ಕರ್ನಾಟಕದಲ್ಲಿ ಪ್ರವಾಹ ಬಂದಾಗ ಬಾರದ ಮೋದಿ, ಈಗ ಯೋಗ ಮಾಡಲು ಬಂದಿದ್ದಾರೆ- ಸಿದ್ದು

By Suvarna News  |  First Published Jun 20, 2022, 2:00 PM IST

ವಿಶ್ವ ಯೋಗಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸಕೈಗೊಂಡಿದ್ದು, ಇದಕ್ಕೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.


ಬೆಂಗಳೂರು, (ಜೂನ್.20): ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ(ಜೂನ್.20) ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ ಕೈಗೊಂಡದ್ದು, ವಿವಿಧ  ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅದರಂತೆ  ಪ್ರಧಾನಿ ನರೇಂದ್ರ ಮೋದಿ ಅವರು IAFನ ವಿಶೇಷ ವಿಮಾನದಲ್ಲಿಇಂದು (ಜೂನ 20) ಯಲಹಂಕ ವಾಯುನೆಲೆಗೆ ಆಗಮಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು. 

ಇನ್ನು ಪ್ರಧಾನಿ ಮೋದಿ ಕರ್ನಾಟಕ ಪ್ರವಾಸದ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ,  ರಾಜ್ಯದಲ್ಲಿ ಬಾರಿ ಪ್ರವಾಹ ಬಂದಾಗ  ಪ್ರಧಾನಿಯವರು ಇಲ್ಲಿಗೆ ಬರಲಿಲ್ಲ. ರಾಜ್ಯಕ್ಕೆ ವಿಶೇಷ ಅನುದಾನ ಕೊಡಲಿಲ್ಲ. ಈಗ ಅವರಿಗೆ ರಾಜ್ಯದ ನೆನಪಾಗಿದೆ ಎಂದು ಸಿದ್ದರಾಮಯ್ಯ ಅವರು ಟಾಂಗ್ ಕೊಟ್ಟರು.

Tap to resize

Latest Videos

ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಈಗ ಮೈಸೂರು ಬ್ಯಾಂಕ್ ಇದ್ಯಾ..?  ಕೆನರಾ, ಸಿಂಡಿಕೇಟ್,ವಿಜಯಾ ಬ್ಯಾಂಕ್ ಇದ್ಯಾ? ಈ ನಾಲ್ಕೂ ಬ್ಯಾಂಕುಗಳನ್ನ ಬೇರೆ ಬ್ಯಾಂಕ್ ಸೇರಿಸಿದ್ದಾರೆ. 317 ಕೋಟಿ ವಹಿವಾಟು ನಡೆಯುತ್ತೆ. 75 ಸಾವಿರ ಸಿಬ್ಬಂದಿಗಳು ಇಲ್ಲಿದ್ದಾರೆ. ಈ ನಾಲ್ಕು ಬ್ಯಾಂಕ್ ಕನ್ನಡಿಗರಿಗೆ ಕೆಲಸ ಕೊಡುತ್ತಿದ್ದವು. ಈಗ ಕನ್ನಡಿಗರಿಗೆ ಉದ್ಯೋಗ ಕೊಡುತ್ತಿಲ್ಲ. ಬೇರೆ ಬ್ಯಾಂಕ್ ಗಳು ದಿವಾಳಿಯಾಗಿದ್ದವು. ಅವುಗಳಿಗೆ ಈ ಬ್ಯಾಂಕ್ ಮರ್ಜ್ ಮಾಡಿದ್ದಾರೆ.. ಮರ್ಜ್ ಮಾಡೋದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಸಮಾರಂಭಕ್ಕೆ ಶುಭ ಹಾರೈಸಿದ ಸಿದ್ದರಾಮಯ್ಯ, ಆದ್ರೆ.....

ಕರ್ನಾಟಕಕ್ಕೆ ಮಾಡಿರುವ ದೊಡ್ಡ ಅನ್ಯಾಯ. ಈ ಅನ್ಯಾಯ ಮಾಡಿದ್ದು ಮಿಸ್ಟರ್ ನರೇಂದ್ರ ಮೋದಿ.  ಆಕ್ಸಿಜನ್ ಕೊಡೋಕೆ‌ ಆಗದವರು. ಈಗ ಯೋಗ ಮಾಡೋಕೆ ಬಂದಿದ್ದಾರೆ. ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಹೇಳಬೇಕು ಎಂದು ಆಗ್ರಹಿಸಿದರು.

40% ಕಮೀಷನ್ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಯಾಕೆ‌ ಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ. ಸಬರಬನ್ ಯೋಜನೆ ಹೇಳುತ್ತಲೇ ಬರ್ತಿದ್ದಾರೆ. ಅನಂತ್ ಕುಮಾರ್ ಕಾಲದಿಂದ ಹೇಳ್ತಿದ್ದಾರೆ. ಆದರೆ ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಅವರ ಸರ್ಕಾರ ಕರ್ನಾಟಕದಲ್ಲಿದೆ. ಲೂಟಿ ಹೊಡೆಯುತ್ತಿದೆ, ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ.? ಈ ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದು ಒತ್ತಾಯಿಸಿದರು.

ನಿರುದ್ಯೋಗದ ಬಗ್ಗೆ ಇಲ್ಲಿ‌ಮಾತನಾಡಲ್ಲ. ಈಗ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಲಿ. ನೀವು ಕೇಳಬೇಕು, ನಾನು‌ ಕೇಳ್ತೇನೆ.  ಕೋವಿಡ್ ವೇಳೆ ಆಕ್ಸಿಜನ್ ಕೊಟ್ರಾ?, ಹೈಕೋರ್ಟ್ ಹೇಳಿದ ಮೇಲೆ ಆಕ್ಸಿಜನ್ ಕೊಟ್ರು? ಹೈಕೋರ್ಟ್ ಹೇಳಿದ್ರೂ‌ ಆಕ್ಸಿಜನ್ ಕೊಟ್ಟಿರಲಿಲ್ಲ. ಸುಪ್ರೀಂಕೋರ್ಟ್ ಚಾಟಿ ಬೀಸಿದ ಮೇಲೆ ಕೊಟ್ರು, ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸವಿಗೀಡಾದರು. ಚಾಮರಾಜನಗರದಲ್ಲಿ 36 ಜನ ಸಾವನ್ನಪ್ಪಿದ್ರು. ರಾಜ್ಯದ ಬೇರೆಡೆಯೂ ಆಕ್ಸಿಜನ್ ಇಲ್ಲದೆ ಸತ್ರು, ಇದಕ್ಕೆಲ್ಲ ಯಾರು ಕಾರಣ ಇದೇ ಮೋದಿಯವರು ಎಂದು ಕಿಡಿಕಾರಿರು.

Photos ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಗ್ರ್ಯಾಂಡ್ ಎಂಟ್ರಿ

ತೆರಿಗೆ ಪಾಲು ರಾಜ್ಯಕ್ಕೆ ಕಡಿಮೆಯಾಗ್ತಿದೆ. ರಾಜ್ಯವೊಂದೇ ಕೇಂದ್ರಕ್ಕೆ 19 ಲಕ್ಷ ಕೋಟಿ ತೆರಿಗೆ ಹಣ ಕೊಟ್ಟಿದೆ. ಎಂಟು ವರ್ಷಗಳಲ್ಲಿ ಕೇಂದ್ರಕ್ಕೆ ಕೊಟ್ಟಿದೆ. 45 ಸಾವಿರ ಕೋಟಿ ಹಣ ಬರಬೇಕು, ಬಂದಿಲ್ಲ. ಕೇಂದ್ರ ಹಣಕಾಸು ಸಚಿವರು ನಮ್ಮರಾಜ್ಯದವರೇ. 15ಪೇ ಕಮೀಷನ್ ಹಣವನ್ನೂ ನೀಡಲಿಲ್ಲ. ರಾಜ್ಯಕ್ಕೆ ಬರುವ ಶೇ 1.07 ಹಣ ಕಡಿಮೆಯಾಯ್ತು. 15 ಪೇ ಕಮೀಷನ್ 5495 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ ಆ ಹಣವನ್ನ ಕೊಡಲಿಲ್ಲ. ಈಗ ಮೋದಿಯವರು ಬಂದಿದ್ದಾರಲ್ಲ ಹೇಳಬೇಕಲ್ಲ ಎಂದು ಹೇಳಿದರು.

ಕೇಂದ್ರದ ಅಗ್ನಿಪಥ್ ಯೋಜನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ನಾಲ್ಕು ವರ್ಷದವರೆಗೆ ಸೇರಿಸಿಕೊಳ್ತೇವೆ ಅಂತಾರೆ. ನಾಲ್ಕು ವರ್ಷದ ನಂತರ ಪಿಂಚಣಿ ಸಿಗಲ್ಲ. ಮುಂದೆ ನಮ್ಮ ಕಥೆ ಹೇಗೆ ಅಂತ ಅವರು ಕೇಳ್ತಿದ್ದಾರೆ. ದೇಶದ ಯುವಕರು ಕೇಳ್ತಿದ್ದಾರೆ. ಇವರು ಯೋಜನೆ ಬಗ್ಗೆ ಹಠ ಹಿಡಿದು ಕೂತಿದ್ದೇಕೆ. ನಾಲ್ಕು ವರ್ಷದ ನಂತರ ತೆಗೆದುಬಿಡ್ತಾರೆ. ಆ ನಂತರ ಅವರಿಗೆ ಕೆಲಸ ಕೊಡಲ್ಲ. ಸೇನೆಗೆ ಸೇರುವವರು ಏನು ಮಾಡಬೇಕು. ನಾಲ್ಕು ವರ್ಷ ಮಾತ್ರ ಕೊಡ್ತಾರೆ. 6 ತಿಂಗಳು ತರಬೇತಿಗೆ ಮುಗಿಯುತ್ತೆ, ಉಳಿಯೋದು ಮೂರುವರೆ ವರ್ಷ ಮಾತ್ರ. ಉದ್ಯೋಗಿಗಳು ಆಮೇಲೆ ಏನು ಮಾಡ್ಬೇಕು. ರಿಟೈರ್ಡ್ ಬೆನಿಫಿಟ್ ಏನೂ ಸಿಗಲ್ಲ, ಅದಕ್ಕೆ ಹಠ ಹಿಡಿಯೋದು ಯಾಕೆ, ಕೈಬಿಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.

ನಿರುದ್ಯೋಗ ಇನ್ನೂ‌ಹೆಚ್ಚುತ್ತಿದ್ದು, ಯುವಕರ ಹೋರಾಟಕ್ಕೆ ನಮ್ಮ‌ಬೆಂಬಲವಿದೆ. ಆದ್ರೆ, ಹಿಂಸಾತ್ಮಕ‌ಹೋರಾಟಕ್ಕೆ ನಮ್ಮ‌ಬೆಂಬಲವಿಲ್ಲ. ನ್ಯಾಯಯುತ ಹೋರಾಟಕ್ಕೆ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.

ಇವತ್ತು ಅಂಬೇಡ್ಕರ್ ವಿವಿ ಉದ್ಘಾಟನೆ ಮಾಡ್ತಿದ್ದಾರೆ. ಇದನ್ನ ಜಾರಿಗೆ ತಂದಿದ್ದು ನಾವು. ನಮ್ಮ ಅವಧಿಯಲ್ಲೇ ಜಮೀನು‌ಕೊಟ್ಟು ತಂದಿದ್ದು. ಈಗ ಅದನ್ನ ಉದ್ಘಾಟನೆ ಮಾಡ್ತಿದ್ದಾರೆ ಎಂದು ಮೋದಿ ಕಾಲೆಳೆದರು.

ಮೈಸೂರು ಬೆಂಗಳೂರು ಅಷ್ಟಪಥದ ರಸ್ತೆ ಮಾಡಿದ್ದು ಯಾರು? ನಾನು ನಾನು ಅಂತ ಪ್ರತಾಪ್ ಸಿಂಹ ಓಡಾಡ್ತಿದ್ದಾರೆ. ಪ್ರಾಜೆಕ್ಟ್ ಅಪ್ರೂವ್ ಮಾಡಿದ್ದು ಆಸ್ಕರ್ ಫರ್ನಾಂಡಿಸ್. ಮಹದೇವಪ್ಪ ಕಾಳಜಿಯಿಂದ ರಸ್ತೆ ಆಗ್ತಿದೆ. ಈಗ ಪ್ರತಾಪ್ ಸಿಂಹ ನನ್ನದು ಅಂತ ಓಡಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

click me!