CM Ibrahim ಕಣ್ಣೀರು ಹಾಕುತ್ತಾ ಕಾಂಗ್ರೆಸ್‌ಗೆ ಶಾಪ ಹಾಕಿದ ಸಿ.ಎಂ. ಇಬ್ರಾಹಿಂ

By Suvarna News  |  First Published Jan 30, 2022, 5:53 PM IST

* ಮಾಧ್ಯಮದೆದುರು ಕಣ್ಣೀರು ಹಾಕಿದ ಸಿ.ಎಂ. ಇಬ್ರಾಹಿಂ
* ಕಣ್ಣೀರು ಹಾಕುತ್ತಾ ಕಾಂಗ್ರೆಸ್‌ಗೆ ಶಾಪ ಹಾಕಿದ ಸಿ.ಎಂ. ಇಬ್ರಾಹಿಂ
* ಡಿಕೆಶಿ ಹಾಗೂ ಸಿದ್ದರಾಮಯ್ಯಗೆ ಸವಾಲು


ಹುಬ್ಬಳ್ಳಿ, (ಜ.30): ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿರುವ ಸಿಎಂ ಇಬ್ರಾಹಿಂ (CM Ibrahim) ಕಾಂಗ್ರೆಸ್ (Congress) ತೊರೆದಿದ್ದಾರೆ.

ಇಂದು(ಭಾನುವಾರ) ಹುಬ್ಬಳ್ಳಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಕ್ಷದಿಂದ ಹೊರಬಂದಿದ್ದೆನೆ. ವಾಪಸ್ ಹೋಗೋ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ. ನನ್ನ ಶಾಪ ಭಾರಿ ಕೆಟ್ಟದ್ದು,ಇವಾಗ ತಟ್ತಿದೆ. ನಾನು ಬಡವ ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಕಾಂಗ್ರೆಸ್‌ಗೆ ಶಾಪ ಹಾಕಿದರು. 

Tap to resize

Latest Videos

Karnataka Politics: ಸಿಎಂ ಇಬ್ರಾಹಿಂ ಮನವೊಲಿಸ್ತಾರಾ ಸಿದ್ದರಾಮಯ್ಯ.? ಬಿರಿಯಾನಿ ಪಾಲಿಟಿಕ್ಸ್!

ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ. ನಂಗೆ ಎಂಎಲ್ ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ನಾಳೆನೇ ರಾಜಿನಾಮೆ ಕೊಡುತ್ತೇನೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ. ಯಾರು ಗೆಲ್ತಾರೆ ನೋಡೋಣ ಎಂದು ಸವಾಲು ಹಾಕಿದರು.

ಡಿಕೆಶಿ ಬಹಳ ದೊಡ್ಡವರು ನಮ್ಮಂಥವರನೆಲ್ಲಾ ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡುತ್ತೇನೆ ಅಂದ್ರೂ. ಆದ್ರೆ ಏನು ಆಗಿಲ್ಲ.ನಾನು ಹೋಗ್ತೇನೆ ಅಂತ ಗೊತ್ತಾದ ಬಳಿಕ ಯುಟಿ ಖಾದರ್ ಅವರನ್ನು ಉಪನಾಯಕ ಮಾಡಿದ್ದಾರೆ. ಮೊದಲೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದರು.

ನಾನು ಹೋದ ಮೇಲೆ ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತರಿಗೆ ಮರ್ಯಾದೆ ಸಿಗುತ್ತೆ‌ ಎಂದಿದ್ದೆ ಹಾಗೇ ಆಗ್ತಿದೆ. ಆದರೆ ಈಗಲೂ ತಲೆ ಮೇಲೆ ಇರೋದನ್ನು ತಾವು ಇಟ್ಟುಕೊಂಡು ಕಾಲಿಗೆ ಹಾಕುವುದನ್ನು ನಮಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದು ತನ್ವೀರ್ ಸೇಠ್ ಅವರನ್ನು ನೇಮಿಸಲಿ, ಡಿಕೆಶಿ ಸ್ಥಾನಕ್ಕೆ ಯು.ಟಿ.ಖಾದರ್ ನೇಮಿಸಲಿ ನೊಡೋಣ ಎಂದರು.

ನಾನು ಎಸ್.ಆರ್. ಪಾಟೀಲ್ ಅವರನ್ನು ಭೇಟಿ ಮಾಡುತ್ತೇನೆ. ಏನು ಆಗುತ್ತದೆಯೋ ನೋಡಬೇಕಿದೆ. ನಮ್ಮ ಜೊತೆ ಬರುವವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇಲ್ಲಿ 'ಅಲಿಂಗ' ಮಾಡುತ್ತೇನೆ ಅಲ್ಲಿ 'ಅಗೌ' ಮಾಡುತ್ತೇನೆ. ಅಲ್ಪಸಂಖ್ಯಾತ -ಲಿಂಗಾಯಿತರು, ಗೌಡ- ಅಲ್ಪಸಂಖ್ಯಾತರು. ಅವರು ಅಹಿಂದ ಮಾಡಿಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನವರಿಗೆ ಟಾಂಗ್ ಕೊಟ್ಟರು.

ಕಾಂಗ್ರೆಸ್​ ಬಿಡುವ ಕುರಿತು ಮಾತನಾಡಿದ್ದ ಸಿಎಂ ಇಬ್ರಾಹಿಂ, ಕಾಂಗ್ರೆಸ್ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಕಾಂಗ್ರೆಸ್ ತೊರೆಯಲು ಸಿಎಂ ಇಬ್ರಾಹಿಂ ನಿರ್ಧರಿಸಿದ್ದಾರೆ. ಇಬ್ರಾಹಿಂ ಬೆಂಗಳೂರಿನಲ್ಲಿ ತಮ್ಮ ನಿಲುವು ಪ್ರಕಟಿಸಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲಿ ರಾಜೀನಾಮೆ ಕೊಡ್ತೇನೆ. ನಾನು ಜೆಡಿಎಸ್ ಸೇರುತ್ತೇನೊ? ಮಾಯಾವತಿ ಪಕ್ಷ ಸೇರುತ್ತೇನೊ ಗೊತ್ತಿಲ್ಲ. ದೇವೇಗೌಡರು ಪುಣ್ಯಾತ್ಮರು. ಡಿಕೆಶಿ ಜೊತೆಗೆ ಹೊಂದಾಣಿಕೆ ಆಗಲ್ಲ. ನಾನು ಕಾಂಗ್ರೆಸ್ ತೊರೆದಿರುವ ಪರಿಣಾಮ ಯುಪಿ ಚುನಾವಣೆಯ ಮೇಲೆ ಆಗಲಿದೆ ಎಂದಿದ್ದರು

ಸಿದ್ದು ಮಾತು
  ಸಿಎಂ ಇಬ್ರಾಹಿಂ ನನಗೆ ಒಳ್ಳೆಯ ಸ್ನೇಹಿತ ಅವರು ಜೆಡಿಎಸ್​​ಗೆ (JDS) ಹೋಗಲ್ಲ. ಅವರು ಕೋಪದಲ್ಲಿ ಮಾತನಾಡುತ್ತಾರೆ. ಅವರ ಕಾಂಗ್ರೆಸ್​ನಲ್ಲೇ (Congress) ಇರುತ್ತಾರೆ. ಅವರ ಜೊತೆ ಮಾತನಾಡುತ್ತೇನೆ. ವಿಶೇಷವಾಗಿ ಬಿರಿಯಾನಿ ಮಾಡಿಸುತ್ತಾರೆ. ಹೋಗಿ ಸವಿಯುತ್ತೇನೆ ಎಂದು ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಜೆಡಿಎಸ್‌ನತ್ತ ಇಬ್ರಾಹಿಂ ಚಿತ್ತ
ಈಗಾಗಲೇ ವಿಧಾನ ಪರಿಷತ್​ ವಿಪಕ್ಷ ನಾಯಕನ ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ತೊರೆಯುವುದಾಗಿ ಅವರು ಪ್ರಕಟಿಸಿದ್ದಾರೆ. ಇದೇ ಬೆನ್ನಲ್ಲೇ ಇದೀಗ ಅವರನ್ನು ಸೆಳೆಯಲು ಜೆಡಿಎಸ್​ ಮುಂದಾಗಿದೆ. ಈ ಸಂಬಂಧ ಇಂದು ಅವರು ಎಚ್​ಡಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು, ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ.

ಜೆಡಿಎಸ್​ ನಾಯಕರ ಭೇಟಿ ಸಂಬಂಧ ಕುಮಾರಸ್ವಾಮಿ ಆಗಲಿ, ಸಿಎಂ ಇಬ್ರಾಹಿಂ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಅವರು ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಲಿದ್ದಾರೆ ಎನ್ನಲಾಗಿದೆ.

click me!