Karnataka Politics: ಕಲಬುರಗಿ ಸಂಸದ ಜಾಧವ್‌ ವಿರುದ್ಧ ಶರಣಪ್ರಕಾಶ ವಾಗ್ದಾಳಿ

By Kannadaprabha NewsFirst Published Dec 12, 2021, 2:32 PM IST
Highlights

*   ಬರೀ ದೆಹಲಿಗೆ ಹೋಗಿ ಮನವಿ ಪತ್ರ ಕೊಡೋದು ಬಿಟ್ಟು ಬೇರೇನೂ ಮಾಡ್ತಿಲ್ಲ 
*  ಇಡೀ ದೇಶದಲ್ಲೇ ಪಕ್ಷ ಹೋಳಾದಾಗ ಹಣದ ವ್ಯವಹಾರ ನಡೆಯುತ್ತದೆಯೆ? 
*  ಮೋದಿ ರಾಜಕೀಯ ಮಾಡಲೆಂದು ಕಲಬುರಗಿ ಯೋಜನೆಗಳನ್ನು ರದ್ದು ಮಾಡುತ್ತಿದ್ದಾರೆ
 

ಕಲಬುರಗಿ(ಡಿ.12):  ಕಲಬುರಗಿ(Kalaburagi) ಬಿಜೆಪಿ ಸಂಸದ ಡಾ. ಉಮೇಶ ಜಾಧವ(Umesh Jadhav) ಹಾಗೂ ಕಾಂಗ್ರೆಸ್‌(Congress) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಕಳೆದೊಂದು ವಾರದಿಂದ ಸಾಗಿರುವ ಈ ಸಮರ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಲಿಲ್ಲ. ನಿನ್ನೆಯಷ್ಟೇ ಕೆಪಿಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ(Priyank Kharge) ತಮ್ಮ ಟ್ವೀಟರ್‌ನಲ್ಲಿ ಸಂಸದರ ವಿರುದ್ಧ ಹೇಳಿಕೆ ನೀಡುತ್ತ ಪಂಚ ಪ್ರಶ್ನೆ ಕೇಳಿ ಮುಜುಗರಕ್ಕೆ ಸಿಲುಕಿಸುವ ಯತ್ನ ಮಾಡಿದ್ದರು. ಇದೀಗ ಡಾ. ಶರಣ ಪ್ರಕಾಶ ಪಾಟೀಲ್‌(Dr Sharanprakash Patil) ಸಹ ಡಾ. ಉಮೇಶ ಜಾಧವ್‌ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಸಂಸದರು ಹೇಗೆ ವರ್ತಿಸಬೇಕು ಎಂಬುದು ಗೊತ್ತಿಲ್ಲದಂತಿದ್ದಾರೆ. ಬರೀ ದೆಹಲಿಗೆ ಹೋಗಿ ಮನವಿ ಪತ್ರ ಕೊಡೋದು ಬಿಟ್ಟು ಬೇರೇನೂ ಮಾಡುತ್ತಿಲ್ಲ. ಮನವಿ ಪತ್ರ ಕೊಟ್ರೆ ಕೆಲ್ಸ ಆಗ್ತಾವಾ? ತಮ್ಮನ್ನು ಆರಿಸಿ ಕಳುಹಿಸಿದ ಜನರಿಗೆ ಡಾ. ಜಾಧವ್‌ ಮನವಿ ಪತ್ರ ಕೊಡುವ ಎಂಪಿ ಆಗಿದ್ದಾರೆ ಗೇಲಿ ಮಾಡಿದ್ದಾರೆ.

Karnataka Politics: ಬಿಜೆಪಿ ಸಂಸದ ಜಾಧವ್‌ಗೆ 2 ನಾಲಿಗೆ: ಪ್ರಿಯಾಂಕ್‌ ವಾಗ್ದಾಳಿ

ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶರಣಪ್ರಕಾಶ ಪಾಟೀಲ್‌ ರೇಲ್ವೆ ವಿಭಾಗೀಯ ಕಚೇರಿ(Railway Divisional Office) ಯೋಜನೆ ಬಜೆಟ್‌ನಲ್ಲಿ(Budget) ಮಂಜೂರಾಗಿತ್ತು, ಕೈ ಬಿಟ್ಟು ಹೋಯ್ತು. ಟೆಕ್ಸ್‌ಟೈಲ್‌ ಪಾರ್ಕ್(Textile Park) ಹೋಯ್ತು, ಔಟರ್‌ ರಿಂಗ್‌ ರಸ್ತೆ ಹೋಯ್ತು, ಕಾಂಗ್ರೆಸ್‌ ಮಂಜೂರು ಮಾಡಿದ್ದ ಎಲ್ಲಾ ಯೋಜನೆ ಕೈಬಿಟ್ಟು ಹೋಗುತ್ತಿದ್ದರೂ ಸಂಸದರು ತಮ್ಮ ಪ್ರಭಾವ ಬಳಸಿ ಯಾವುದನ್ನೂ ಮರಳಿ ತರುವ, ಇಲ್ಲೇ ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ಸುಮ್ಮನೆ ಎಲ್ಲದಕ್ಕೂ ಮನವಿ ಪತ್ರ ಕೊಡುತ್ತ ಮನವಿ ಕೋರುವ ಸಂಸದರೇ ಆಗಿದ್ದಾರೆಂದು ಲೇವಡಿ ಮಾಡಿದರು.

ಡಾ. ಮಲ್ಲಿಕಾರ್ಜುನ ಖರ್ಗೆಯವರ(Dr Mallikarjun Kharge) ಬಗ್ಗೆ ಟೀಕಿಸಲು ಅವರಲ್ಲಿ ನೈತಿಕತೆಯೇ ಇಲ್ಲ. ಡಾ. ಖರ್ಗೆ ಇಂದಿರಾಜಿ ಕಾಲದಲ್ಲಿ ನಡೆ ಪಕ್ಷದ ಇಬ್ಭಾಗದಲ್ಲಿ ಅರಸು ಜೊತೆಗಿದ್ದರು. ಹಾಗಿರುವಾಗ ಅವರೆಷ್ಟು ಹಣ ಪಡೆದಿದ್ದಾರೆಂದು ಸಂಸದರು ಪ್ರಶ್ನಿಸಿದ್ದಾರೆ. ಇದು ಉದ್ಧಟತನದ ಪರಮಾವಧಿ. ಇವರಿಗೆ ಯಾವ ಸಂದರ್ಭ ಏನು, ಎತ್ತ ಯಾವುದೂ ಗೊತ್ತಿಲ್ಲ. ಇಡೀ ದೇಶದಲ್ಲೇ ಪಕ್ಷ ಹೋಳಾದಾಗ ಹಣದ ವ್ಯವಹಾರ ನಡೆಯುತ್ತದೆಯೆ? ಹಿಂದೆಲ್ಲಾ ಈಗಿನಂತೆ ಬಿಜೆಪಿಯವರು(BJP) ಕಲಿಸಿರುವ ಆಪರೇಷನ್‌ ರಾಜಕೀಯದಲ್ಲಿ(Operation Politics) ಇತ್ತೆ? ಡಾ. ಉಮೇಶ ಜಾಧವ್‌ ಶಾಸಕರಾಗಿ ಕಾಂಗ್ರೆಸ್‌ನಲ್ಲಿದ್ದು ಕಮಲಕ್ಕೆ ಜಂಪ್‌ ಮಡುವಾಗ ಸೇಲಾಗಿದ್ದಾರೆಂದು ಎಲ್ಲರೂ ಆಡಿಕೊಳ್ಳುತ್ತಾರೆ. ಮಾಧ್ಯಮದವರೂ ತೋರಿಸಿದ್ದೀರಿ, ಬರೆದಿದ್ದೀರಿ. ಅದನ್ನೇ ನಾವೂ ಹೇಳುತ್ತಿದ್ದೇವೆ. ವಾಸ್ತವ ಸಂಗತಿ ಒಪ್ಪಿ ಸುಮ್ಮನಿರಬೇಕೇ ವಿನಹಃ ಅನ್ಯರತ್ತ ಬೆರಳು ತೋರಿಸೋ ಕೆಲಸ ಬೇಡ ಎಂದು ಸಂಸದರಿಗೆ ಕಿವಿಮಾತು ಹೇಳಿದರು.

ಡಾ. ಉಮೇಶ ಜಾಧವರಿಗೆ ಕಾಂಗ್ರೆಸ್‌ಗೆ ಕರೆತಂದು ಪಕ್ಷದ ಟಿಕೆಟ್‌ ಕೊಟ್ಟು ಶಾಸಕ ಸ್ಥಾನದಲ್ಲಿ ನಿಲ್ಲಿಸಿ ಗೆಲ್ಲಿಸಿದ್ದೆ ಪಕ್ಷದ ಘೋರ ಅಪರಾಧವೆಂದು ಹೇಳಿದ ಡಾ. ಶರಣಪ್ರಕಾಶ ಪಾಟೀಲ್‌, ಇಂತಹ ಸರಕಾರಿ ಉದ್ಯೋಗಿ ರಾಜಕೀಯದಲ್ಲಿ ಬಂದರೆ ಅವರಿಂದ ಹೆಚ್ಚಿಗೆ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯ? ಎಂದರು.

MLC Election: ರಾಜಕಾರಣದಲ್ಲಿ ಬಾಂಬ್ ಸಿಡಿಸಿದ ಲಕ್ಷ್ಮೀ, ಖರ್ಗೆಗೆ ಬಿಜೆಪಿ ಟ್ವೀಟ್ ಬಾಣ

ಡಾ. ಜಾಧವ್‌ ರಾಜೀನಾಮೆ ಕಾರ್ಮಿಕ ಇಲಾಖೆ ಅಂಗೀಕರಿಸುವಲ್ಲಿ ವಿಳಂಬ ಮಾಡುತ್ತಿತ್ತು. ಆಗ ಖರ್ಗೆಯವರೇ ಕಾರ್ಮಿಕ ಸಚಿವರಾಗಿದ್ದರು. ತಕ್ಷಣ ರಾಜೀನಾಮೆ ಅಂಗೀಕಾರಕ್ಕೆ ಹೇಳಿದ್ದರು. ಹೀಗೆ ಡಾ. ಖರ್ಗೆ ಅವರೇ ಇವರ ರಾಜೀನಾಮೆ ಅಂಗೀಕರಿಸುವಂತೆ ಹೇಳಿ ಇವರಿಗೆ ಅನುಕೂಲ ಮಾಡಿಕೊಟ್ಟರೂ ಅದನ್ನೆಲ್ಲ ಮರೆತು ಡಾ. ಜಾಧವ್‌ ಉಪಕಾರ ಮಾಡಿದವರಿಗೆ ಅಪಕಾರ ಮಾಡಿದ್ದಾರೆಂದು ಜರಿದರು.

ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್‌ ಮಾತನಾಡಿ, ಡಾ. ಖರ್ಗೆಯವರ ಸಾಧನೆ ಎಲ್ಲರಿಗೂ ಗೊತ್ತಿದೆ. ಪ್ರಧಾನಿ ನೇರಂದ್ರ ಮೋದಿ(Narendra Modi) ರಾಜಕೀಯ ಮಾಡಲೆಂದು ಕಲಬುರಗಿ ಯೋಜನೆಗಳನ್ನು ರದ್ದು ಮಾಡುತ್ತಿದ್ದಾರೆ. ಇದು ಗೊತ್ತಿದ್ದರೂ ಡಾ. ಜಾಧವ್‌ ಸುಮ್ಮನಿದ್ದಾರೆ. ಬರೀ ಮನವಿ ಕೊಡೋದರಿಂದ ಕೈಬಿಟ್ಟಯೋಜನೆ ಮರಳೋದಿಲ್ಲ. ಸಂಸತ್‌ನಲ್ಲಿ ಮಾತನಾಡಿ ಯೋಜನೆ ಇಲ್ಲಿಗೆ ತರಲಿ, ಆಗೋದಿಲ್ಲವೆಂದರೆ ಸುಮ್ಮನಿರಲಿ, ಕಾಂಗ್ರೆಸ್‌ ರಾಷ್ಟ್ರೀಯ ನಾಯಕರಿಗೆ ವಿನಾಕಾರಣ ಟೀಕೆ ಮಾಡೋದು ಸರಿಯಲ್ಲ ಎಂದರು. ಜಿಲ್ಲಾ ಕಾಂಗ್ರೆಸ್‌ ಅದ್ಯಕ್ಷ ಜಗದೇವ ಗುತ್ತೇದಾರ್‌, ಮಾಜಿ ಎಂಎಲ್‌ಸಿ ತಿಪ್ಪಣ್ಣ ಕಮಕನೂರ್‌, ಮಹಾಂತೇಶ ಕೌಲಗಿ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಸುದ್ದಿಗೋಷ್ಠಿಯಲ್ಲಿದ್ದರು.
 

click me!