ಕೋಲಾರ(ಡಿ.06): ಅವಿಭಜಿತ ಕೋಲಾರ (Kolar) ಜಿಲ್ಲೆಯಲ್ಲಿ ವಿಧಾನ ಪರಿಷತ್ (MLC Election) ಕಣವು ರಂಗೇರಿದೆ. ಕಾಂಗ್ರೆಸ್ (Congress), ಜೆಡಿಎಸ್ (JDS) ಮತ್ತು ಬಿಜೆಪಿ (BJP) ಅಭ್ಯರ್ಥಿಗಳ ಗೆಲುವಿಗೆ ಮುಖಂಡರು ಶ್ರಮಿಸುತ್ತಿದ್ದಾರೆ. ಎರಡೂ ಜಿಲ್ಲೆಗಳಲ್ಲಿನ ಕಾಂಗ್ರೆಸ್ (Congress) ಪಕ್ಷದ ಮುಖಂಡರಲ್ಲಿರುವ ಆಂತರಿಕ ಭಿನ್ನಮತವು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾಗಿದ್ದು, ಒಳ ಏಟಿನ ಆತಂಕವೂ ಎದುರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ ಎರಡನೇ ಸಲ ಕಣದಲ್ಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ನ ಒಂದು ಬಣವು ವಿರೋಧಿಸಿದ್ದರಿಂದ ಅನಿಲ್‌ಕುಮಾರ್ ಅವರು ಸೋತಿದ್ದರು. ಸುದೀರ್ಘ ಕಾಲದಿಂದ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬಣದಲ್ಲಿದ್ದ ಅನಿಲ್‌ಕುಮಾರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಸಕ ರಮೇಶ್‌ಕುಮಾರ್ ಅವರ ಬಣಕ್ಕೆ ಹಾರಿ, ಬಿಜೆಪಿ (BJP) ಅಭ್ಯರ್ಥಿ ಗೆಲುವಿಗೆ ನೆರವಾಗಿದ್ದರು ಎಂಬ ಆಪಾದನೆ ಇದೆ.
ರಮೇಶ್‌ಕುಮಾರ್ ಮೇಲೆ ಕೆಎಚ್ಚೆಂಗೆ ಸಿಟ್ಟು: ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha election) ರಮೇಶ್‌ಕುಮಾರ್ ಬಿಜೆಪಿ ಪರವಾಗಿ ಕೆಲಸ ಮಾಡಿ ತನ್ನನ್ನು ಸೋಲಿಸಿದರೆಂಬ ಸಿಟ್ಟು ಅಂದಿನಿಂದಲೂ ಕೆ.ಎಚ್.ಮುನಿಯಪ್ಪ ಅವರಲ್ಲಿದೆ. ಪ್ರಸ್ತುತ ನಡೆಯುತ್ತಿರುವ ಎಂಎಲ್‌ಸಿ (MLC) ಚುನಾವಣೆಯಲ್ಲಿ ರಮೇಶ್‌ಕುಮಾರ್ ಜೊತೆಗೆ ಗುರುತಿಸಿಕೊಂಡಿರುವ ಅನಿಲ್‌ಕುಮಾರ್ ಅವರನ್ನು ಸೋಲಿಸಬೇಕು ಎನ್ನುವುದು ಕೆ.ಎಚ್.ಮುನಿಯಪ್ಪ ಬೆಂಬಲಿಗರ ಶಪಥವಾಗಿದೆ ಎನ್ನಲಾಗಿದೆ.
undefined
ಗರಿಗೆದರಿದೆ ಬಣ ರಾಜಕೀಯ
ಇದಕ್ಕೆ ಪೂರಕವಾಗಿಯೇ ಜಿಲ್ಲೆಯಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಎಂಎಲ್.ಅನಿಲ್ ಕುಮಾರ್ ಹೆಸರು ಇತ್ಯರ್ಥವಾಗುತ್ತಿದ್ದಂತೆಯೇ ಬಣ ರಾಜಕೀಯ ಗರಿಗೆದರಿದೆ. ಪಕ್ಷದ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಬಿಜೆಪಿ ಸೇರಿದ್ದಾರೆ. ಇದರ ಜೊತೆಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಹ ಚುನಾವಣೆ ಚಟುವಟಿಕೆಯಿಂದ ದೂರ ಉಳಿದಿದ್ದಾರೆ.
ಈ ಮಧ್ಯೆ, ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್ (Ramesh Kumar), ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ರೂಪಾ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಶಿಡ್ಲಘಟ್ಟಶಾಸಕ ವಿ.ಮುನಿಯಪ್ಪ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಅವರಿಗೆ ಎಂ.ಎಲ್.ಅನಿಲ್‌ಕುಮಾರ್ ಅವರನ್ನು ಗೆಲ್ಲಿಸುವ ಹೊಣೆಯಿದೆ. ಜೊತೆಗೆ ಮಾಜಿ ಶಾಸಕರಾದ ಮುಳಬಾಗಿಲಿನ ಕೊತ್ತೂರು ಮಂಜುನಾಥ್, ಚಿಂತಾಮಣಿಯ ಸುಧಾಕರ್ ಅನಿಲ್‌ಕುಮಾರ್ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದ್ದಾರೆ.
ಆಂತರಿಕ ಕಿತ್ತಾಟವೇ ತೊಡಕು : ಹಾಗೆಯೇ, ಎರಡೂ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಲೋಕಸಭಾ ಕ್ಷೇತ್ರದಲ್ಲಿ (Loksabha) ಕೆ.ಎಚ್.ಮುನಿಯಪ್ಪ ಅವರ ಬಹಳಷ್ಟುಬೆಂಬಲಿಗರು ಮತದಾರರಾಗಿದ್ದಾರೆ. ಇಂಥಹ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ಪೈಕಿ ಕೆಲವರಿಗೆ ಅನಿಲ್‌ಕುಮಾರ್ ಅವರ ಬಗ್ಗೆ ಅನುಕಂಪವಿದ್ದರೂ ರಮೇಶ್‌ಕುಮಾರ್ ಅವರ ನಾಯಕತ್ವವನ್ನು ವಿರೋಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಇದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅವರದೇ ಪಕ್ಷದ ನಾಯಕರ ಆಂತರಿಕ ಕಿತ್ತಾಟ ದೊಡ್ಡ ತೊಡಕಾಗಿದೆ.
ಬಿಜೆಪಿ - ಜೆಡಿಎಸ್ ನಾಯಕರಲ್ಲೇ ತಳಮಳ
ರಾಜ್ಯ ರಾಜಕೀಯ (Politics) ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ತು ಚುನಾವಣೆ (MLC Election) ಅವಿಭಜಿತ ಕೋಲಾರ (Kolar) ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಗಳಲ್ಲಿ ತಾರಕ್ಕೇರಿದೆ. ಆದರೆ ಚುನಾವಣೆಗೆ ಬರೀ 4 ದಿನ ಬಾಕಿ ಇರುವಾಗಲೇ ಪಕ್ಷಗಳಲ್ಲಿ ಎದ್ದಿರುವ ಮೈತ್ರಿ ಉಹಾಪೋಹ ಪಕ್ಷದ ಕಾರ್ಯಕರ್ತರಲ್ಲಿ ತಳಮಳ, ಗೊಂದಲಕ್ಕೆ ಕಾರಣವಾಗಿದೆ. ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಒಳಗೊಂಡ ಕೋಲಾರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತುನ 1 ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್ (Congress), ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಪಕ್ಷಗಳ ನಡುವೆ ತೀವ್ರ ಪೈಪೋಟಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಒಳಗೊಳಗೆ ರಾಜಕೀಯ ಪಕ್ಷಗಳ ನಡುವೆ ಮೈತ್ರಿ ಹೊಂದಾಣಿಕೆ ನಡೆದಿದೆಯೆಂಬ ವದಂತಿ ಈಗ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ, ಜೆಡಿಎಸ್ ವಲಯದಲ್ಲಿ ತಳಮಳ ಸೃಷ್ಟಿಸಿದೆ.