ್ತು: ಉಗ್ರಪ್ಪ 


ಕೊಪ್ಪಳ(ಮೇ.06):  ಹೆಂಡತಿ ರಕ್ಷಣೆ ಮಾಡದ ಮೋದಿ ದೇಶ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಹೇಗೆ ಮಾಡ್ತಾರೆ ಅಂತ ಕಾಂಗ್ರೆಸ್‌ ನಾಯಕ ವಿ.ಎಸ್ ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. 

ಇಂದು(ಶನಿವಾರ) ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ.ಎಸ್ ಉಗ್ರಪ್ಪ ಅವರು, ಹೆಂಡತಿ ನೋಡದ ಇವರು ರಾಮ ಭಕ್ತರಾ?.ಅಂಜನಾದ್ರಿಯಲ್ಲಿ ಆಂಜನೇಯ ಹುಟ್ಟಿದ್ದಾನೆ. ಅನ್ಯ ರಾಜ್ಯದವರು ತಮ್ಮ ರಾಜ್ಯದಲ್ಲಿ ಹುಟ್ಟಿದ್ದಾನೆ ಅಂತಾರೆ. ಧೈರ್ಯ ಇದ್ದರೆ ಬೊಮ್ಮಾಯಿ, ಬಿಜೆಪಿ ಅವರು ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಅಂತಾ ಪ್ರತಿಪಾದನೆ ಮಾಡಬೇಕಿತ್ತು. ಅದರ ಬದಲು ಬಜರಂಗದಳ ನಿಷೇಧ ಮಾಡ್ತೀವಿ ಅಂದಾಗ ಆಂಜನೇಯ ಹೆಸರಲ್ಲಿ ಮೋದಿ, ಬೊಮ್ಮಾಯಿ, ಬಿಜೆಪಿ ಭಾವೋದ್ವೇಗದ ಮಾತಾಡ್ತಾರೆ. ಬೆಲೆ ಏರಿಕೆ ಬಗ್ಗೆ ಬಿಜೆಪಿ ಕಿಂಚಿತ್ತೂ ಮಾತಾಡಲ್ಲ ಅಂತ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. 

Tap to resize

Latest Videos

undefined

ನಮ್ಮ ತಂದೆ ಜೊತೆಗೆ ಅಂಜನಾದ್ರಿ ಹನುಮ ಭಕ್ತರಿದ್ದಾರೆ, ಯಾರ ಭಯವೂ ಇಲ್ಲ: ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ

ಕೊಪ್ಪಳ ಜಿಲ್ಲೆಯ ಕುಕನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಪರ ವಿ.ಎಸ್ ಉಗ್ರಪ್ಪ ಅವರು ಮತಯಾಚನೆ ಮಾಡಿದ್ದಾರೆ. 

click me!