Karnataka Congress ಪಾಟೀಲ್ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್, ಸಂಚಲನ ಮೂಡಿಸಿದ ಇಬ್ರಾಹಿಂ ಹೇಳಿಕೆ

By Suvarna News  |  First Published Jan 30, 2022, 8:52 PM IST

* ಸಿಎಂ ಇಬ್ರಾಹಿಂ, ಎಸ್‌ಆರ್ ಪಾಟೀಲ್ ಭೇಟಿ ಮುಕ್ತಾಯ
* ಮಹತ್ವದ ಮಾತುಕತೆ ಮಾಡಿದ ಉಭಯ ನಾಯಕರು
* ಎಸ್.ಆರ್ ಪಾಟೀಲ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್ ಇಬ್ರಾಹಿಂ


ಹುಬ್ಬಳ್ಳಿ, (ಜ.30): ಎಸ್‌ಆರ್ ಪಾಟೀಲ್ (SR Patil) ಹಾಗೂ ಸಿಎಂ ಇಬ್ರಾಹಿಂ(CM Ibrahim) ಇಂದು(ಭಾನುವಾರ) ಹುಬ್ಬಳ್ಳಿಯಲ್ಲಿ(Hubballi) ಭೇಟಿ ಮಾಡಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ.

ಈಗಾಗಲೇ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿರುವ ಸಿಎಂ ಇಬ್ರಾಹಿಂ, ಕಾಂಗ್ರೆಸ್ ಹಿರಿಯ ನಾಯಕ ಎಸ್‌ಆರ್ ಪಾಟೀಲ್ ಅವರನ್ನ ಭೇಟಿ ಮಾಡಲೆಂದೇ ಹುಬ್ಬಳ್ಳಿ ಆಗಮಿಸಿದ್ದರು. ಅದಂತೆ ಇದೀಗ ಉಭಯ ನಾಯಕರ ಭೇಟಿಯಾಗಿದ್ದು, ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಇನ್ನು ಸಭೆ ಬಳಿಕ ಇಬ್ಬರು ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ಹೇಳಿದ್ದು, ಅದು ಈ ಕೆಳಗಿನಂತಿದೆ.

Latest Videos

undefined

Karnataka Congress ಇಬ್ರಾಹಿಂ ಜೊತೆ ಲಿಂಗಾಯತ ಪ್ರಭಾವಿ ನಾಯಕ ಕಾಂಗ್ರೆಸ್‌ ಬಿಡ್ತಾರಾ?

ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಎಸ್.ಆರ್ ಪಾಟೀಲ ಜೊತೆಗಿನ  ಮಿಟಿಂಗ್ 100%. ಸಕ್ಸಸ್ ಫುಲ್ ಆಗಿದೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
 
ನನ್ನ ಜೊತೆಗೆ ಬಹಳಷ್ಟು ದೊಡ್ಡವರ ಬೆಂಬಲವಿದೆ, ಹೆಸರು ಹೇಳಲ್ಲ. ಕಾಂಗ್ರೆಸ್ ನವರು ನನ್ನ ಜೊತೆಗಿದ್ದಾರೆ ಎನ್ನುವುದನ್ನು ಹೇಳಲ್ಲ. ಸಮಯಕ್ಕಾಗಿ ಕಾಯುತ್ತಿದ್ದೆನೆ. ಆಲಿಂಗ( ಅಲ್ಪಸಂಖ್ಯಾತ- ಲಿಂಗಾಯತ) ಚಳುವಳಿ ವಿಜಯಪುರದಿಂದ ಆರಂಭ ಮಾಡುತ್ತೇವೆ. ಚಳುವಳಿಗೆ ಎಸ್ ಆರ್ ಪಾಟೀಲ್ ಬರುತ್ತಾರೆ ಎಂದು ಬಾಂಬ್ ಸಿಡಿಸಿದರು.

ಕಾಂಗ್ರೆಸ್ ಬಿಟ್ಟು ಎಸ್ ಆರ್ ಪಾಟೀಲ್ ಬರ್ತಾರಾ ಅಂತ ಕಾದುನೋಡಿ. ನನಗೆ ತುಂಬಾ ನೋವಾಗುತ್ತಿದೆ ಅಂತ ಎಸ್ ಆರ್ ಪಾಟೀಲ್ ಸಹಾನುಭೂತಿ ವ್ಯಕ್ತಪಡಿಸಿದರು. ಅವರು ಪಕ್ಷದಲ್ಲಿ ಇರಬೇಕು ಅಂತ ಮನವಿ ಮಾಡಿದರು. ಆದರೆ ಅದು ಮುಗಿದ ಅಧ್ಯಾಯ. ಒಂದು ಸಲ ಡ್ಯಾಂ ಹೊಡೆದು ನೀರು ಹರಿದು ಹೋದ್ರೆ ಮುಗಿತು ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್‌ ತೊರೆಯುವುದನ್ನು ಮತ್ತೊಮ್ಮೆ ಖಚಿತಪಡಿಸಿದರು.

ಇನ್ನೂ ಐದಾರು ದಿನಗಳಲ್ಲಿ ಕೊಪ್ಪಳ, ಕಲಬುರಗಿ, ಬಳ್ಳಾರಿ, ರಾಯಚೂರು ಮತ್ತು ಬೆಳಗಾವಿ ಪ್ರವಾಸ ಮಾಡುತ್ತೆನೆ. ನಾನು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚು ಬೆಂಬಲ ಸಿಗುತ್ತಿದೆ ಎಂದರು.

ನನಗೆ ಸಿದ್ಧರಾಮಯ್ಯರಿಂದ ಯಾವುದೇ ಫೋನ್ ಕಾಲ್ ಬಂದಿಲ್ಲ. ಅದನ್ನು ನಾನು ನಿರೀಕ್ಷೆ ಸಹ ಮಾಡಲ್ಲ. ನನಗೆ ಜೆಡಿಎಸ್ , ಮಮತಾ ಬ್ಯಾನರ್ಜಿ, ಅಖೀಲೇಶ್ ಯಾದವರ ಮೇಲೆ ಒಲವಿದೆ ಎಂದು ತಿಳಿಸಿದರು.

ಎಸ್‌ಆರ್ ಪಾಟೀಲ್ ಮಾತು
ಇನ್ನು ಇದೇ ವೇಳೆ ಎಸ್‌ಆರ್ ಪಾಟೀಲ್ ಮಾತನಾಡಿ, ಎಲ್ಲಾ ವಿಚಾರಗಳನ್ನು ಮಾಧ್ಯಮ ಎದುರು ಹೇಳಲ್ಲ. ಸಮಯ ಸಂದರ್ಭದಲ್ಲಿ ಎಲ್ಲಾ ಹೇಳತ್ತೆನೆ, ವೇಟ್ ಆ್ಯಂಡ್ ಸಿ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟರು,.

ನನಗೆ ಇಲ್ಲಿಗೆ ಬಂದು ಇಬ್ರಾಹಿಂ ಜೊತೆಗೆ ಯಾರು ಮಾತನಾಡಲು ಹೇಳಿಲ್ಲ. ನಾನು ಸ್ವ ಇಚ್ಛೆಯಿಂದ ಪಕ್ಷದ ಹಿತದೃಷ್ಟಿಯಿಂದ ಮತ್ತು ಸ್ನೇಹಿತನ ನೋವನ್ನು ಆಲಿಸಲು ಬಂದಿದ್ದೆನೆ. ಇಬ್ರಾಹಿಂ ಅವರು ವಿಪಕ್ಷ ನಾಯಕನಾಗುವ ಆಸೆಯಿಟ್ಟುಕೊಂಡಿದ್ದರು. ಅವರು ಪಕ್ಷದಲ್ಲಿ ಇರಬೇಕು ಅಂತ ಮನವಿ ಮಾಡಿದ್ದೇನೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ, ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.

ನನಗೆ ಸದ್ಯ ಯಾವುದೇ ಅಸಮಾಧಾನ ಇಲ್ಲ. ಚುನಾವಣೆ ಸಮಯದಲ್ಲಿ ಒಬ್ಬ ಕಾರ್ಯಕರ್ತ ಪಕ್ಷ ಬಿಟ್ಟು ಹೋಗಬಾರದು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ಇನ್ನು ಎಂಎಲ್‌ಸಿ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅಧಿಕಾರದಲ್ಲಿ ಇದ್ದಾಗ ಉತ್ತರ ಕರ್ನಾಟಕದ ಬಹಳಷ್ಟು ವಿಚಾರದ ಬಗ್ಗೆ ದ್ವನಿ ಎತ್ತಿದ್ದೆ. ಆದರೆ ನಮ್ಮ ಪಕ್ಷದಲ್ಲಿ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಇದು ನನಗೆ ಮಾಡಿದ ಅನ್ಯಾಯಕ್ಕಿಂತ ನಮ್ಮ ಉತ್ತರ ಕರ್ನಾಟಕಕ್ಕೆ ಮಾಡಿದ ಅನ್ಯಾಯ ಎಂದು ಸ್ಪಷ್ಟಪಡಿಸಿದರು.
 

click me!