ಡಿ.ಕೆ ಶಿವಕುಮಾರ್ ಅವರನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ ಪರಮೇಶ್ವರ್ ಭೇಟಿಮಾಡಿದ್ದು, ಮೂವರು ಕೈ ನಾಯಕರ ಸಂಗಮದಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗಿವೆ.
ಬೆಂಗಳೂರು, [ಅ.27]: ನಿನ್ನೆ [ಶನಿವಾರ] ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಮನೆಗೆ ಭೇಟಿ ನೀಡಿದ್ದರು.
ಆದ್ರೆ, ಇಂದು [ಭಾನುವಾರ] ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಸೇರಿಕೊಂಡು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿರುವುದು ವಿಶೇಷ.
undefined
ಅಚ್ಚರಿ ಬೆಳವಣಿಗೆ: ಪರಮೇಶ್ವರ್ ಮನೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಗೆ ಭೇಟಿ ನೀಡಿ ಡಿಕೆ ಶಿವಕುಮಾರ್ ಅವರ ಯೋಗ ಕ್ಷೇಮ ವಿಚಾರಿಸಿದರು. ಹವಾಲಾ ಹಣ ಪ್ರಕರಣದಲ್ಲಿ ಇಡಿ ಸುಳಿಗೆ ಸಿಲುಕಿ ಸುಮಾರು ಒಂದುವರೆ ತಿಂಗಳು ಬಳಿಕ ಡಿಕೆ ಶಿವಕುಮಾರ್ ಅವರು ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು.
ಕಾಂಗ್ರೆಸ್ ಕಾರ್ಯಕರ್ಯಕರ್ತರು ಹಾಗೂ ಅಭಿಮಾನಿಗಳು ಡಿಕೆಶಿ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದ್ದೂರಿಯಾಗಿ ಸ್ವಾಗತಿಸಿದರು. ಹಾರ-ತುರಾಯಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
ಶುಭ ದಿನಗಳ ನಿರೀಕ್ಷೆಯಲ್ಲಿ ಕಾಂಗ್ರೆಸ್ : ತುಂಬಿದ ನವಚೈತನ್ಯ
ತಿಹಾರ್ ಜೈಲಿನಲ್ಲಿದ್ದಾಗ ಡಿ.ಕೆ ಶಿವಕುಮಾರ್ ಭೇಟಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದರು. ಮೂವರು ಕೈ ನಾಯಕರ ಸಂಗಮದಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಬೈ ಎಲೆಕ್ಷನ್ ಮುಂಚೂಣಿ ನಾಯಕತ್ವ ವಹಿಸಿಕೊಳ್ಳುವಂತೆ ಸಿದ್ದರಾಮಯ್ಯ ಪರಮೇಶ್ವರ್ ಸೇರಿ ಡಿ.ಕೆ ಶಿವಕುಮಾರ್ ಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಇದಕ್ಕೆ ಡಿಕೆಶಿ ಮುಂದೆ ನೋಡೋಣವೆಂದು ಅಭಯ ನೀಡಿದ್ದಾರೆ ಎನ್ನಲಾಗಿದೆ.
ಸಿದ್ದುಗೆ ಉಪಸಮರ ಟಾರ್ಗೆಟ್
ಉಪಚುನಾವಣೆಯೇ ಈಗ ಸಿದ್ದರಾಮಯ್ಯ ಅವರ ಟಾರ್ಗೆಟ್ ಆಗಿದೆ. ಅದಕ್ಕಾಗಿಯೇ 2013ರಲ್ಲಿ ಮಾಡಿದ್ದ ಪಾದಯಾತ್ರೆಯನ್ನು ಬಾರಿಯೂ ಮಾಡಲು ಸಿದ್ದರಾಮಯ್ಯ ಅವರ ಪ್ಲಾನ್ ಆಗಿದೆ.
ಅಂದು ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎನ್ನುವ ಘೋಷ ವಾಕ್ಯದಲ್ಲಿ ಪಾದಯಾತ್ರೆ ಹಮ್ಮಿಕೊಂಡಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಕ್ತವಾಗಿತ್ತು.
ಅಷ್ಟೇ ಅಲ್ಲದೇ ಪಾದಯಾತ್ರೆ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟದಲ್ಲಿ ಬಿಜೆಪಿ ಧೂಳಿಪಟವಾಗಿತ್ತಲ್ಲದೇ ಕಾಂಗ್ರೆಸ್ ಗೆಲುವಿನ ನಗೆ ಬೀರಿ ಅಧಿಕಾರ ಚುಕ್ಕಾಣಿ ಹಿಡಿದದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಅದೇ ಮಾದರಿಯಲ್ಲಿ ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಲು ಚಿಂತನೆ ನಡೆಸಿದ್ದಾರೆ.
ಬೈ ಎಲೆಕ್ಷನ್ ಗೆ ಒಗ್ಗಟ್ಟು ಪ್ರದರ್ಶನ
ಹೌದು....ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾದ ಮೇಲೆ ಕಾಂಗ್ರೆಸ್ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಬೈ ಎಲೆಕ್ಷನ್ ಗೆಲ್ಲಲು ಈ ಹಿಂದಿನ ವೈಮನಸ್ಸುಗಳನ್ನು ಮರೆತು ನಾಯಕನ್ನು ಗಣನೆಗೆ ತೆಗೆದುಕೊಂಡು ಎಲ್ಲರನ್ನು ಒಗ್ಗೂಡಿಸಲು ಮುಂದಾಗಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಸಿದ್ದರಾಮಯ್ಯ ಅವರು ದಿಢೀರ್ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ್ರು. ಇದೀಗ ಪರಮೇಶ್ವರ್ ಅವರನ್ನು ಕರೆದುಕೊಂಡು ಡಿಕೆಶಿ ಭೇಟಿ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ಹೊರಟ್ಟಿದ್ದಾರೆ.