Karnataka Politics: ಅಭಿವೃದ್ಧಿಗಿಂತ ಅಪಪ್ರಚಾರವೇ ಕಾಂಗ್ರೆಸ್ಸಿನ ದೊಡ್ಡ ಸಾಧನೆ: ರಾಜೂಗೌಡ

By Kannadaprabha News  |  First Published Dec 6, 2021, 2:42 PM IST

*  ತಮ್ಮ ಪಕ್ಷದ ಮರ್ಯಾದೆಯನ್ನು ತಾನಾಗೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌
*  ಗ್ರಾಮಗಳ ಸೇವೆ ಮಾಡಲು ನೇರವಾಗಬೇಕು 
*  ಜನತೆಗೆ ಹಾಗೂ ತಾಲೂಕಿಗೆ ಮಾಡಿದ ಕೆಲಸಗಳನ್ನು ನೇರವಾಗಿ ಬಂದು ಚರ್ಚಿಸಲಿ 


ಕೊಡೇಕಲ್‌(ಡಿ.06):  ಕಾಂಗ್ರೆಸ್‌(Congress) ಅಭಿವೃದ್ಧಿಯ ಕೆಲಸವನ್ನು ಬಿಟ್ಟು ಸದಾ ಬಿಜೆಪಿ(BJP) ಪಕ್ಷದ ಕಾಲೆಳೆಯಲು ಪ್ರಯತ್ನಿಸುತ್ತಿದೆ. ಇದರಿಂದ ತಮ್ಮ ಪಕ್ಷದ ಮರ್ಯಾದೆಯನ್ನು ತಾನಾಗೇ ಕಳೆದುಕೊಳ್ಳುತ್ತಿದೆ, ಅಭಿವೃದ್ಧಿಯ ಕುರಿತು ಮಾತನಾಡುವ ನೈತಿಕತೆಯನ್ನು ಸಹ ಕಾಂಗ್ರೆಸ್‌ ಪಕ್ಷ ಕಳೆದುಕೊಂಡಿದೆ ಎಂದು ಸುರಪುರ ಶಾಸಕ ರಾಜೂಗೌಡ(Rajugouda) ಹೇಳಿದರು. ಗ್ರಾಮದ ಶಾಸಕರ ಕಾರ್ಯಾಲದ ಆವರಣದಲ್ಲಿ ನಡೆದ ಕಲಬುರಗಿ-ಯಾದಗಿರಿ(Kalaburagi-Yadgir) ಎಂಎಲ್ಸಿ ಚುನಾವಣೆ(Vidhan Parishat Election) ಬಿಜೆಪಿ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಾ ಕಾಂಗ್ರೆಸ್ಸಿಗರಿಗೆ ಮೋದಿಜಿಯ(Narendra Modi) 56 ಇಂಚಿನ ಎದೆಗಾರಿಕೆ ಕುರಿತು ಮಾತನಾಡುವುದೇ ದಿನಂಪ್ರತಿ ದೊಡ್ಡ ಕಾಯಕವಾಗಿದೆ ಹೊರತು ಜನತೆಯ ಕಾಳಜಿ ಅವರಲ್ಲಿಲ್ಲ ಎಂದರು.

ಚುನಾವಣಾ ಪ್ರಚಾರದ(Election Campaign) ಕಾವು ಜೋರಾಗುತ್ತಿದ್ದು, ಪಕ್ಷಗಳ ಪ್ರಚಾರವು ಜೋರಾಗಿದೆ. ಬರುತ್ತಿರುವ ಎಂಎಲ್ಸಿ ಚುನಾವಣೆಯಲ್ಲಿ ಬಿ.ಜಿ. ಪಾಟೀಲ್‌(BG Patil) ಅವರನ್ನು ಬೆಂಬಲಿಸುವ ಮೂಲಕ ಬೃಹತ್‌ ಮತಗಳ ಅಂತರದಿಂದ ಗೆಲ್ಲಿಸಿ, ನಿಮ್ಮ ಗ್ರಾಮಗಳ ಸೇವೆಯನ್ನು ಮಾಡಲು ನೇರವಾಗಬೇಕು ಎಂದು ಹೇಳಿದರು.

Latest Videos

undefined

Where is Achche Din?: ದಿನದಿಂದ ದಿನಕ್ಕೆ ಬೆಲೆ ಏರ್ತಿದೆ ಅಚ್ಛೆದಿನ್‌ ಯಾವಾಗ?: ಪಾಟೀಲ

ಕಾಂಗ್ರೆಸ್ಸಿನಿಂದ ಮೂರು ಬಾರಿ ಶಾಸಕರಾಗಿರುವ ಮಾಜಿ ಶಾಸಕ ಬಹಿರಂಗ ಸಭೆಗೆ ಬಂದು ತಮ್ಮ ಆಡಳಿತದಲ್ಲಿ ಜನತೆಗೆ ಹಾಗೂ ತಾಲೂಕಿಗೆ ಮಾಡಿದ ಕೆಲಸಗಳನ್ನು ನೇರವಾಗಿ ಬಂದು ಚರ್ಚಿಸಲಿ, ನಾನು ಸಹಿತ 3 ಬಾರಿ ಶಾಸಕನಾಗಿದ್ದೇನೆ. ನನ್ನ ಕೆಲಸಗಳನ್ನು ಚರ್ಚಿಸುತ್ತೇನೆ. ಆಗ ನನ್ನ ಅವಧಿಯ ಸಮಗ್ರ ಗ್ರಾಮೀಣಾಭಿವೃದ್ಧಿ ಅವಧಿಯ ಕಾರ್ಯವೈಖರಿ ಮತದಾರ ಬಂಧುಗಳೆ ತಿರ್ಮಾನಿಸಲಿ ಅವಾಗ ನಿಜಸ್ವರೂಪ ತಿಳಿಯಲಿದೆ ಎಂದು ಸವಾಲೆಸೆದರು.
ಈ ಮೊದಲೆ ಕೇರಳ ಮಾದರಿ ಪಂಚಾಯತ್‌ದಂತೆ ರಾಜ್ಯದ ಎಲ್ಲಾ ಗ್ರಾಪಂ ಅಧ್ಯಕ್ಷರುಗಳಿಗೆ ಕಾರು ವಾಹನದ ಸೌಲಭ್ಯದೊಂದಿಗೆ 10,000 ರು.ಗಳ ನಗದು ಗೌರವದೊಂದಿಗೆ ಸಹಿತ ಸದಸ್ಯರಿಗೆ 3,000 ರು.ಗಳ ಗೌರವಧನ ಲಭಿಸುವಂತೆ ಕೇಂದ್ರ ಸರಕಾರದ(Central Government) ಪಂಚಾಯತ್‌ ಅಭಿವೃದ್ಧಿ ಇಲಾಖೆ ಹಾಗೂ ಪ್ರಧಾನಿ ಮೋದಿ ಅವರಿಗೆ ಪ್ರಸ್ತಾವನೆ ಸಹಿತ ಮನವಿ ಸಲ್ಲಿಸಿದ್ದೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಅಧ್ಯಕ್ಷ ಬಸನಗೌಡ ಯಡಿಯಾಪೂರ, ಬಸವರಾಜ ಸ್ಥಾವರಮಠ, ಮಾಜಿ ಜಿಪಂ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ಕಿಶೋರ್‌ ಚಂದ ಜೈನ್‌, ಗದ್ದೆಪ್ಪ ಪೂಜಾರಿ, ಡಾ. ಸುರೇಶ ಸಜ್ಜನ್‌, ಅರುಣಾ ಶಾಂತಿಲಾಲ್‌ ಸೇರಿದಂತೆ ಇತರರಿದ್ದರು.

Karnataka Politics: ಬಿಎಸ್‌ವೈ ಕಣ್ಣೀರು ಹಾಕಿದ್ದೇಕೆ? ಡಿಕೆಶಿ ಮತ್ತೆ ಪ್ರಶ್ನೆ

'ನಿಮ್ಮಪ್ಪನ ನೋಡಿ ಕಲಿತುಕೊಳ್ಳಿ'

ಬಿಟ್‌ ಕಾಯಿನ್‌ (Bitcoin) ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ (Karnataka Govt) ವಿರುದ್ಧ ಹಾಗೂ ಪೊಲೀಸ್‌ ಇಲಾಖೆ (Police Department) ಕಾರ್ಯವೈಖರಿ ಬಗ್ಗೆ ಶಾಸಕ ಪ್ರಿಯಾಂಕ ಖರ್ಗೆ (Priyank kharge) ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸುರಪುರ ಶಾಸಕ ನರಸಿಂಹನಾಯಕ (ರಾಜೂಗೌಡ) ವಾಗ್ದಾಳಿ ನಡೆಸಿದ್ದರು.

ಹುಣಸಗಿ ತಾಲೂಕಿನ ಕೊಡೆಕಲ್‌ ನಲ್ಲಿ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ವಿರೋಧ ಪಕ್ಷದಲ್ಲಿ ಇದ್ದೇವೆ ಅನ್ನುವ ಕಾರಣಕ್ಕೆ ಖರ್ಗೆ ಸುಖಾ ಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಘನತೆ ಇಲ್ಲ. ಅಷ್ಟಕ್ಕೂ ಕಾಂಗ್ರೆಸ್‌ನವರಿಗೆ ಸರ್ಕಾರದ ವಿರುದ್ಧ ಯಾವುದಾದರೊಂದು ವಿಷಯದ ಬಗ್ಗೆ ಬೇಕಾಗಿದ್ದರಿಂದ ಈಗ ಬಿಟ್‌ ಕಾಯಿನ್‌ ವಿಚಾರ ಮುಂದಿಟ್ಟುಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ರಾಜುಗೌಡ ವಿಪಕ್ಷಗಳನ್ನು ಟೀಕಿಸಿದ್ದರು. ಒಂದು ಬೆರಳು ನೀವು ನೇರ ಮಾಡಿದರೆ, ನಾಲ್ಕು ಬೆರಳು ನಿಮಗೆ ಉಲ್ಟಾ ತೋರಿಸುತ್ತವೆ ಎಂದು ಶಾಸಕ ರಾಜೂಗೌಡ, ಪೊಲೀಸ್‌ ಇಲಾಖೆ ಏನು ಅನ್ನೋದನ್ನ ನಿಮ್ಮ ತಂದೆಯವರಿಗೆ ಕೇಳಿ ತಿಳಿದುಕೊಳ್ಳಿ ಎಂದು ಪ್ರಿಯಾಂಕಗೆ ಟಾಂಗ್‌ ನೀಡಿದರು.
 

click me!