ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶದ ಗೊಂದಲ ಹೊಸ ತಿರುವು ಪಡೆದುಕೊಂಡಿದೆ. ಆಷ್ಟಕ್ಕೂ ಆಗಿದ್ದೇನು..?
ಬೆಂಗಳೂರು, (ಫೆ.13): ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಮತ್ತೇ ಗೊಂದಲಕ್ಕೆ ಕಾರಣಗಿದೆ. ಅಪಮೌಲ್ಯಗೊಂಡ ಸುಮಾರು 48 ಸಾವಿರ ಮತಗಳ ಸಂಬಂಧ ಮರು ಎಣಿಕೆ ಕೈಗೊಳ್ಳಲು ಹೈಕಮಾಂಡ್ ಸೂಚಿಸಿದೆ.
ಈ ಪ್ರಕ್ರಿಯೆ ಫೆಬ್ರವರಿ 20, 21ರಂದು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಗಳಿವೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸಿದ್ದ ಮೊಹಮ್ಮದ್ ನಲಪಾಡ್ ಅನರ್ಹಗೊಂಡಿದ್ದರು.
ಕಾಂಗ್ರೆಸ್ ಗೊಂದಲ ದಿಲ್ಲಿಗೆ ಶಿಫ್ಟ್
ನಂತರದ ಸ್ಥಾನ ಗಳಿಸಿದ್ದ ರಕ್ಷಾ ರಾಮಯ್ಯ ಅವರನ್ನು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ಈ ವಿಚಾರದಲ್ಲೂ ಹಗ್ಗಜಗ್ಗಾಟ ಮುಂದುವರಿದಿದೆ. ಎರಡೂ ಬಣದವರು ದಿಲ್ಲಿಗೆ ದೂರು ಕೊಂಡೊಯ್ದಿದ್ದಾರೆ.
ಇದರ ಮಧ್ಯೆ ಅಪಮೌಲ್ಯಗೊಂಡ ಮತಗಳ ಬಗ್ಗೆ ಮರು ಎಣಿಕೆಗೆ ಒತ್ತಡ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಕೈಗೊಳ್ಳುವಂತೆ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದು ಬಂದಿದೆ. ಇದರಿಂದ ಮುಂದೆ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.