ಪ್ರತಿಭಟನೆ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮುಂದುವರಿದ್ದಿದ್ದು, ಒಂದೇ ಸ್ಥಳದಲ್ಲಿ ಎರಡು ಬಣಗಳು ಪ್ರತಿಭಟನೆ ನಡೆಸಿದೆ.
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಜು.22): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರತಿಭಟನೆ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮುಂದುವರಿದ್ದಿದ್ದು, ಒಂದೇ ಸ್ಥಳದಲ್ಲಿ ಎರಡು ಬಣಗಳು ಪ್ರತಿಭಟನೆ ನಡೆಸಿದೆ. ಎರಡೂ ಬಣದವರು ಪ್ರತ್ಯೇಕವಾಗಿ ಮೈಕ್ ಅಳವಡಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಭಾಷಣ ಮಾಡಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಂಡಿದ್ದು ಬಿಟ್ಟರೆ ಎಲ್ಲೂ ಸೋನಿಯಾ ಗಾಂಧಿ ಪರ ಪ್ರತಿಭಟನೆ ಮಾಡಿದ್ದು ಕಂಡು ಬಂದಿಲ್ಲ.
undefined
ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಬಣದ ಪರವಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ರೆ, ಇತ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪರವಾಗಿ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ನಂಜೇಗೌಡ, ನಜೀರ್ ಅಹಮದ್, ಅನಿಲ್ ಕುಮಾರ್ ಬ್ಯಾಟ್ ಬೀಸಿದ್ರು. ಎರಡು ಕಡೆಯವರು ಸೋನಿಯಾ ಗಾಂಧಿ ವಿಚಾರಕ್ಕಿಂತ ತಮ್ಮ ಬಣ ರಾಜಕೀಯಕ್ಕೆ ಹೆಚ್ಚು ಒತ್ತು ಕೊಟ್ಟು ಹೈ ಡ್ರಾಮಾ ಸೃಷ್ಟಿ ಮಾಡಿದ್ರು. ಕೋಲಾರ ನಗರದ ಗಾಂಧಿ ವನದ ಬಳಿ ಒಂದೇ ಕಡೆ ಎರಡು ಬಣದವರು ಪ್ರತ್ಯೇಕವಾಗಿ ಕುಳಿತು ಪ್ರತಿಭಟನೆ ಮಾಡುವ ಮೂಲಕ ನೆರದಿದ್ದವರಿಗೆ ಪುಕ್ಕಟೆ ಮನರಂಜನೆ ನೀಡಿದ್ರು. ಇದೆ ವೇಳೆ ಎರಡು ಬಣದ ಕಾರ್ಯಕರ್ತರು ಕೆಲ ಕಾಲ ಮಾತಿಗೆ ಮಾತು ಬೆಳೆಸಿ ನೂಕಾಟ ತಳ್ಳಾಟ ಮಾಡುವ ಮೂಲಕ ತಮ್ಮ ನಾಯಕರ ಮುಂದೆ ಶೋ ಅಪ್ ಕೊಟ್ಟರು.
ಬಿಜೆಪಿ ಇವತ್ತಲ್ಲ ನಾಳೆ ಸೋಲಲಿದೆ, ಅವರೇನು 500 ವರ್ಷ ಅಧಿಕಾರದಲ್ಲಿ ಇರೋದಿಲ್ಲ: ಹರಿಪ್ರಸಾದ್
ಇನ್ನು ಇದೆ ವೇಳೆ ಸೋನಿಯಾ ಗಾಂಧಿ ಇಡಿ ವಿಚಾರವಾಗಿಯೂ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್‌ನಲ್ಲಿ ಫಲಾನುಭವಿಗಳು ಸಾಕಷ್ಟು ಜನ ಇದೀವಿ. ಸ್ಥಾನಗಳನ್ನು ಪಡೆದುಕೊಂಡಿದ್ದೇವೆ, ಸಂಪನ್ಮೂಲ ಸಹ ಪಡೆದಿದ್ದೇವೆ. ನಾನು ರಾಜಕೀಯ ಹಿನ್ನೆಲೆಯಿಂದ ಬಂದಿರುವ ಕುಟುಂಬದವನಲ್ಲ. ಆದ್ರೂ ನಾನು ಎರಡು ಬಾರಿ ಸ್ಪೀಕರ್ ಆಗಿದ್ದೇನೆ. ಹಾಗಾಗಿ ನಾನು ಋಣ ತೀರಿಸಿಕೊಳ್ಳಿ ಎಂದು ನಿನ್ನೆ ಹೇಳಿದ್ದೇನೆ ಅಷ್ಟೇ. ನೀವು ಇದನ್ನು ಅರ್ಥೈಸಿಕೊಳ್ಳದೆ ಏನೇನೋ ಪ್ರಶ್ನೆ ಕೇಳ್ತೀರಿ ಎಂದು ಮಾಧ್ಯಮಗಳ ವಿರುದ್ಧ ಕೆಂಡಾಮಂಡಲರಾದ್ರು.
ಹಾದಿ ಬೀದಿಯಲ್ಲಿ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣದವರು ಕಿತ್ತಾಡಿಕೊಂಡರೂ ಸಹ ಕೋಲಾರದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಇದ್ದೀವಿ. ಎರಡು ಕಡೆಯವರು ಮೋದಿಗೆ ಧಿಕ್ಕಾರ ಹಾಕಿದ್ದೇವೆ. ಸೋನಿಯಾ ಗಾಂಧಿಗೆ ಜೈಕಾರ ಹಾಕಿದ್ದೇವೆ ಅಂತ ರಮೇಶ್ ಕುಮಾರ್ ತೇಪೆ ಹಾಕುವ ಹೇಳಿಕೆ ನೀಡಿದ್ರು.
ಇನ್ನು ಇದಕ್ಕೂ ಮುನ್ನ ಭಾಷಣದಲ್ಲಿ ರಮೇಶ್ ಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ರು, ಏಕವಚನದಲ್ಲಿ ಮೋದಿ ವಿರುದ್ದ ರಮೇಶ್ ಕುಮಾರ್ ಆಕ್ರೋಶ ಹೊರಹಾಕಿದ್ರು. ಡಿಮಾನಿಟೈಸೇಷನ್ ಹೆಸರಲ್ಲಿ ಸಾವಿರ ರೂಪಾಯಿ ನೋಟು ತೆಗೆದು ಎರಡು ಸಾವಿರ ರೂಪಾಯಿ ನೋಟು ತಂದು ದೊಡ್ಡ ಬತ್ತಿ ಇಡೋದನ್ನ ತಪ್ಪಿಸಿದ್ದೀನಿ ಎಂದು ಹೇಳ್ತಾನೆ. ನಿನಗೆ ಲೆಕ್ಕ ಬರೋದೆ ಹೋದ್ರೆ ನನಗೆ ಮೇಸ್ಟ್ರು ಕೈಗೆಣ್ಣು ಮುರುದೋಗೊ ಹಾಗೆ ಹೊಡೆದು ಎರಡೊಂದ್ಲು ಮಗ್ಗಿ ಹೇಳಿಕೊಟ್ಟಿದ್ದಾರೆ.ನನಗೆ ಲೆಕ್ಕ ಬರುತ್ತೆ ನಿನಗೆ ಲೆಕ್ಕ ಬರೋದಿಲ್ವೇನೋ ಮೂರ್ಖ ಎಂದು ಮೋದಿಯವರನ್ನು ಏಕವಚನದಲ್ಲಿ ಬೈದ ರಮೇಶ್ ಕುಮಾರ್.ನೆಹರು ಕುಟುಂಬದ ವಾರಸುದಾರರು ಸೋನಿಯಾ ಗಾಂಧಿಯವರನ್ನು ದುರ್ಬಲಗೊಳಿಸಿದರೆ ಕಾಂಗ್ರೇಸ್ ಪಕ್ಷವನ್ನು ಮುಗಿಸಬಹುದು ಎಂದು ಹೀಗೆ ಮಾಡ್ತಿದ್ದಾರೆ. ಅದು ಸಾಧ್ಯವಿಲ್ಲ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದ್ರು .
ಸಿದ್ದರಾಮೋತ್ಸವ ಅಲ್ಲ, ಅಮೃತ ಮಹೋತ್ಸವ: ರಾಯರೆಡ್ಡಿ
ಮೋದಿಯವರೆ ನೀವ್ಯಾರು, ನಿಮಗೆ ವೈಯುಕ್ತಿಕ ವಿಚಾರ ಕೇಳುತ್ತಿಲ್ಲ. ನಿನ್ನ ವಂಶ ಯಾವುದು ಬಿಜೆಪಿ, ನಮ್ಮ ವಂಶ ಕಾಂಗ್ರೆಸ್. ನಿನ್ನ ವಂಶಕ್ಕೆ ಹಿರಿಕರು ಯಾರು, ಹೆಡ್ಗೆವಾರ್ ರವರು, ಗೋಲ್ವಾಲ್ಕರ್ ರವರು, ಸಾವರ್ಕರ್ ರವರು ಇವರೆಲ್ಲ ನಿಮ್ಮ ಹಿರಿಯರು .ನಮ್ಮ ಹಿರಿಯರು ಯಾರು, ಪಂಡಿತ್ ನೆಹರು, ಇಂದಿರಾ ಗಾಂಧಿ, ಲಾಲ್‌ಬಹದ್ದೂರ್ ಶಾಸ್ತ್ರಿ, ಸುಭಾಸ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ, ಮೌಲಾನಾ ಅಬ್ದುಲ್ ಕಲಾಂ ಅಜಾದ್, ಜಫೀ ಅಹಮದ್ ಕಿದ್ವಾಯಿ ಇವರು ನಮ್ಮ ಪೂರ್ವಿಕರು, ನಮ್ಮ ವಂಶ ಇದು. ನಿಮ್ಮ ಪೂರ್ವಿಕರು ಬಿಜೆಪಿ, ಭಾರತೀಯ ಜನಸಂಘ, ಆರ್‌ಎಸ್‌ಎಸ್, ಹಿಂದೂ ಮಹಾಸಭಾ, ಬಜರಂಗದಳವರು, ಶ್ರೀರಾಮಸೇನೆಯವರು ಇವರಲ್ಲಿ ಯಾರಾದ್ರು ಎದೆಯನ್ನು ಗುಂಡಿಗೆ ಕೊಟ್ಟಿದ್ದೀರ. ಒಂದು ದಿನವಾದ್ರೂ ಭಾರತ ಮಾತಾಕಿ ಜೈ ಎಂದು ಹೇಳಿದ್ದೀರಾ? ಅಂತ ಪ್ರಶ್ನಿಸಿದ್ದಾರೆ.
ಆಗ ನೀವು ಎಲ್ಲಿದ್ದೀರ ಎಂದ್ರೆ ನೀವೆಲ್ಲ ಇಂಗ್ಲೀಷ್ ರವರ ಬೂಟ್ ಪಾಲೀಶ್ ಮಾಡ್ತಿದ್ರಿ. ಸ್ವಾತಂತ್ರ್ಯಕ್ಕಾಗಿ ಸ್ಥಾಪನೆ ಮಾಡಿದ ನ್ಯಾಷಿನಲ್‌ಪೇಪರ್ ಗೆ 25ನೇ ಕಂಪನಿ ಸೆಕ್ಷನ್ ಪ್ರಕಾರ ಯಾರೂ ನಯಾ ಪೈಸೆ ತೆಗೋಳೋದಕ್ಕೆ ಸಾದ್ಯವಾಗದಿದ್ದರೂ ನೋಟೀಸ್ ಕೊಟ್ಟಿದ್ದೀರ. ನಿಮ್ಮದೇ ನಾಯಕ ಸುಬ್ರಮಣ್ಯನ್ ಸ್ವಾಮಿ ಕಂಪ್ಲೇಂಟ್ ಕೊಟ್ಟಿದ್ದಕ್ಕೆ. ಅವರು ಬೀಜೆಪಿಯವರೆ. ಮನಮೋಹನ್ ಸಿಂಗ್ ಆಳ್ವಿಕೆಯಲ್ಲಿ ಭಾರತ ಮುಂದುವರೆದ ದೇಶಗಳ ಪಟ್ಟಿಯಲ್ಲಿ ಮೂರನೆ ಸ್ಥಾನಕ್ಕೆ ಬಂದಿತ್ತು. ಈಗ 163 ನೇ ಸ್ಥಾನಕ್ಕೆ ಬಂದಿದೆ,ಇದನ್ನು ಹೇಳಿದ್ದೂ ಕೂಡ ನಿಮ್ಮದೇ ನಾಯಕ ಸುಬ್ರಮಣ್ಯಂ ಸ್ಚಾಮಿ. ಸುಬ್ರಹ್ಮಣ್ಯನ್ ಸ್ಚಾಮಿ ಒಂದು ಕಂಪ್ಲೇಂಟ್ ಗೆ ಸೋನಿಯಾ ಗಾಂಧಿಯವರಿಗೆ ನೀವು ನೋಟೀಸ್ ಕೊಡ್ತೀರಿ. ಅವರದ್ದೇ ಮತ್ತೊಂದು ಪ್ರಶ್ನೆಗೆ ಯಾಕೆ ಉತ್ತರಿಸುತ್ತಿಲ್ಲ. ಇಂದಿರಾ ಗಾಂಧಿ ಯವರಿಗೆ ಸಾವು ಬರಲು ಕ್ಯಾನ್ಸರ್ ಆಗಿತ್ತಾ?.ಅವರನ್ನು ಕೊಂದಾಗ ಅವರ ರಕ್ತ ಈ ಭೂಮಿ ಮೇಲೆ ಬಿದ್ದಿದೆ. ಯಾರು ನಿಮ್ಮ ಪೈಕಿ ಈ ದೇಶಕ್ಕಾಗಿ ರಕ್ತ ಚೆಲ್ಲಿದ್ದಾರ ಹೇಳ್ರಿ ಮೋದಿಯವರೆ. ಸಿನೆಮಾ ಹೀರೋದಂತಿದ್ದ ಮುದ್ದಾದ ಮುಖ ರಾಜೀವ್ ಗಾಂಧಿಯದ್ದು .ಅವರನ್ನು ಕೊಲ್ತೀರಿ, ಅವರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಒಬ್ಬ ಮುದುಕ ಗಾಂಧಿ, ಹರೇ ರಾಂ ರಾಮ್ ರಾಮ್, ಈಶ್ವರ ಅಲ್ಲಾ ತೇರೇ ನಾಮ್ ಎಂದು ಹೋಗುತಿದ್ರೆ ಅವರನ್ನು ಕೊಲ್ತೀರಿ. 80 ವರ್ಷದ ಮುದುಕನಿಗೆ ಬಗ್ಗೆ ನಮಸ್ಕಾರ ಮಾಡುವಂತೆ ಅವರನ್ನು ಶೂಟ್ ಮಾಡಿದ್ರಲ್ಲ. ಯಾರೂ ಕೊಂದದ್ದು ಗಾಂಧಿಯನ್ನ ,ನಾವಾ?ಯಾರು ಗೋಡ್ಸೆ. ಎಲ್ಲ ಅರ್ಥಿಕ ರಂಗಗಳಲ್ಲಿ ನೀವು ಫೇಲ್ ಆಗಿದ್ದೀರಿ ಇದನ್ನು ಮರೆ ಮಾಚಲು ಇದನ್ನು ಹೊರತೆಗೆಯುತ್ತಿದ್ದೀರ ಎಂದು ರಮೇಶ್ ಕುಮಾರ್ ಆಕ್ರೋಶ ಹೊರ ಹಾಕಿದ್ರು.