RR ನಗರದಲ್ಲಿ JDS-BJP ಹೊಂದಾಣಿಕೆ? ಜೊತೆಗೆ ಗಂಭೀರ ಅನುಮಾನ

By Kannadaprabha News  |  First Published Nov 11, 2020, 8:23 AM IST

ಆರ್‌ ಆರ್‌ ನಗರದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿತ್ತೆನ್ನಲಾಗಿದ್ದು ಇದೀಗ ಜೊತೆಗೆ ಮತ್ತೊಂದು ಅನುಮಾನವೂ ವ್ಯಕ್ತವಾಗಿದೆ


ಬಾಗಲಕೋಟೆ/ಬೆಂಗಳೂರು (ನ.11):   ಆರ್‌.ಆರ್‌.ನಗರ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಆಗಿರುವಂತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಂಕೆ ವ್ಯಕ್ತಪಡಿಸಿದ್ದಾರೆ. 

ಆರ್‌.ಆರ್‌.ನಗರದಲ್ಲಿ ಜೆಡಿಎಸ್‌ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು, ಅಲ್ಲಿ ಜೆಡಿಎಸ್‌ ಹೆಚ್ಚಿನ ಮತಗಳನ್ನೇ ಪಡೆದಿಲ್ಲ, ಡಿಪಾಸಿಟ್‌ ಕೂಡ ಕಳೆದುಕೊಂಡಿದೆ. ಕುಮಾರಸ್ವಾಮಿಗೆ ಬಿಜೆಪಿ ಗೆಲ್ಲಬೇಕಿತ್ತು. ಹಾಗಾಗಿ ಉಪ ಚುನಾವಣೆ ವೇಳೆ ನನ್ನನ್ನು ಟಾರ್ಗೆಟ್‌ ಮಾಡಿದ್ದರು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Tap to resize

Latest Videos

undefined

ಇವಿಎಂ ಮೇಲೆ ಸಿದ್ದು ಪರೋಕ್ಷ ಅನುಮಾನ!

ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್‌ ಪರ ಸಮೀಕ್ಷೆಗಳು ಬಂದಿದ್ದವು. ಎಲ್ಲೂ ಎನ್‌ಡಿಎ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿರಲಿಲ್ಲ. ಆರಂಭಿಕ ಹಂತದಲ್ಲಿ 40 ಸ್ಥಾನಗಳಲ್ಲಿ ಮಹಾಗಠಬಂಧನ್‌ ಮುಂದಿತ್ತು. ಆದರೆ ನಂತರ ಮಹಾಗಠಬಂಧನ್‌ ಹಿಂದೆ ಬಿತ್ತು.

ಉಪಕದನ ಸೋಲಿನ ಹಿಂದೆ ಕೈ ನಾಯಕರದ್ದೇ ಪ್ಲಾನ್ ಇದೆಯಾ..? ...

ಇದು ತೀವ್ರ ಅನುಮಾನಕ್ಕೆ ಕಾರಣವಾಗಿದೆ ಎಂದು ಪರೋಕ್ಷವಾಗಿ ಇವಿಎಂ(ಮತಯಂತ್ರ) ಮೇಲೆ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದರು.

click me!