ಬಚ್ಚೇಗೌಡ ಬಿಜೆಪಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಕಾಂಗ್ರೆಸ್ ನಾಯಕರ ಪ್ಲಾನ್

Published : Apr 11, 2023, 05:04 PM ISTUpdated : Apr 11, 2023, 05:19 PM IST
ಬಚ್ಚೇಗೌಡ ಬಿಜೆಪಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಕಾಂಗ್ರೆಸ್ ನಾಯಕರ ಪ್ಲಾನ್

ಸಾರಾಂಶ

ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಸಂಸದ ಬಿ ಎನ್ ಬಚ್ಚೇಗೌಡಗೆ ಧರ್ಮಸಂಕಟ ಎದುರಾಗಿದೆ.

ಹೊಸಕೋಟೆ (ಏ.11): ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅವರ ತಂದೆ ಬಜೆಪಿ ಸಂಸದ ಬಿ ಎನ್ ಬಚ್ಚೇಗೌಡಗೆ ಧರ್ಮಸಂಕಟ ಎದುರಾಗಿದೆ. ಕ್ಷೇತ್ರದಲ್ಲಿ ಯಾರ ಪರ ನಿಲುವು ವ್ಯಕ್ತಪಡಿಸಬೇಕೆಂಬ ಗೊಂದಲ ಎದುರಾಗಿದೆ. ಬಿಜೆಪಿ ಅಭ್ಯರ್ಥಿ ಪರ ನಿಲ್ಲಲು ವೈಯಕ್ತಿಕವಾಗಿ ಬಿ ಎನ್ ಬಚ್ಚೇಗೌಡ ಹಿಂದೇಟು ಹಾಕಿದ್ದಾರೆ. ಪುತ್ರನ ಪರ ಬಹಿರಂಗ ಪ್ರಚಾರ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ಉಪ ಚುನಾವಣೆಯಲ್ಲಿ ಪಕ್ಷೇತರ ಆಗಿದ್ದ ಶರತ್ ಬಚ್ಚೇಗೌಡ. ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ವಿರೋಧಿ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದಿದ್ದಾರೆ.  ಹೀಗಾಗಿ ಬಿಜೆಪಿ ಸಂಸದ ಆಗಿರುವ ಬಚ್ಚೇಗೌಡರಿಗೆ ಸಂಕಷ್ಟ ಎದುರಾಗಿದೆ.

ಬಚ್ಚೇಗೌಡ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಲೆಕ್ಕಾಚಾರಕ್ಕೆ ಬಿ ಎನ್ ಬಚ್ಚೇಗೌಡ ನೋ ಎಂದಿದ್ದಾರೆ. ಬಚ್ಚೇಗೌಡ  ಸಿದ್ಧರಾಮಯ್ಯ ಅವರ ಒಂದು ಕಾಲದ ಸ್ನೇಹಿತ ಆಗಿದ್ದರು. ಹೀಗಾಗಿ ಸಿದ್ದರಾಮಯ್ಯ ಮೂಲಕ  ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಆದರೆ ಬಚ್ಚೇಗೌಡ ಅವರ ಸ್ಪಷ್ಟ ಉತ್ತರದಿಂದ ಕಾಂಗ್ರೆಸ್ ಸುಮ್ಮನಾಗಿದೆ.

 ಪುತ್ರನಿಗೆ ಟಿಕೆಟ್ ಕೊಡುವ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು, ರಾಜಕೀಯ ನಿವೃತ್ತಿ ಬೆನ್ನಲ್ಲೇ ಈಶ್ವರಪ್ಪ ಹೇಳಿಕೆ

ಈ ಕುರಿತು ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ನೀಡಿರುವ ಸಂಸದ ಬಿ ಎನ್ ಬಚ್ಚೇಗೌಡ . ಅವನ ರಾಜಕಾರಣ ಅವನಿಗೆ - ನನ್ನ ರಾಜಕೀಯ ನಿಲುವು ನನಗೆ. ನನಗೆ 80 ವರ್ಷ ವಯಸ್ಸಾಗಿರೋದ್ರಿಂದ ಬೇರೆ ಆಸೆ ಇಲ್ಲ. ಸ್ವಾಭಿಮಾನಿಯಾಗಿ ಕಳೆದ ಬಾರಿ ಶರತ್ ಗೆದ್ದ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾನೆ. ಸಿದ್ದರಾಮಯ್ಯ ನನಗೆ ಸ್ನೇಹಿತರೇ. ಒಂದು ಕಾಲದಲ್ಲಿ ಕುಟುಂಬ ತರಹ ಇದ್ವಿ. ಪ್ರೀತಿಗೆ ಎನೇ ಹೇಳಿದರೂ ಸ್ವೀಕರಿಸುವೆ. ಇನ್ನೊಂದು ವರ್ಷ ಸಂಸದ ಸ್ಥಾನ ಇದೆ. ಆದರೆ ಒಂದಂತೂ ಸತ್ಯ. ಬಿಜೆಪಿ ನಾಯಕರು ಯಾರೂ ನನ್ನ ಸಂಪರ್ಕ ಮಾಡ್ತಾ ಇಲ್ಲ. ಯಾವುದಕ್ಕೂ ಕರೆಯುತ್ತಿಲ್ಲ. ನನ್ನ ರಾಜಕಾರಣ ನನಗೆ ಇದ್ದೆ ಇದೆ. ನಮ್ಮ ಬೆಂಬಲಿಗರು ಇದ್ದೆ ಇರ್ತಾರೆ ಎಂದಿದ್ದಾರೆ.

ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೂ

ಏಪ್ರಿಲ್‌ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!