ಸಿದ್ದರಾಮಯ್ಯ ಗೇಮ್ ಪ್ಲಾನ್ ಚೇಂಜ್: ಎಲ್ಲಾ ಊಹಾಪೋಹಗಳಿಗೆ ತೆರೆ

By Suvarna NewsFirst Published Feb 13, 2021, 9:49 PM IST
Highlights

ಸಿದ್ದರಾಮಯ್ಯ ಮತ್ತೆ ಅಹಿಂದ ಸಮಾವೇಶಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿತ್ತು. ಅಲ್ಲದೇ ಬಿಜೆಗೆ ನಡುಕ ಹುಟ್ಟಿಸಿದ್ದಾರೆ. ಆದ್ರೆ, ಇದೀಗ ಸಿದ್ದು ಗೇಮ್ ಪ್ಲಾನ್ ಚೇಂಜ್ ಆಗಿದೆ.

ಮಂಡ್ಯ, (ಫೆ.13): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶವನ್ನು ಕೈಬಿಟ್ಟಿದ್ದು, ಅದರ ಬದಲಾಗಿ ಬೇರೆ ಪ್ಲಾನ್ ಮಾಡಿಕೊಂಡಿದ್ದಾರೆ.

ಅಹಿಂದ ಸಮಾವೇಶದ ಬದಲಾಗಿ ಕಾಂಗ್ರೆಸ್ ಸಮಾವೇಶ ಮಾಡುವುದಾಗಿ ಸ್ವತಃ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಹೌದು... ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಾನೆಂದೂ ಎಲ್ಲಿಯೂ ಸಹ ಅಹಿಂದ ಸಮಾವೇಶ ಮಾಡುತ್ತೇನೆ ಎಂದು ಹೇಳಿಲ್ಲ. ನನಗೆ ಅಹಿಂದ ಸಮಾವೇಶದ ಅವಶ್ಯಕತೆ ಇಲ್ಲ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವೇ ಅಹಿಂದ ಪರ ಇದೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ‘ಹಿಂದ’ ಹೋರಾಟ, ಮಾರ್ಚ್ ಅಂತ್ಯಕ್ಕೆ ಬೃಹತ್‌ ಸಮಾವೇಶ!

ಕಾಂಗ್ರಸ್ ಪಕ್ಷ ಸಹ ಅದಕ್ಕೆ ಬದ್ಧವಾಗಿ ಅಹಿಂದ ಪರ ಇದೆ. ಕೆಲವರಿಗೆ ನನ್ನ ಬಗ್ಗೆ ಭಯವಿದೆ, ಆ ಭಯಕ್ಕಾಗಿ ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡುತ್ತಾರೆ ಎಂದು ಕಲ್ಪಿಸಿಕೊಂಡು ಹೇಳುತ್ತಾರೆ. ನಾನು ಅಹಿಂದ ಸಮಾವೇಶದ ಬದಲು ರಾಜ್ಯಾದ್ಯಂತ ಕಾಂಗ್ರೆಸ್ ಸಮಾವೇಶ ಮಾಡುವೆ ಎಂದು ಹೇಳಿದರು. 

ಮಾರ್ಚ್ ಅಂತ್ಯಕ್ಕೆ ಅಹಿಂದ ಬೃಹತ್‌ ಸಮಾವೇಶ ಮಾಡುವ ಸಂಬಂಧ ಸಿದ್ದರಾಮಯ್ಯ ಅವರು ಎಚ್‌.ಸಿ. ಮಹಾದೇವಪ್ಪ ಅವರನ್ನ ಭೇಟಿ ಮಾಡಿದ್ದಾರೆ ಎನ್ನಲಾಗಿತ್ತು. ಸಿದ್ದರಾಮಯ್ಯನವರ ಅಹಿಂದ ನಡೆಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲವ ಮೂಡಿಸಿತ್ತು. ಅಷ್ಟೇ ಅಲ್ಲದೇ ಕೆಲವರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

click me!