ರಾಜ್ಯ ಸರ್ಕಾರ 18 ವರ್ಷದವರಿಗೆ ಮದ್ಯ ಖರೀದಿಗೆ ಅನುಮತಿ ಕೊಡಲು ಚಿಂತಿಸುತ್ತಿದೆ. ಬಿಜೆಪಿ ಸರ್ಕಾರದ ಈ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರು (ಜ.18): ರಾಜ್ಯ ಸರ್ಕಾರ 18 ವರ್ಷದವರಿಗೆ ಮದ್ಯ ಖರೀದಿಗೆ ಅನುಮತಿ ಕೊಡಲು ಚಿಂತಿಸುತ್ತಿದೆ. ಬಿಜೆಪಿ ಸರ್ಕಾರದ ಈ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ. ಇದು ಒಂದು ತಲೆಮಾರನ್ನು ನಾಶ ಮಾಡಲು ಹೊರಟಿರುವ ಕ್ರಮ. ಯುವ ಸಬಲೀಕರಣ, ಯುವಕರಿಗೆ ಉದ್ಯೋಗ ಕೊಡಲು ಇವರಿಗೆ ಆಗಿಲ್ಲ.ಈಗ ಯುವಕರನ್ನು ದುಷ್ಟಟಕ್ಕೆ ಪ್ರೇರೇಪಿಸುವ ಯೋಚನೆ ಸರ್ಕಾರ ಮಾಡ್ತಿದೆ. ಬಿಜೆಪಿ ಸರ್ಕಾರಕ್ಕೆ ಇದರ ಪರಿಣಾಮ ಗೊತ್ತಿಲ್ಲ, ಕೇವಲ ದುಡ್ಡು ಮಾಡಬೇಕು ಅಷ್ಟೇ. ಪೆಟ್ರೋಲ್, ಡಿಸೇಲ್ ಹೆಚ್ಚು ಮಾಡಿ ಅದರಿಂದ ಲೂಟಿ ಮಾಡುವುದು ಎಂದರು.
ಇದೀಗ ಯುವಕರು ಕುಡಿಯಿರಿ ಅಂತ ಹೇಳಿ ಇವರು ಸರ್ಕಾರ ನಡೆಸಬೇಕಾ? ಸಮಾಜದಲ್ಲಿ ಆಗುವ ಕ್ರಿಮಿನಲ್ ಚಟುವಟಿಕೆಗಳು ಮದ್ಯಪಾನ ಮತ್ತು ಗಾಂಜಾದಿಂದ ಆಗುವುದು. ಮಂಗಳೂರಿನಲ್ಲಿ ಎಲ್ಲಾ ಕಡೆ ವಿಡಿಯೋ ಗೇಮ್, ಸ್ಕಿಲ್ ಗೇಮ್ ನಡೀತಾ ಇದೆ. ಮಕ್ಕಳು ಶಾಲೆಗೆ ಹೋಗುವ ಬದಲು ಸ್ಕಿಲ್ ಗೇಮ್ ಮಾಡ್ತಾ ಇದಾರೆ. ಬಿಜೆಪಿಯವರ ಈ ಕೆಲಸವನ್ನು ಯಾವ ತಾಯಿಯೂ ಸಹಿಸಲು ಸಾಧ್ಯವಿಲ್ಲ. ವೀರೇಂದ್ರ ಹೆಗ್ಗಡೆಯವರು ಮದ್ಯವರ್ಜನ ಶಿಬಿರ ಮಾಡ್ತಾ ಇದಾರೆ. ಆದರೆ ಅಧಿಕಾರದಲ್ಲಿ ಕೂತವರು ಜನರನ್ನು ನಶಿಸಲು ಕಾನೂನು ತರ್ತಾ ಇದಾರೆ. ತಕ್ಷಣ ಈ ಆಲೋಚನೆ ಕೈ ಬಿಟ್ಟು ನಿರ್ಧಾರ ವಾಪಾಸ್ ಪಡೆಯಬೇಕು ಎಂದು ತಿಳಿಸಿದರು.
ಗೃಹ ಸಚಿವ, ಆರೋಗ್ಯ ಸಚಿವರು ಇತ್ತ ಕಡೆ ಗಮನ ಹರಿಸಲಿ. ಭವಿಷ್ಯಕ್ಕೆ ಮಾರಕವಾದ ಆದಾಯ ನಮಗೆ ಅಗತ್ಯವಿಲ್ಲ. 40% ಕಮಿಷನ್ ಹೊಡೆಯೋದನ್ನ ನಿಲ್ಲಿಸಿ ರಾಜ್ಯದ ಬೊಕ್ಕಸ ತುಂಬಿಸಿ. ಈ ವಿಚಾರದಲ್ಲಿ ಮುಂದೆ ಹೋದ್ರೆ ಜನರು ಬೀದಿಗಿಳಿತಾರೆ, ಕಾಂಗ್ರೆಸ್ ನೇತೃತ್ವ ವಹಿಸುತ್ತೆ.ಮದ್ಯಪಾನ ನಿಷೇಧ ಮಾಡೋದಾದ್ರೆ ಸಂಪೂರ್ಣವಾಗಿ ಮಾಡಲಿ.ಬಿಜೆಪಿ ರಾಜ್ಯದ ಸಾಲವನ್ನು ನಾಲ್ಕೇ ವರ್ಷದಲ್ಲಿ 2 ಲಕ್ಷ 36 ಕೋಟಿಗೆ ಏರಿಸಿದೆ.ಬಿಜೆಪಿಯ ಎಲ್ಲಾ ನಾಯಕರು ಅಂಬೇಡ್ಕರ್, ಗಾಂಧೀಜಿ ವಿರುದ್ದ ಮಾತನಾಡ್ತಾರೆ ಎಂದರು.
ತಿಂಗಳಲ್ಲಿ ಸ್ಯಾಂಟ್ರೋ ರವಿ ಕೇಸ್ ಮುಚ್ಚಿ ಹಾಕ್ತಾರೆ: ಎಚ್.ಡಿ.ಕುಮಾರಸ್ವಾಮಿ
ಅಲ್ಪಸಂಖ್ಯಾತರ ವಿರುದ್ದ ಮಾತ್ರ ಅಲ್ಲ, ಎಲ್ಲರ ವಿರುದ್ದ ಮಾತನಾಡ್ತಾರೆ ಇಂಥವರ ವಿರುದ್ದ ಮೋದಿಯವರು ಏನು ಕ್ರಮ ಕೈಗೊಳ್ತಾರೆ?. ಬಿಜೆಪಿ ರಾಜ್ಯಾಧ್ಯಕ್ಷರೇ ರಸ್ತೆ, ಚರಂಡಿ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾರೆ.ಅವರ ಮೇಲೆ ಯಾಕೆ ಇನ್ನೂ ಬಿಜೆಪಿಯಲ್ಲಿ ಕ್ರಮ ಆಗಿಲ್ಲ. ಸಂವಿಧಾನ ತಿದ್ದುಪಡಿ ಮಾಡ್ತೇನೆ ಅಂತ ಹೇಳಿದವರ ಮೇಲೆ ಯಾಕೆ ಕ್ರಮ ಆಗಿಲ್ಲ ಎಂದು ಖಾದರ್ ಹೇಳಿದರು.