ಕಾಂಗ್ರೆಸ್ ನಾಯಕರೇ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾರೆ. ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಿಲುವು ಏನು ಎನ್ನುವುದು ಮೊದಲು ತಿಳಿಯಬೇಕಾಗಿದೆ. ಈ ಕುರಿತು ಸದನದಲ್ಲಿ ಮಾತನಾಡಲಿ ಎಂದು ಸವಾಲು ಹಾಕಿದ ಜಗದೀಶ ಶೆಟ್ಟರ್
ಬೆಳಗಾವಿ(ಡಿ.21): ಕಾಂಗ್ರೆಸ್‌ನವರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡೋದಾದರೆ ಸದನದಲ್ಲಿಯೇ ಮಾತನಾಡಲಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರೇ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾರೆ. ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಿಲುವು ಏನು ಎನ್ನುವುದು ಮೊದಲು ತಿಳಿಯಬೇಕಾಗಿದೆ. ಈ ಕುರಿತು ಸದನದಲ್ಲಿ ಮಾತನಾಡಲಿ ಎಂದು ಸವಾಲು ಹಾಕಿದರು.
ವೀರ ಸಾವರ್ಕರ ಕುರಿತು ಪಠ್ಯದಲ್ಲಿ ಸೇರಿಸುವುದು ಶಿಕ್ಷಣ ತಜ್ಞರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಸಾವರ್ಕರ ಬಗ್ಗೆ ತಿಳಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕಾಗಿಯೇ ಅವರಿಗೆ ವೀರ ಸಾವರ್ಕರ ಎಂಬ ಹೆಸರು ಬಂದಿದೆ. ಕಾಂಗ್ರೆಸ್ ನಾಯಕರಿಗೆ ಈಗ ಜ್ಞಾನೋದಯವಾಗಿದೆ. ಈ ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಇನ್ನು ಮೇಲಾದರೂ ಕಾಂಗ್ರೆಸ್ ನಾಯಕರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬುದ್ಧಿ ಬರಲಿ ಎಂದು ವ್ಯಂಗ್ಯವಾಡಿದರು.
undefined
ಬೆಳಗಾವಿ ಜಿಲ್ಲೆಯಲ್ಲಿ ಹಿಂದಿದ್ದರೂ ಅಭ್ಯರ್ಥಿ ಘೋಷಣೆಯಲ್ಲಿ ಜೆಡಿಎಸ್ ಮೊದಲು..!
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ದಾಳಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಡಿ, ಐಟಿ, ಸಿಬಿಐ ಈ ಎಲ್ಲ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುವ ಸಂಸ್ಥೆಗಳಾಗಿವೆ. ಎಲ್ಲೆಲ್ಲಿ ಮಾಹಿತಿ ಸಿಗುತ್ತದೆಯೋ, ಯಾರು ತಪ್ಪು ಮಾಡಿದ್ದಾರೋ ಅಂತಹವರ ಮೇಲೆ ದಾಳಿ ನಡೆಸುತ್ತಾರೆ. ಬಿಜೆಪಿಯ ಕೆಲ ನಾಯಕರ ಮೇಲೆಯೂ ಸಿಬಿಐ ದಾಳಿ ನಡೆದಿದೆ ಎಂದರು.
ಸಿಬಿಐ, ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿಯೇ ದಾಳಿ ಮಾಡುತ್ತಾರೆ. ಯಾರ ವ್ಯವಹಾರದಲ್ಲಿ ತಪ್ಪು ಕಾಣಿಸುತ್ತದೆಯೋ ಅವರ ಮೇಲೆ ದಾಳಿ ಆಗುತ್ತದೆ. ಕಾಂಗ್ರೆಸ್‌ನವರ ಮೇಲೆ ದಾಳಿಯಾದರೆ ಇದು ರಾಜಕೀಯ ಎನ್ನುವುದು ಸರಿಯಲ್ಲ. ನಿಮ್ಮ ವ್ಯವಹಾರದಲ್ಲಿ ಲೋಪ ಇರದಿದ್ದರೇ ನೀವು ಯಾರಿಗೂ ಹೆದರುವ ಅವಶ್ಯತೆ ಇಲ್ಲ. ತನಿಖಾ ಸಂಸ್ಥೆಗಳು ಸುಖಾಸುಮ್ಮನೆ ದಾಳಿ ಮಾಡಲ್ಲ. ನೀವು ತಪ್ಪು ಮಾಡಿದಾಗಲೇ ದಾಳಿ ಆಗುತ್ತವೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲಾಗೆ ಮಾಜಿ ಸಿಎಂ ಜಗದೀಶ ಶೆಟ್ಟರ ತಿರುಗೇಟು ನೀಡಿದರು.
ಸಿಬಿಐ, ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿಯೇ ದಾಳಿ ಮಾಡುತ್ತಾರೆ. ಯಾರ ವ್ಯವಹಾರದಲ್ಲಿ ತಪ್ಪು ಕಾಣಿಸುತ್ತದೆಯೋ ಅವರ ಮೇಲೆ ದಾಳಿ ಆಗುತ್ತದೆ. ಕಾಂಗ್ರೆಸ್‌ನವರ ಮೇಲೆ ದಾಳಿಯಾದರೆ ಇದು ರಾಜಕೀಯ ಎನ್ನುವುದು ಸರಿಯಲ್ಲ. ನಿಮ್ಮ ವ್ಯವಹಾರದಲ್ಲಿ ಲೋಪ ಇರದಿದ್ದರೇ ನೀವು ಯಾರಿಗೂ ಹೆದರುವ ಅವಶ್ಯತೆ ಇಲ್ಲ. ತನಿಖಾ ಸಂಸ್ಥೆಗಳು ಸುಖಾಸುಮ್ಮನೆ ದಾಳಿ ಮಾಡಲ್ಲ. ನೀವು ತಪ್ಪು ಮಾಡಿದಾಗಲೇ ದಾಳಿ ಆಗುತ್ತವೆ ಅಂತ ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.