ರಾಜ್ಯ ರಾಜಧಾನಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಳಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 6 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿರುವ (ಡಿಲೀಟ್) ಮತ್ತು ಚಿಲುಮೆ ಸ್ಂಸ್ಥೆಯ ಅವ್ಯವಹಾರದ ಕುರಿತು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರು (ನ.20) : ರಾಜ್ಯ ರಾಜಧಾನಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಳಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 6 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿರುವ (ಡಿಲೀಟ್) ಮತ್ತು ಚಿಲುಮೆ ಸ್ಂಸ್ಥೆಯ ಅವ್ಯವಹಾರದ ಕುರಿತು ಕಾಂಗ್ರೆಸ್ ನಾಯಕರಾದ ಡಾ.ಜಿ. ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹದೇವಪ್ಪ, ಅಖಂಡ ಶ್ರೀನಿವಾಸ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಈ ಹಿಂದೆ ಯಾವುದೇ ಸರ್ಕಾರಗಳು ಮಾಡದ ಕಾರ್ಯಗಳನ್ನು ಬಿಜೆಪಿ ಮಾಡುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ (Parameswar) ಅವರು, ಚಿಲುಮೆ ಸಂಸ್ಥೆ ಗೆ ಕಾಂಗ್ರೆಸ್ (Congress) ನವರೇ ಅನುಮತಿ ಕೊಟ್ಟಿದ್ದರು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿರುದ್ಧ ಕಿಡಿಕಾಡಿದ್ದಾರೆ. ಬಿಜೆಪಿ (BJP) ವಿರುದ್ಧ ಯಾವುದೇ ಆರೋಪ ಮಾಡಿದರೂ, ಕಾಂಗ್ರೆಸ್ ನವರೂ ಅಧಿಕಾರದಲ್ಲಿದ್ದಾಗ ಇದನ್ನು ಮಾಡಿಲ್ಲವೇ ಎಂದು ಕೇಳುವುದು ಕಾಯಿಲೆಯಾಗಿದೆ. ಆದರೆ, ಕಾಂಗ್ರೆಸ್‌ನಿಂದ ಚಿಲುಮೆ (Chilume) ಸಂಸ್ಥೆಗೆ ಯಾವಾಗ ಅನುಮತಿ ಕೊಡಲಾಗಿತ್ತು. ಯಾವ ನಿಯಮಗಳನ್ನು ಹಾಕಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಯಲಿ. ತನಿಖೆ ನಡೆದಲ್ಲಿ ಎಲ್ಲವೂ ಹೊರಗೆ ಬರಲಿದೆ ಎಂದು ಹೇಳಿದರು.
undefined
ರಾಜ್ಯದಲ್ಲಿ ತಮಗೆ ಬೇಕಾದಂತೆ ಮತದಾರರ ಹೆಸರು ಡಿಲೀಟ್ (Delete) ಮಾಡೋದು, ಬದಲಾಯಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ಬಗ್ಗೆ ಚುನಾವಣಾ (Election) ಆಯೋಗಕ್ಕೂ ನಾವು ದೂರು (Complaint) ಕೊಟ್ಟಿದ್ದೇವೆ ಸೂಕ್ತ ತನಿಖೆಯಾಗಿ ಸತ್ಯ ಹೊರಬೀಳಲಿದೆ. ಇನ್ನು ಮಂಗಳೂರು (Mangalore) ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆಯೂ ಸೂಕ್ತ ತನಿಖೆ (Investigation) ನಡೆಸಬೇಕು. ಮಂಗಳೂರಿನಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದವು. ಇದರ ಬಗ್ಗೆ ಎನ್ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನ್ಯಾಯಾಂಗ ತನಿಖೆಯಾದರೆ ಸತ್ಯ ಹೊರಬರಲಿದೆ: ಚಿಲುಮೆ ಸಂಸ್ಥೆಯ ಮತದಾರರ ಪಟ್ಟಿಯಲ್ಲಿ ನಡೆಸಲಾಗಿರುವ ಹಗರಣದ ಸತ್ಯಾಸತ್ಯತೆ ತಿಳಿಬೇಕೆಂದರೆ ಹೈಕೋರ್ಟ್ (Highcourt) ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಸರ್ಕಾರ ಶೀಘ್ರವೇ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಲು ಕ್ರಮ ಕೈಗೊಳ್ಳಬೇಕು. ಬಿಜೆಪಿಗೆ ಸಾಮಾಜಿಕ ನ್ಯಾಯ, ಸಮಾನತೆ, ಮೀಸಲಾತಿ ಸಂವಿಧಾನ (Constitution)ದಲ್ಲಿ ನಂಬಿಕೆ ಇಲ್ಲ. ನೊಂದ ಸಮುದಾಯಗಳ ಸಮಾವೇಶದ ಹೆಸರಲ್ಲಿ ಮೊಸಳೆ ಕಣ್ಣೀರು (Tears) ಹಾಕುತ್ತದೆ. ಸಂವಿಧಾನದ ಅಶಯ ಜಾರಿ ಮಾಡುವುದಕ್ಕ ಬಿಜೆಪಿಗೆ ಇಷ್ಟವಿಲ್ಲ. ಇನ್ನು ರಾಜ್ಯದಲ್ಲಿ ಸಿದ್ದರಾಮಯ್ಯ 51 ಮೀಸಲು ಕ್ಷೇತ್ರದ ಹೊರತಾಗಿ ಎಲ್ಲಿಯೇ ಸ್ಪರ್ಧೆ (Compete) ಮಾಡಿದರೂ ಗೆಲ್ಲುತ್ತಾರೆ. ಹೀಗಾಗಿ, ಅವರನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಟಾರ್ಗೆಟ್ (Target) ಮಾಡುತ್ತಿದ್ದು, ಇದು ಫಲಿಸುವುದಿಲ್ಲ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.
ನಮ್ಮ ಕ್ಷೇತ್ರದಲ್ಲೂ 22 ಸಾವಿರ ಮತದಾರರ ಡಿಲೀಟ್: ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮಾಧ್ಯಮಳೊಂದಿಗೆ ಮಾತನಾಡಿ, ನಮ್ಮ ಕ್ಷೇತ್ರದಲ್ಲೂ 22 ಸಾವಿರ ಮತದಾರರ ಹೆಸರುಗಳು (Voters Name) ಡಿಲೀಟ್ ಆಗಿವೆ. ಯಾಕೆ ಡಿಲೀಟ್ ಅಗಿದೆ ಎಂದು ಗೊತ್ತಿಲ್ಲ. ನಾವು ಮಸೀದಿ, ಚರ್ಚ್, ಮನೆಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಚಿಲುಮೆ ಸಂಸ್ಥೆ ಕೆಲಸ ಮಾಡಿದೆಯೂ, ಇಲ್ಲವೋ ಗೊತ್ತಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪುಲಕೇಶಿನಗರ ಕ್ಷೇತ್ರದಿಂದ ಪ್ರಸನ್ನ ಕುಮಾರ್ (Prasanna Kumar) ಅರ್ಜಿ ಹಾಕಿರುವ ಬಗ್ಗೆ ಕೇಳಿಬದುತ್ತಿದೆ. ಆದರೆ, ನಾನು ಹಾಲಿ ಶಾಸಕನಾಗಿದ್ದು, 33 ಸಾವಿರ ಭಾರಿ ಮತಗಳ ಅಂತರದಿಂದ ಗೆದ್ದಿದ್ದೇನೆ. ಈ ಟಿಕೆಟ್ (Ticket)ನೀಡುವ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸ್ವಪಕ್ಷದವರೇ ನನ್ನ ಸೋಲಿಗೆ ಸಂಚು ರೂಪಿಸಿರುವ ಹಿರಿಯ ನಾಯಕರ ಗಮನಕ್ಕೆ ತಂದಿದ್ದು, ಈ ಬಗ್ಗೆ ಹೈಕಮಾಂಡ್ ನೋಡಿಕೊಳ್ಳಲಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವಕ್ಕೆ ಮಾರಕ: ರಾಜ್ಯದಲ್ಲಿ ಹಿಂದೆಂದೂ ಯಾವುದೇ ಸರ್ಕಾರ ಮಾಡಿದ ಕೃತ್ಯಕ್ಕೆ ಬಿಜೆಪಿ ನಾಯಕರು ಕೈ ಹಾಕಿದ್ದಾರೆ. ಈ ಕೃತ್ಯವು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಬಿಜೆಪಿ ಸರ್ಕಾರದ ಈ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.