Karnataka Congress ಇಬ್ರಾಹಿಂ ಜೊತೆ ಲಿಂಗಾಯತ ಪ್ರಭಾವಿ ನಾಯಕ ಕಾಂಗ್ರೆಸ್‌ ಬಿಡ್ತಾರಾ?

Published : Jan 30, 2022, 07:40 PM IST
Karnataka Congress ಇಬ್ರಾಹಿಂ ಜೊತೆ  ಲಿಂಗಾಯತ ಪ್ರಭಾವಿ ನಾಯಕ ಕಾಂಗ್ರೆಸ್‌ ಬಿಡ್ತಾರಾ?

ಸಾರಾಂಶ

* ಇಬ್ರಾಹಿಂ ಜತೆ  ಲಿಂಗಾಯತ ಪ್ರಭಾವಿ ನಾಯಕ ಕಾಂಗ್ರೆಸ್‌ ಬಿಡ್ತಾರಾ? * ಹುಬ್ಬಳ್ಳಿಯಲ್ಲಿ ಸಿಎಮ್ ಇಬ್ರಾಹಿಂ ಭೇಟಿಗೆ ಬಂದ ಎಸ್.ಆರ್  ಪಾಟೀಲ್. * ಇಬ್ರಾಹಿಂ ಅವರ ಜೊತೆ ಚರ್ಚಿಸಿದ ಬಳಿಕ ಮಾತನಾಡುವೆ ಎಂದ ಪಾಟೀಲ್

ಹುಬ್ಬಳ್ಳಿ, (ಜ.30): ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಸಮಾಧನ ಸ್ಫೋಟವಾಗಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನ ಸಿಕ್ಕಿಲ್ಲವೆಂದು ಬೇಸರಗೊಂಡಿರುವ ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ್ದಾರೆ.ತಮ್ಮ ಜತೆಗೆ ಕಾಂಗ್ರೆಸ್ ಹಿರಿಯ ನಾಯಕನನ್ನು ಕರೆದುಕೊಂಡುವ ಹೋಗುವ ಪ್ಲಾನ್ ಮಾಡಿದ್ದಾರೆ. 

ಹೌದು..ವಿಧಾನಪರಿಷತ್ ಚುನಾವಣೆ ಟಿಕೆಟ್ ಸಿಕ್ಕಿಲ್ಲವೆಂದು ಸೈಲೆಂಟ್ ಆಗಿರುವ ಹಿರಿಯ ನಾಯಕ ಎಸ್‌ಆರ್ ಪಾಟೀಲ್ ಕಾಂಗ್ರೆಸ್ ತೊರೆಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಮಧ್ಯೆ ಎಸ್‌ಆರ್ ಪಾಟೀಲ್ ಭೇಟಿಗೆ ಇಬ್ರಾಹಿಂ ಹುಬ್ಬಳ್ಳಿಗೆ ಆಗಮಿಸಿದ್ದು ಸಂಚಲನ ಮೂಡಿಸಿದೆ. 

CM Ibrahim ಕಣ್ಣೀರು ಹಾಕುತ್ತಾ ಕಾಂಗ್ರೆಸ್‌ಗೆ ಶಾಪ ಹಾಕಿದ ಸಿ.ಎಂ. ಇಬ್ರಾಹಿಂ
 
ನಾನು ಎಸ್.ಆರ್. ಪಾಟೀಲ್ ಅವರನ್ನು ಭೇಟಿ ಮಾಡುತ್ತೇನೆ. ಏನು ಆಗುತ್ತದೆಯೋ ನೋಡಬೇಕಿದೆ. ನಮ್ಮ ಜೊತೆ ಬರುವವರನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಇಬ್ರಾಹಿಂ ಭೇಟಿಯಾದ ಎಸ್‌ಆರ್ ಪಾಟೀಲ್
ಯೆಸ್..ಹುಬ್ಬಳ್ಳಿಯಲ್ಲಿ ಸಿಎಂ ಇಬ್ರಾಹಿಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಸ್‌ಆರ್ ಪಾಟೀಲ್ ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ. ಇನ್ನು ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಆರ್ ಪಾಟೀಲ್,

ಸೌಜನ್ಯಕ್ಕಾಗಿ ಇಬ್ರಾಹಿಂ ಅವರನ್ನು ಭೇಟಿ ಮಾಡಲು‌ ಬಂದಿದ್ದೇನೆ. ನಾನು ಮೇಲೆ ಮನೆಯಲ್ಲಿ ವಿರೋಧ ಪಕ್ಷದ ನಾಯಕನಿದ್ದಾಗ, ಸಾಕಷ್ಟು ಸಹಕಾರ ನೀಡಿದ್ರು‌. ಇಬ್ರಾಹಿಂ ನನ್ನ ಆತ್ಮೀಯ ಒಡನಾಡಿಯಾಗಿದ್ದರು ಎಂದು ಹೇಳಿದರು.

ಅವರು ಮಾಧ್ಯಮಗಳ ಮುಂದೆ ತೊಡಗಿಕೊಂಡ ದುಃಖ ನೋಡಿದ್ದೇನೆ. ಅವರ ಮನವೊಲಿಕೆ ಪ್ರಯತ್ನ ಮಾಡುತ್ತೇನೆ. ಪರಿಷತ್ ಟೀಕೆಗೆ ಕೈತಪ್ಪಿದಾಗ ನಾನು ಹೇಳಿದ್ದೆ..ಈಗಲೂ ಅದೇ ಮಾತು ಹೇಳುವೆ. ನಾನು‌ ನೊಂದಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ಟಿಕೆಟ್ ನೀಡಲಿಲ್ಲ ಅಂದ್ರೆ ವೈಯಕ್ತಿಕ ನಷ್ಟ ಏನೂ ಇಲ್ಲ. ನನಗೆ ಟಿಕೆಟ್ ಕೈ ತಪ್ಪಿದ್ದು, ಉತ್ತರ ಕರ್ನಾಟಕ ಭಾಗಕ್ಕೆ‌ ನಷ್ಟ ಎಂದು ತಿಳಿಸಿದರು.

ಪಕ್ಷ ತೆಗೆದುಕೊಂಡು ನಿರ್ಧಾರಕ್ಕೆ ನಾನು ಬದ್ದ. ಪಕ್ಷ ತೋರೆಯುವ ಬಗ್ಗೆ ನಾನು ಎಲ್ಲಿಯೂ ಹೇಳಿಲ್ಲ. ಇಬ್ರಾಹಿಂ ಅವರನ್ನು ಭೇಟೆಯಾಗಿ ಸಮಾಲೋಚನೆ ನಡೆಸಲು ಬಂದಿರುವೆ. ಇಬ್ರಾಹಿಂ ಅವರ ಜೊತೆ ಚರ್ಚಿಸಿದ ಬಳಿಕ ಮಾತನಾಡುವೆ ಎಂದು ಸ್ಪಷ್ಟಪಡಿಸಿದರು.

ಡಿಕೆಶಿ, ಸಿದ್ದರಾಮಯ್ಯಗೆ ಇಬ್ರಾಹಿಂ ಸವಾಲು
ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ. ನಂಗೆ ಎಂಎಲ್ ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ನಾಳೆನೇ ರಾಜಿನಾಮೆ ಕೊಡುತ್ತೇನೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ. ಯಾರು ಗೆಲ್ತಾರೆ ನೋಡೋಣ ಎಂದು ಸವಾಲು ಹಾಕಿದರು.

ಡಿಕೆಶಿ ಬಹಳ ದೊಡ್ಡವರು ನಮ್ಮಂಥವರನೆಲ್ಲಾ ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡುತ್ತೇನೆ ಅಂದ್ರೂ. ಆದ್ರೆ ಏನು ಆಗಿಲ್ಲ.ನಾನು ಹೋಗ್ತೇನೆ ಅಂತ ಗೊತ್ತಾದ ಬಳಿಕ ಯುಟಿ ಖಾದರ್ ಅವರನ್ನು ಉಪನಾಯಕ ಮಾಡಿದ್ದಾರೆ. ಮೊದಲೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದರು.

ನಾನು ಹೋದ ಮೇಲೆ ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತರಿಗೆ ಮರ್ಯಾದೆ ಸಿಗುತ್ತೆ‌ ಎಂದಿದ್ದೆ ಹಾಗೇ ಆಗ್ತಿದೆ. ಆದರೆ ಈಗಲೂ ತಲೆ ಮೇಲೆ ಇರೋದನ್ನು ತಾವು ಇಟ್ಟುಕೊಂಡು ಕಾಲಿಗೆ ಹಾಕುವುದನ್ನು ನಮಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದು ತನ್ವೀರ್ ಸೇಠ್ ಅವರನ್ನು ನೇಮಿಸಲಿ, ಡಿಕೆಶಿ ಸ್ಥಾನಕ್ಕೆ ಯು.ಟಿ.ಖಾದರ್ ನೇಮಿಸಲಿ ನೊಡೋಣ ಎಂದರು.

ನಾನು ಎಸ್.ಆರ್. ಪಾಟೀಲ್ ಅವರನ್ನು ಭೇಟಿ ಮಾಡುತ್ತೇನೆ. ಏನು ಆಗುತ್ತದೆಯೋ ನೋಡಬೇಕಿದೆ. ನಮ್ಮ ಜೊತೆ ಬರುವವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇಲ್ಲಿ 'ಅಲಿಂಗ' ಮಾಡುತ್ತೇನೆ ಅಲ್ಲಿ 'ಅಗೌ' ಮಾಡುತ್ತೇನೆ. ಅಲ್ಪಸಂಖ್ಯಾತ -ಲಿಂಗಾಯಿತರು, ಗೌಡ- ಅಲ್ಪಸಂಖ್ಯಾತರು. ಅವರು ಅಹಿಂದ ಮಾಡಿಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನವರಿಗೆ ಟಾಂಗ್ ಕೊಟ್ಟರು.

ಕಾಂಗ್ರೆಸ್​ ಬಿಡುವ ಕುರಿತು ಮಾತನಾಡಿದ್ದ ಸಿಎಂ ಇಬ್ರಾಹಿಂ, ಕಾಂಗ್ರೆಸ್ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಕಾಂಗ್ರೆಸ್ ತೊರೆಯಲು ಸಿಎಂ ಇಬ್ರಾಹಿಂ ನಿರ್ಧರಿಸಿದ್ದಾರೆ. ಇಬ್ರಾಹಿಂ ಬೆಂಗಳೂರಿನಲ್ಲಿ ತಮ್ಮ ನಿಲುವು ಪ್ರಕಟಿಸಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲಿ ರಾಜೀನಾಮೆ ಕೊಡ್ತೇನೆ. ನಾನು ಜೆಡಿಎಸ್ ಸೇರುತ್ತೇನೊ? ಮಾಯಾವತಿ ಪಕ್ಷ ಸೇರುತ್ತೇನೊ ಗೊತ್ತಿಲ್ಲ. ದೇವೇಗೌಡರು ಪುಣ್ಯಾತ್ಮರು. ಡಿಕೆಶಿ ಜೊತೆಗೆ ಹೊಂದಾಣಿಕೆ ಆಗಲ್ಲ. ನಾನು ಕಾಂಗ್ರೆಸ್ ತೊರೆದಿರುವ ಪರಿಣಾಮ ಯುಪಿ ಚುನಾವಣೆಯ ಮೇಲೆ ಆಗಲಿದೆ ಎಂದಿದ್ದರು

ಸಿದ್ದು ಮಾತು
  ಸಿಎಂ ಇಬ್ರಾಹಿಂ ನನಗೆ ಒಳ್ಳೆಯ ಸ್ನೇಹಿತ ಅವರು ಜೆಡಿಎಸ್​​ಗೆ (JDS) ಹೋಗಲ್ಲ. ಅವರು ಕೋಪದಲ್ಲಿ ಮಾತನಾಡುತ್ತಾರೆ. ಅವರ ಕಾಂಗ್ರೆಸ್​ನಲ್ಲೇ (Congress) ಇರುತ್ತಾರೆ. ಅವರ ಜೊತೆ ಮಾತನಾಡುತ್ತೇನೆ. ವಿಶೇಷವಾಗಿ ಬಿರಿಯಾನಿ ಮಾಡಿಸುತ್ತಾರೆ. ಹೋಗಿ ಸವಿಯುತ್ತೇನೆ ಎಂದು ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಜೆಡಿಎಸ್‌ನತ್ತ ಇಬ್ರಾಹಿಂ ಚಿತ್ತ
ಈಗಾಗಲೇ ವಿಧಾನ ಪರಿಷತ್​ ವಿಪಕ್ಷ ನಾಯಕನ ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ತೊರೆಯುವುದಾಗಿ ಅವರು ಪ್ರಕಟಿಸಿದ್ದಾರೆ. ಇದೇ ಬೆನ್ನಲ್ಲೇ ಇದೀಗ ಅವರನ್ನು ಸೆಳೆಯಲು ಜೆಡಿಎಸ್​ ಮುಂದಾಗಿದೆ. ಈ ಸಂಬಂಧ ಇಂದು ಅವರು ಎಚ್​ಡಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು, ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ.

ಜೆಡಿಎಸ್​ ನಾಯಕರ ಭೇಟಿ ಸಂಬಂಧ ಕುಮಾರಸ್ವಾಮಿ ಆಗಲಿ, ಸಿಎಂ ಇಬ್ರಾಹಿಂ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಅವರು ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಲಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್