ಕಾಂಗ್ರೆಸ್ಸಿಗರು ಮೋದಿಯವರನ್ನು ಏಕವಚನದಲ್ಲಿ ಬೈದಿಲ್ಲ: ಕೋಟ

By Kannadaprabha News  |  First Published Jan 16, 2024, 6:19 AM IST

ಎಲ್ಲರಿಗೂ ಒಂದೇ ಮಾನದಂಡ ಇರಲಿ, ಆಗ ಮಾತ್ರ ನಿಮ್ಮ ಖಂಡನೆಗೆ ಅರ್ಥ ಬರುತ್ತದೆ. ಸರ್ಜಿಕಲ್ ಸ್ಟೈಕ್ ವೇಳೆ 'ಇವ ಗನ್ ತೆಗೆದುಕೊಂಡು ಹೋಗಿದ್ದಾ?' ಎಂದು ಕಾಂಗ್ರೆಸ್ ನಾಯಕರು ಮೋದಿ ಬಗ್ಗೆ ಮಾತನಾಡಿದ್ದರು, ಇದು ಎಷ್ಟು ಸರಿ ಎಂದು ಕಿಡಿಕಾರಿದ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ 


ಉಡುಪಿ(ಜ.16):  ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರನ್ನು ಎಷ್ಟು ಬಾರಿ ಏಕವಚನದಲ್ಲಿ ಬೈದಿಲ್ಲ? ಅದು ತಪ್ಪಲ್ವಾ? ಕಾಂಗ್ರೆಸ್ ಮುಖಂಡರೇ ಏಕವಚನದಲ್ಲಿ ಯಾರನ್ನೂ ಬೈಯ್ಯಬಾರದು ಎಂದರೆ ಮೋದಿಯನ್ನು ಏಕವಚನದಲ್ಲಿ ಬೈದ ಸಿದ್ದರಾಮಯ್ಯ ನಿಲುವು ಖಂಡಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. 

ಸಿಎಂ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನ ಬಳಸಿದ ಕುರಿತು ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, ಎಲ್ಲರಿಗೂ ಒಂದೇ ಮಾನದಂಡ ಇರಲಿ, ಆಗ ಮಾತ್ರ ನಿಮ್ಮ ಖಂಡನೆಗೆ ಅರ್ಥ ಬರುತ್ತದೆ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಹಿಂದೂ ವಿರೋಧಿ ಸರ್ಕಾರ ಎಂದು ಸಚಿವೆ ಲಕ್ಷ್ಮೀ ಸಾಬೀತು ಮಾಡಿದ್ದಾರೆ: ಶಾಸಕ ಯಶಪಾಲ್ 

ಸರ್ಜಿಕಲ್ ಸ್ಟೈಕ್ ವೇಳೆ 'ಇವ ಗನ್ ತೆಗೆದುಕೊಂಡು ಹೋಗಿದ್ದಾ?' ಎಂದು ಕಾಂಗ್ರೆಸ್ ನಾಯಕರು ಮೋದಿ ಬಗ್ಗೆ ಮಾತನಾಡಿದ್ದರು, ಇದು ಎಷ್ಟು ಸರಿ ಎಂದು ಕಿಡಿಕಾರಿದರು.

click me!